ನವದೆಹಲಿ: ಹೊಸ ಡಿಜಿಟಲ್ ನಿಯಮಗಳ ಅನುಸರಣೆಗೆ ಅನುಗುಣವಾಗಿ ಗೂಗಲ್, ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ನಂತಹ ದೊಡ್ಡ ಸಾಮಾಜಿಕ ಮಾಧ್ಯಮಗಳು ಐಟಿ ಸಚಿವಾಲಯದೊಂದಿಗೆ ವಿವರಗಳನ್ನು ಹಂಚಿಕೊಂಡಿದೆ.

ಹಾಗಿದ್ದರೂ ಟ್ವಿಟರ್ ಇದುವರೆಗೆ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯ ನಿಯಮ ಪಾಲನೆ ಅಧಿಕಾರಿಗೆ ಟ್ವಿಟರ್ ವಿವರಗಳನ್ನು ಕಳುಹಿಸಿಲ್ಲ. ಕೇಂದ್ರ ಸರ್ಕಾರದ ಎಚ್ಚರಿಕೆಯ ಬೆನ್ನಲ್ಲೇ ಕುಂದುಕೊರತೆ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯಾಗಿ ಭಾರತದಲ್ಲಿರುವ ಸಂಸ್ಥೆಯ ವಕೀಲರೊಬ್ಬರ ವಿವರವನ್ನಷ್ಟೇ ಹಂಚಿಕೊಂಡಿದೆ.

ಕೇಂದ್ರ ಮಾಹಿತಿ ತಂತ್ರಜ್ಞಾನದ ಹೊಸ ಡಿಜಿಟಲ್ ನಿಯಮಗಳನ್ನು ಅನುಸರಿಸದಿದ್ದರೆ ಕಾರ್ಯಾಚರಣೆ ಸ್ಥಗಿತಗೊಳ್ಳುವ ಭೀತಿಯನ್ನು ಟ್ವಿಟರ್ ಎದುರಿಸುತ್ತಿದೆ.

ಇದನ್ನೂ ಓದಿ:Explainer: ಹೊಸ ನಿಯಮ ಪಾಲಿಸದಿದ್ದರೆ ಎಫ್ಬಿ, ಟ್ವಿಟರ್, ವಾಟ್ಸ್ಆ್ಯಪ್ ನಿಷೇಧ?

ಭಾರತದಲ್ಲಿ ಸೇವೆ ಮುಂದುವರಿಸಲು ಬದ್ಧರಾಗಿದ್ದೇವೆ. ಆದರೆ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಜಾರಿಗೆ ತರಲು ಪೊಲೀಸರು ಬೆದರಿಕೆ ತಂತ್ರ ಅನುಸರಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಟ್ವಿಟರ್ ಆತಂಕ ವ್ಯಕ್ತಪಡಿಸಿತ್ತು.

ಇತರೆ ಪ್ರಮುಖ ಸಾಮಾಜಿಕ ಮಾಧ್ಯಮಗಳಾದ ಕೂ, ಶೇರ್ಚಾಟ್, ಟೆಲಿಗ್ರಾಂ ಸಹ ಕೇಂದ್ರ ಸಚಿವಾಲಯದೊಂದಿಗೆ ವಿವರಗಳನ್ನು ಹಂಚಿಕೊಂಡಿದೆ.

ಏತನ್ಮಧ್ಯೆ ಫೇಸ್ಬುಕ್ನ ಭಾಗವಾಗಿರುವ ವ್ಯಾಟ್ಸ್ಆ್ಯಪ್, ಹೊಸ ನಿಯಮಗಳ ಅನುಷ್ಠಾನವನ್ನು ನಿರ್ಬಂಧಿಸುವಂತೆ ಕೋರಿ ಭಾರತ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಮತ್ತಷ್ಟು ಸುದ್ದಿಗಳು...
ಹೊಸ ನಿಯಮಗಳ ಪಾಲನೆ ವರದಿ ನೀಡಿ: ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರದ ಸೂಚನೆ
ವಿಚಾರಣೆಗೆ ಅಡ್ಡಿಪಡಿಸಲು ಹೇಳಿಕೆ ರೂಪಿಸಿದ ಟ್ವಿಟರ್: ದೆಹಲಿ ಪೊಲೀಸರು
ಸರ್ಕಾರದ ಜತೆ ಟ್ವಿಟರ್ ಜಟಾಪಟಿ; ನೆಲದ ಕಾನೂನು ಪಾಲಿಸಲು ಕೇಂದ್ರದ ಖಡಕ್ ಸೂಚನೆ
ಕಚೇರಿಗೆ ಪೊಲೀಸರ ಭೇಟಿ; ಭಾರತದ ಸಿಬ್ಬಂದಿ ಸುರಕ್ಷತೆಯ ಬಗ್ಗೆ ಟ್ವಿಟರ್ ಕಳವಳ
ಮೂಲಭೂತ ಹಕ್ಕು ಎಲ್ಲ ಸಂದರ್ಭಗಳಿಗೂ ಅನ್ವಯವಾಗದು: ವಾಟ್ಸ್ಆ್ಯಪ್ಗೆ ಕೇಂದ್ರ
ಡಿಜಿಟಲ್ ಕಾಯ್ದೆಗಳನ್ನು ಪ್ರಶ್ನಿಸಿ ಕೇಂದ್ರದ ವಿರುದ್ಧ ವಾಟ್ಸ್ಆ್ಯಪ್ ದಾವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.