ದಕ್ಷಿಣ ಪಡ್ರೆ ದ್ವೀಪ: ಮೆಕ್ಸಿಕನ್ ಗಡಿಯ ಸಮೀಪವಿರುವ ಟೆಕ್ಸಾಸ್‌ನ ದಕ್ಷಿಣ ತುದಿಯಲ್ಲಿನ ಉಡಾವಣಾ ನೆಲೆಯಲ್ಲಿ ಸ್ಪೇಸ್ ಎಕ್ಸ್ ತನ್ನ ಮೊದಲ ಪರೀಕ್ಷಾರ್ಥ ಪ್ರಯತ್ನದ ದೈತ್ಯ ರಾಕೆಟ್ ‘ಸ್ಟಾರ್‌ಶಿಪ್’ ಉಡಾವಣೆಯನ್ನು ಕೊನೆ ಗಳಿಗೆಯಲ್ಲಿ ಕಾಣಿಸಿದ ತಾಂತ್ರಿಕ ಸಮಸ್ಯೆಯಿಂದಾಗಿ ಸೋಮವಾರ ಸ್ಥಗಿತಗೊಳಿಸಿತು.

ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಂಪನಿಯು 400 ಅಡಿಯ ಸ್ಟಾರ್‌ಶಿಪ್ ರಾಕೆಟ್ ಉಡಾವಣೆಗೆ ಸಿದ್ಧತೆ ಮಾಡಿಕೊಂಡಿತ್ತು. ಉಡಾವಣೆಗೆ 40 ಸೆಕೆಂಡುಗಳು ಇರುವಾಗ ತಾಂತ್ರಿಕ ಸಮಸ್ಯೆ ಕಾಣಿಸಿತು. ಇಂಧನ ಭರ್ತಿ ವೇಳೆ, ಕವಾಟನ್ನು ನಿಗದಿತ ಸಮಯದಲ್ಲಿ ಸಕ್ರಿಯಗೊಳಿಸಲು ಉಡಾವಣಾ ನಿಯಂತ್ರಕಗಳಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಉಡಾವಣೆಯನ್ನು ರದ್ದುಗೊಳಿಸಲಾಯಿತು. ಈ ರಾಕೆಟ್‌ನಲ್ಲಿ ಗಗನಯಾನಿಗಳಾಗಲಿ ಅಥವಾ ಯಾವುದೇ ಉಪಗ್ರಹ ಇರಲಿಲ್ಲ.

ಬುಧವಾರದವರೆಗೆ ಉಪಗ್ರಹ ಉಡಾವಣೆಗೆ ಮತ್ತೊಂದು ಪ್ರಯತ್ನ ನಡೆಯುವುದಿಲ್ಲ. ‘ಇಂದು ಸಾಕಷ್ಟು ಕಲಿತೆವು. ರಾಕೆಟ್ ಉಡಾವಣೆ ಮುಂದೂಡಲಾಗಿದೆ’ ಎಂದು ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.

ಅಂತಿಮವಾಗಿ ಮಂಗಳ ಗ್ರಹಕ್ಕೆ ಜನರನ್ನು ಮತ್ತು ಸರಕುಗಳನ್ನು ಕಳುಹಿಸಲು ಸ್ಟಾರ್‌ಶಿಪ್ ರಾಕೆಟ್ ಬಳಸಲು ಕಂಪನಿಯು ಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.