ನವದೆಹಲಿ: ‘ಚಂದ್ರಯಾನ 2’ ಇಸ್ರೊ ಕನಸಿನ ಅಂತ್ಯವಲ್ಲ. ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಮತ್ತೆ ‘ಸಾಫ್ಟ್ ಲ್ಯಾಂಡಿಗ್’ಗೆ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ಶನಿವಾರ ಹೇಳಿದರು.

ಐಐಟಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ 50ನೇ ವರ್ಷದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಚಂದ್ರಯಾನ 2‘ ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವ ಮೇಲೆ ಸಾಫ್ಟ್ ಲ್ಯಾಂಡಿಂಗ್ (ನಿಧಾನವಾಗಿ ಲ್ಯಾಂಡರ್ ಅನ್ನು ಇಳಿಸುವ ಪ್ರಕ್ರಿಯೆ) ಮಾಡುವಲ್ಲಿ ಇಸ್ರೊ ವಿಫಲವಾಗಿರಬಹುದು. ಆದರೆ ಚಂದ್ರನ ಮೇಲ್ಮೈಗಿಂತ 300 ಮೀಟರ್ ಎತ್ತರದವರೆಗೂ ಲ್ಯಾಂಡರ್ ಕಾರ್ಯನಿರ್ವಹಿಸಿದೆ. ಭವಿಷ್ಯದಲ್ಲಿ ಈ ಯೋಜನೆ ಯಶಸ್ವಿಗೊಳಿಸಲು ಅಗತ್ಯವಿರುವ ಎಲ್ಲ ಮೌಲ್ಯಯುತವಾದ ದತ್ತಾಂಶಗಳು ಸಂಗ್ರಹವಾಗಿವೆ. ಇವುಗಳನ್ನು ಬಳಸಿಕೊಂಡು ಮತ್ತೆ ಸಾಫ್ಟ್ ಲ್ಯಾಂಡಿಂಗ್‌ಗೆ ಇಸ್ರೊ ಪ್ರಯತ್ನಿಸಲಿದೆ’ ಎಂದರು.

ಹಲವು ಯೋಜನೆಗಳಿಗೆ ಸಿದ್ಧತೆ: ಪ್ರಸ್ತುತ ಆದಿತ್ಯ ಎಲ್1 ಸೌರ ಯೋಜನೆ, ಮಾನವಸಹಿತ ಗಗನಯಾನ ಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕ ಉಪಗ್ರಹಗಳ ಉಡಾವಣೆಗೆ ಇಸ್ರೊ ಸಜ್ಜಾಗಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಎಸ್‌ಎಸ್‌ಎಲ್‌ವಿ ಉಡಾವಣೆ ಪರೀಕ್ಷೆ ನಡೆಯಲಿದೆ. ಶೀಘ್ರದಲ್ಲೇ 200 ಟನ್ ಸೆಮಿ–ಕ್ರಯೊ ಎಂಜಿನ್ ಪರೀಕ್ಷೆ ಆರಂಭವಾಗಲಿದೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕೋಶ (ಎಸ್‌ಟಿಸಿ) ರಚಿಸುವ ಸಂಬಂಧ ಇಸ್ರೊ–ಐಐಟಿ ದೆಹಲಿ ಒಪ್ಪಂದ ಮಾಡಿಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.