ಬೆಂಗಳೂರು: ಸೌರಮಂಡಲದ ಬಗ್ಗೆ ವಿಜ್ಞಾನಿಗಳು ಸಾಕಷ್ಟು ಅಧ್ಯಯನ ನಡೆಸುತ್ತಿದ್ದರೂ ಅದು ಮುಗಿಯದ ಕುತೂಹಲ. ಅದರಲ್ಲೂ ಆಕಾಶಕಾಯಗಳಾದ ಕ್ಷುದ್ರಗ್ರಹಗಳು ಸೌರಮಂಡಲ ರಚನೆ ಕುರಿತು ತಮ್ಮಲ್ಲಿ ಅನೇಕ ರಹಸ್ಯಗಳನ್ನು ಇಟ್ಟುಕೊಂಡಿವೆ.

ಈಗಾಗಲೇ ಇವುಗಳಬಗ್ಗೆ ವಿಜ್ಞಾನಿಗಳು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಆದರೆ, ಅತಿಹೆಚ್ಚು ಕ್ಷುದ್ರಗ್ರಹಗಳು ಇರುವುದು ಗುರುಗ್ರಹಕ್ಕೆ ತಾಗಿಕೊಂಡು. ಮಂಗಳ ಹಾಗೂ ಗುರುವಿನ ನಡುವಿನ ವಲಯದಲ್ಲಿ. ಇವುಗಳ ಮೇಲೆ ವಿಶೇಷ ಕಣ್ಣು ಹಾಯಿಸಿರುವ ನಾಸಾ ಹೊಸ ನೌಕೆಯೊಂದನ್ನು ಕಳಿಸುತ್ತಿದೆ.

ಸೌರ ಮಂಡಲದ ಅನ್ಷೇಷಣೆಗಾಗಿ ಹಾಗೂ ಗುರುಗ್ರಹದಟ್ರೋಜನ್ ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಲೂಸಿ ಎಂಬ ನೌಕೆಯನ್ನು ಕಳಿಸುತ್ತಿದೆ. ಕೇಪ್ ಕ್ಯಾನ್‌ವೆರಲ್‌ನಿಂದ ಲೂಸಿ ಅಟ್ಲಾಸ್ 5 ರಾಕೆಟ್ ಮೂಲಕ ಶನಿವಾರ ಬೆಳಿಗ್ಗೆ ನಭಕ್ಕೆ ಚಿಮ್ಮಲಿದೆ.

ಲೂಸಿಯು ಸೌರಶಕ್ತಿಚಾಲಿತ ಬಾಹ್ಯಾಕಾಶ ನೌಕೆಯಾಗಿದ್ದು, ಈ ಹಿಂದಿನ ಎಲ್ಲ ಅಧ್ಯಯನಗಳಿಗಿಂತಲೂ ಹೆಚ್ಚು ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

‘ಪ್ರತಿಯೊಂದು ಕ್ಷುದ್ರಗ್ರಹಗಳು ಸೌರಮಂಡಲದ ಕಥೆಯ ಒಂದೊಂದು ಭಾಗವನ್ನು ಒದಗಿಸುತ್ತವೆ. ಈಗ ಲೂಸಿ ಹೆಚ್ಚಿನ ನಿಖರ ಮಾಹಿತಿ ನೀಡಲು ಸಿದ್ದವಾಗಿ ಹೋರಟಿದೆ’ ಎಂದು ನಾಸಾದಸಹಾಯಕ ಆಡಳಿತಾಧಿಕಾರಿ ಥಾಮಸ್ ಜುರ್ಬುಚೆನ್ ಅವರು ತಿಳಿಸಿದ್ದಾರೆ.

ಈ ಲೂಸಿಯು 2025 ರಲ್ಲಿ ಮೊದಲ ಬಾರಿಗೆ ಮಂಗಳ ಹಾಗೂ ಗುರುವಿನ ನಡುವಿನ ವಲಯದಲ್ಲಿರುವಡೊನಾಲ್ಡ್ ಜೋಹಾನ್ಸನ್ ಎಂಬ ಟ್ರೋಜನ್ ಕ್ಷುದ್ರಗ್ರಹವನ್ನುಭೇಟಿಯಾಗಲಿದೆ. 2027 ರಿಂದ 2033 ರವರೆಗೆ ಲೂಸಿ ಒಟ್ಟು 7 ಟ್ರೋಜನ್ ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲಿದೆ. ಇದು 12 ವರ್ಷ ಕಾರ್ಯಾಚರಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಒಂದೊಂದು ಕ್ಷುದ್ರಗ್ರಹಗಳನ್ನು ತಲುಪಿದಾಗ ಲೂಸಿಯಯ ಸುಮಾರ 400 ಕಿಲೋ ಮೀಟರ್ ಮೇಲ್ಮೈನಲ್ಲಿ ಅವುಗಳ ಬಗ್ಗೆ ಅಧ್ಯಯನ ನಡೆಸಲಿದೆ.

ಶನಿ, ಯುರೇನಸ್, ನೆಪ್ಚೋನ್ ರಚನೆಯಿಂದ ಉಳಿದಿರುವ ಕಚ್ಚಾವಸ್ತುಗಳೇ ಈ ಕ್ಷುದ್ರಗ್ರಹಗಳು ಎಂದು ನಂಬಲಾಗಿದೆ. ಗುರು ಗ್ರಹಕ್ಕೆ ಅಂಟಿಕೊಂಡು ಸುಮಾರು 7000 ಟ್ರೋಜನ್ ಕ್ರುದ್ರಗ್ರಹಗಳಿವೆ ಎಂದು ಹೇಳಲಾಗಿದೆ. ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

‘ಟ್ರೋಜನ್‌ಗಳು ನಿಜವಾಗಿಯೂ ಆಶ್ಚರ್ಯಕರವಾಗಿವೆ. ಅವುಗಳು ಕೆಲವು ಕೆಂಪು ಬಣ್ಣದಲ್ಲಿದ್ದರೆ, ಇನ್ನೂ ಕೆಲವು ಬೂದು ಬಣ್ಣದಲ್ಲಿವೆ’ಎಂದುಥಾಮಸ್ ಜುರ್ಬುಚೆನ್ ಹೇಳಿದ್ದಾರೆ.

1974 ರಲ್ಲಿ ಇಥಿಯೋಪಿಯಾದಲ್ಲಿ ಆದಿಮಾನವನ ಪಳಿಯುಳಿಕೆ ದೊರಕಿತ್ತು. ಅದು ಮಾನವನ ವಿಕಾಸದ ಮೇಲೆ ಬೆಳಕು ಚೆಲ್ಲಲು ಪ್ರಮುಖ ಮೂಲವಾಗಿತ್ತು. ಅದಕ್ಕೆ ಲೂಸಿ ಎಂದು ಹೆಸರಿಡಲಾಗಿತ್ತು. ಇದರ ಸ್ಮರಣಾರ್ಥವೇ ಇದೀಗ ಕ್ಷುದ್ರಗ್ರಹಗಳ ಅಧ್ಯಯನ ಮಾಡಲು ತೆರಳುತ್ತಿರುವ ನೌಕೆಗೆ ನಾಸಾ ಲೂಸಿ ಎಂದು ಹೆಸರಿಟ್ಟಿದೆ.

ಇದನ್ನೂ ಓದಿ:ಜಾಗತಿಕ ತಾಪಮಾನ ಹೆಚ್ಚಳ ಮಹಾ ವಿಪ್ಲವದ ಸಂಕೇತ ಎಂದ ವಿಶ್ವಸಂಸ್ಥೆ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.