‘ಸಿಕಲ್ ಸೆಲ್ ಅನೀಮಿಯಾ’ ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ, ಕರ್ನಾಟಕದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ವ್ಯಾಪಕವಾಗಿ ತೋರಿ ಬರುವ ಕಾಯಿಲೆ. ಹುಟ್ಟಾ ಬರುವ ಈ ಕಾಯಿಲೆಯು ಮಕ್ಕಳು ದೊಡ್ಡವರಾಗುವಷ್ಟರಲ್ಲಿ ಅವರನ್ನು ನಿತ್ರಾಣರನ್ನಾಗಿ ಮಾಡಿಬಿಡುತ್ತದೆ. ಕರ್ನಾಟಕದ ಸೋಲಿಗ ಜನಾಂಗದವರನ್ನು ಸರ್ವೇ ಸಾಮಾನ್ಯವಾಗಿ ಕಾಡುವ ಈ ಆನುವಂಶೀಯ ಕಾಯಿಲೆಯನ್ನು ಗುಣಪಡಿಸಬಲ್ಲ ಹೊಸದೊಂದು ಗುಳಿಗೆ ಸಿದ್ಧವಾಗಿದೆಯಂತೆ. ಅಮೆರಿಕೆಯ ‘ನೋವಾರ್ಟಿಸ್’ ಔಷಧ ಕಂಪೆನಿಯ ವಿಜ್ಞಾನಿ ಜೇಮ್ಸ್ ಬ್ರಾಡ್ನರ್ ಮತ್ತು ಸಂಗಡಿಗರು ಸಿದ್ಧಪಡಿಸಿರುವ ಔಷಧವೊಂದು ಇಂತಹ ರೋಗಿಗಳಲ್ಲಿ ಕಡಿಮೆ ಆಗಿ ತಯಾರಾಗುವ ‘ಫೀಟಲ್ ಹೀಮೋಗ್ಲೋಬಿನ್’ ಎನ್ನುವ ಅಂಶವು ತಯಾರಾಗುವಂತೆ ಪ್ರಚೋದಿಸುತ್ತದೆಯಂತೆ.

‘ಸಿಕಲ್ ಸೆಲ್ ಅನೀಮಿಯಾ’ ಕಾಯಿಲೆ ಇರುವವರಲ್ಲಿ ದೇಹದ ವಿವಿಧ ಅಂಗಗಳಿಗೆ ಆಮ್ಲಜನಕವನ್ನು ಪೂರೈಸುವ ವ್ಯವಸ್ಥೆ ಕುಂದಿರುತ್ತದೆ. ಇದಕ್ಕೆ ಕಾರಣ ಇವರ ರಕ್ತದಲ್ಲಿರುವ ಹೀಮೊಗ್ಲೋಬಿನ್ ಅಂಶ. ಇದು ದೋಷಪೂರ್ಣ ಹೀಮೊಗ್ಲೋಬಿನ್. ದೇಹದ ಮೂಲೆ ಮೂಲೆಗೂ ಆಮ್ಲಜನಕವನ್ನು ಹೊತ್ತೊಯ್ಯುವ ಹೊಣೆ ಹೀಮೊಗ್ಲೋಬಿನ್ನಿಗೆ ಇದೆ. ಇದು ದೋಷಪೂರ್ಣವಾದರೆ, ರಕ್ತದಲ್ಲಿರುವ ಕೆಂಫು ರಕ್ತಕಣಗಳು ಆಕಾರಗೆಡುವುದಷ್ಟೆ ಅಲ್ಲ, ಆಮ್ಲಜನಕದ ಪೂರೈಕೆ ಹದಗೆಡುತ್ತದೆ; ರಕ್ತಕೋಶಗಳು ಸಾಯುತ್ತವೆ. ರಕ್ತನಾಳಗಳಲ್ಲಿ ಸತ್ತ ಕೋಶಗಳು ನೆರೆದು ರಕ್ತಪೂರೈಕೆಗೆ ಅಡ್ಡಿಯಾಗುತ್ತವೆ. ಒಳಗೊಳಗೇ ರಕ್ತ ಹೆಪ್ಪುಗಟ್ಟುವುದೂ ಉಂಟು. ಸಾಧಾರಣ ತಲೆನೋವಿನಿಂದ ಆರಂಭಿಸಿ, ಎಲ್ಲ ಮೂಳೆಗಳೂ ಮುರಿದಿದೆಯೋ ಎನ್ನುವಂತಹ ಭಯಂಕರ ನೋವು, ಜ್ವರ ಮೊದಲಾದ ಸಮಸ್ಯೆಗಳು ಕಾಡುತ್ತವೆ. ಅತ್ಯಂತ ಉಲ್ಬಣ ಸ್ಥಿತಿಯಲ್ಲಿ ರೋಗಿ ಸಾಯುವುದು ಖಚಿತ.

ಔಷಧವೇ ಇಲ್ಲದ ಈ ಕಾಯಿಲೆಯನ್ನು ಭಾರತ ಸರ್ಕಾರ 2047ನೇ ಇಸವಿಯ ವೇಳೆಗೆ ಹೇಳಹೆಸರಿಲ್ಲದಂತೆ ಮಾಡುತ್ತೇನೆಂದು ಮೊನ್ನೆಯಷ್ಟೆ ಘೋಷಿಸಿತ್ತು. ಆರಂಭದಲ್ಲಿ ಈ ಕಾಯಿಲೆ ಕೇವಲ ಆಫ್ರಿಕಾ ಮೂಲದ ಜನಾಂಗದಲ್ಲಿಯಷ್ಟೆ ಇವೆ ಎಂದು ಗುರುತಿಸಲಾಗಿತ್ತು. ಆದರೆ 1952ರಲ್ಲಿ ಬ್ರಿಟಿಷ್ ವೈದ್ಯ ಹೆನ್ರಿ ಲೆಹ್ಮನ್ ಭಾರತದ ನೀಲಗಿರಿಬೆಟ್ಟಗಳಲ್ಲಿದ್ದ ಬಡಗರು, ತೋಡ ಹಾಗೂ ಇರುಳ ಜನಾಂಗದಲ್ಲಿ ಈ ಕಾಯಿಲೆಗೆ ಕಾರಣವಾದ ಲಕ್ಷಣಗಳು ಇರುವುದನ್ನು ಪತ್ತೆ ಮಾಡಿದ. ಈ ಮೂಲಕ ಈ ಬುಡಕಟ್ಟು ಜನಾಂಗದ ಮೂಲವೂ ಆಫ್ರಿಕಾದ ಮೂಲನಿವಾಸಿಗಳಾಗಿರಬಹುದು ಎನ್ನುವ ತರ್ಕಕ್ಕೆ ಇಂಬುಗೊಟ್ಟ. ಅಂದಿನಿಂದ ಈ ಜನಾಂಗಗಳಿಗೆ ನಿಕಟ ಸಂಬಂಧವಿರುವ ಇತರೆ ಬುಡಕಟ್ಟು ಜನಾಂಗಗಳಲ್ಲಿಯೂ ಈ ಕಾಯಿಲೆ ಕಂಡು ಬಂದಿದೆ.
ಇದಕ್ಕೆ ಕಾರಣ ಹಿಮೊಗ್ಲೋಬಿನ್ ಪ್ರೊಟೀನು ತಯಾರಿಸುವ ಎರಡು ಜೀನ್ಗಳಲ್ಲಿ ಒಂದು ದೋಷಪೂರ್ಣವಾಗಿರುವುದು. ಹೀಮೊಗ್ಲೋಬಿನ್ನಿನ ಅಣುವಿನಲ್ಲಿ ಎರಡು ಪ್ರೊಟೀನುಗಳ ಅಣುಗಳು ಬೆಸೆದುಕೊಂಡಿರುತ್ತವೆ. ಇವನ್ನು ‘ಆಲ್ಫ’ ಹಾಗೂ ‘ಬೀಟ’ ‘ಪೆಪ್ಟೈಡು’ಗಳೆನ್ನುತ್ತಾರೆ. ಇದರಲ್ಲಿ ಬೀಟ ಪೆಪ್ಟೈಡಿನಲ್ಲಿ ಸಾಮಾನ್ಯವಾಗಿ ಇರಬೇಕಾದ ಒಂದೇ ಒಂದು ರಾಸಾಯನಿಕ ಬದಲಾದಾಗ, ಅದರ ಆಕಾರವೇ ಬದಲಾಗುತ್ತದೆ. ‘ಸಿಕಲ್ ಸೆಲ್ ಅನೀಮಿಯಾ’ ಅಥವಾ ‘ಎಸ್ಸಿಡಿ’ ಎಂದು ವೈದ್ಯರು ಕರೆಯುವ ದೋಷವುಂಟಾಗುತ್ತದೆ. ವ್ಯಕ್ತಿಯ ತಂದೆ, ತಾಯಿ ಇಬ್ಬರಲ್ಲಿಯೂ ಈ ದೋಷಪೂರ್ಣ ಮಾಹಿತಿ ಇದ್ದರೆ ಕಾಯಿಲೆ ಗ್ಯಾರಂಟಿ. ಒಬ್ಬರಲ್ಲಿ ಇದ್ದರೆ ಆಗ ಸಾಮಾನ್ಯವಾದ ಹೀಮೊಗ್ಲೋಬಿನ್ ಕೂಡ ಇರುವುದರಿಂದ ಕಾಯಿಲೆ ತೀವ್ರತೆರನಾಗಿರುವುದಿಲ್ಲ. ಇಂತಹ ವ್ಯಕ್ತಿಗಳಲ್ಲಿ ಮೂಳೆಯಲ್ಲಿ ತಯಾರಾಗುವ ಫೀಟಲ್ ಹೀಮೋಗ್ಲೋಬಿನ್ ಅಂಶ ಕಡಿಮೆ ಇರುತ್ತದೆ.

ಇದು ಹುಟ್ಟಿನಿಂದಲೇ ಬರುವ ಕಾಯಿಲೆಯಾದ್ದರಿಂದ ಗುಣಪಡಿಸುವುದು ಸಾಧ್ಯವಿಲ್ಲ. ಹೀಗಾಗಿ ತೊಂದರೆಗಳನ್ನು ನಿಭಾಯಿಸುವ ಕೆಲಸವನ್ನಷ್ಟೆ ಮಾಡಬೇಕು. ವೈದ್ಯರುಗಳು ಇದಕ್ಕಾಗಿ ಬಳಸುವ ಮೂರು ಔಷಧಗಳಲ್ಲಿ ‘ಹೈಡ್ರಾಕ್ಸಿಯೂರಿಯಾ’ ಎನ್ನುವುದಷ್ಟೆ ಅಗ್ಗದ ಚಿಕಿತ್ಸೆ. ‘ಎಲ್ ಗ್ಲುಟಾಮಿನ್’ ಮತ್ತು ‘ಕ್ರೈಜಾಮ್ಲಿನೂಬ್’ ಎನ್ನುವ ಇನ್ನೆರಡು ಔಷಧಗಳು ದುರ್ಲಭ ಹಾಗೂ ದುಬಾರಿ ಕೂಡ. ಇದಲ್ಲದೆ ಈ ಔಷಧಗಳ ನಿರಂತರ ಬಳಕೆ ರಕ್ತಕೋಶಗಳು ಹುಟ್ಟುವ ಮೂಳೆಯ ಮಜ್ಜೆಯನ್ನೂ ತಾಕಬಹುದು. ಈ ಔಷಧಗಳಲ್ಲದೆ ಮಜ್ಜೆಯ ಕಸಿಯನ್ನು ಕೂಡ ಚಿಕಿತ್ಸೆಯನ್ನಾಗಿ ಬಳಸಿದ್ದಾರೆ. ರೋಗಕ್ಕಿಂತಲೂ ಚಿಕಿತ್ಸೆಯೇ ಭಾರಿ ಹೊರೆಯಾಗಬಹುದು.‘ಜೀನ್ ಥೆರಪಿ’ ಅಥವಾ ‘ಜೀನ್ ದುರಸ್ತಿ’ ಮಾಡಿ ಗುಣಪಡಿಸಬಹುದು ಎನ್ನುವ ನಂಬಿಕೆ ಇದೆ. ಆದರೂ ಆ ತಂತ್ರ ಜಟಿಲವಾಗಿದ್ದು, ಈಗಷ್ಟೆ ಇದಕ್ಕೆ ಕಾನೂನಿನ ಸಮ್ಮತಿ ದಕ್ಕಿದೆ. ಕೋಟ್ಯಂತರ ರೂಪಾಯಿಗಳ ವೆಚ್ಚವೂ ಅಗತ್ಯ. ಬ್ರಾಡ್ನರ್ ತಂಡದ ಹೊಸ ಔಷಧ ಸಿಕಲ್ ಸೆಲ್ ಅನೀಮಿಯಾಗೆ ಅಗ್ಗದ ಚಿಕಿತ್ಸೆ ಸಾಧ್ಯ ಎಂದು ತೋರಿಸಿದೆ.

ಬ್ರಾಡ್ನರ್ ತಂಡ ಹೈಡ್ರಾಕ್ಸಿಯೂರಿಯಾದ ಪ್ರಭಾವವನ್ನೇ ಆಧಾರವಾಗಿಟ್ಟುಕೊಂಡು ಈ ಔಷಧವನ್ನು ರೂಪಿಸಿದ್ದಾರೆ. ಫೀಟಲ್ ಹೀಮೊಗ್ಲೋಬಿನಿನ ತಯಾರಿಕೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಇದಕ್ಕಾಗಿ ಇವರು ಮಾನವರ ಮಜ್ಜೆಯಲ್ಲಿರುವ ಕೋಶಗಳನ್ನು ಕೃಷಿ ಮಾಡಿ, ಹಲವಾರು ರಾಸಾಯನಿಕಗಳನ್ನು ಅವುಗಳ ಮೇಲೆ ಪ್ರಯೋಗಿಸಿ ‘ಫೀಟಲ್ ಹೀಮೊಗ್ಲೋಬಿನ್’ ತಯಾರಿಕೆ ಹೆಚ್ಚುತ್ತದೆಯೇ ಎಂದು ಪರೀಕ್ಷಿಸಿದರು. ಹೀಗೆ ಪರೀಕ್ಷೆಗೊಳಗಾದ ನೂರಾರು ರಾಸಾಯನಿಕಗಳಲ್ಲಿ ‘ಸಿ’ ಎಂದು ಹೆಸರಿಸಿದ ಅಣು ಫೀಟಲ್ ಹೀಮೊಗ್ಲೋಬಿನ್ ತಯಾರಿಕೆಯನ್ನು ಹೆಚ್ಚಿಸಿತ್ತು. ಆದರೆ ಹೀಮೊಗ್ಲೋಬಿನ್ ತಯಾರಿಕೆಯ ಯಾವ ಹಂತದಲ್ಲಿ, ಯಾವ ರಾಸಾಯನಿಕವನ್ನು ಇದು ತಾಕುತ್ತಿದೆ ಎಂಬುದನ್ನ ಪರೀಕ್ಷಿಸಲು, ‘ಸಿ’ ರಾಸಾಯನಿಕವನ್ನು ಪ್ರಯೋಗಿಸಿದರು. ಅದು ‘ಡಬ್ಲ್ಯೂಐಜೆಡ್’ ಅಥವಾ ‘ವಿಜ್‘ ಎಂದು ಗುರುತಿಸಿದ ಪ್ರೊಟೀನಿನ ಪ್ರಮಾಣ ಇಮ್ಮಡಿ ಕಡಿಮೆಯಾಯಿತೆಂದು ಸೂಚಿಸಿತು. ಪ್ರಯೋಗಗಳನ್ನು ಮರುಕಳಿಸಿದಾಗ ಕೇವಲ ಈ ಪ್ರೊಟೀನಷ್ಟೆ ಕಡಿಮೆಯಾಗುತ್ತಿತ್ತು.

ಆಕಸ್ಮಿಕವಾಗಿ ಪತ್ತೆಯಾದ ಈ ಪ್ರೊಟೀನಿನ ತಯಾರಿಕೆಯನ್ನು ನಿಲ್ಲಿಸಿದರೆ ಫೀಟಲ್ ಹೀಮೊಗ್ಲೋಬಿನ್ ತಯಾರಿಕೆಯನ್ನು ಹೆಚ್ಚಿಸಬಹುದೇ? ಇದು ಪ್ರಶ್ನೆ. ಇದನ್ನು ಸಾಧಿಸಲು, ಕೇವಲ ವಿಜ್ ಪ್ರೊಟೀನನ್ನಷ್ಟೆ ಹುಡುಕಿ ಹೋಗಿ ಅಂಟಿಕೊಳ್ಳುವ ರಾಸಾಯನಿಕಗಳನ್ನು ಇವರು ಸೃಷ್ಟಿಸಿದ್ದಾರೆ. ಈ ರಾಸಾಯನಿಕಗಳನ್ನು ಜೀವಕೋಶಗಳ ಮೇಲೆ ಪ್ರಯೋಗಿಸಿದಾಗ ವಿಜ್ ಪ್ರಮಾಣ ಕಡಿಮೆಯಾಯಿತು. ಮಾನವರ ಫೀಟಲ್ ಹೀಮೊಗ್ಲೋಬಿನನ್ನು ತಯಾರಿಸುವಂತಹ ಕೋಶಗಳನ್ನು ಇಲಿಗಳಲ್ಲಿ ಬೆಳೆಸಿ, ಇಲಿಗಳಿಗೆ ಔಷಧವನ್ನು ಕೊಟ್ಟು ಪರೀಕ್ಷಿಸಿದ್ದಾರೆ. ಇಲಿಗಳಲ್ಲಿ ಈ ಔಷಧದ ವಿಷ ಪರಿಣಾಮಗಳು ಕಂಡುಬಂದಿಲ್ಲ ಎನ್ನುತ್ತಾರೆ, ಬ್ರಾಡ್ನರ್.

ಮನುಷ್ಯರಿಗೂ ಇದು ನಿರಪಾಯಕಾರಿ ಎನ್ನಿಸಿದರೆ, ಸಿಕಲ್ ಸೆಲ್ ಅನೀಮಿಯಾ ರೋಗಿಗಳ ಸಂಕಟಕ್ಕೆ ಹೊಸದೊಂದು ಪರಿಹಾರ ದೊರಕಿದಂತೆಯೇ ಸರಿ.

ಈ ವರದಿಯನ್ನು ‘ಸೈನ್ಸ್’ ಪತ್ರಿಕೆ ತನ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.