ಶೆಂಝೆನ್: ಎನ್‌ಕ್ರಿಪ್ಷನ್ ಮೆಸೇಜಿಂಗ್ ಆ್ಯಪ್ ಸಿಗ್ನಲ್ ಚೀನಾದಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದು, ಮಂಗಳವಾರದಿಂದ ವಿಪಿಎನ್ ನೆಟ್‌ವರ್ಕ್ ಮೂಲಕ ಮಾತ್ರ ಕೆಲಸ ಮಾಡಲಿದೆ.

ಚೀನಾದ ಸೈಬರ್ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ವಿವಿಧ ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸಿದ್ದು, ವಿವಿಧ ಆ್ಯಪ್, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿದ್ದಾರೆ.

ಸಿಗ್ನಲ್ ಆ್ಯಪ್ ಜತೆಗೆ ಚೀನಾದಲ್ಲಿ ಸಿಗ್ನಲ್ ವೆಬ್‌ಸೈಟ್ ಕೂಡ ಮಂಗಳವಾರ ಬೆಳಗ್ಗಿನಿಂದಲೇ ಬಳಕೆದಾರರಿಗೆ ಲಭ್ಯವಾಗುತ್ತಿಲ್ಲ.

ಆದರೆ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಸಿಗ್ನಲ್ ಆ್ಯಪ್ ಲಭ್ಯವಾಗುತ್ತಿತ್ತು. ಹಾಂಗ್ ಕಾಂಗ್‌ನಲ್ಲಿ ಸಿಗ್ನಲ್ ಆ್ಯಪ್ ಮತ್ತು ವೆಬ್‌ಸೈಟ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.

ಚೀನಾದಲ್ಲಿ ಕಾರ್ಯಾಚರಣೆ ಸ್ಥಗಿತ ಕುರಿತಂತೆ ಸಿಗ್ನಲ್ ಆ್ಯಪ್ ಆಗಲೀ ಅಥವಾ ಚೀನಾದ ಸೈಬರ್‌ಸ್ಪೇಸ್ ಆಗಲೀ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ, ಜತೆಗೆ ಆ್ಯಪ್ ನಿಲುಗಡೆ ಕುರಿತು ಹೇಳಿಕೆ ಕೂಡ ಪ್ರಕಟಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.