ಬೆಂಗಳೂರು (ರಾಯಿಟರ್ಸ್): ಮೆಟಾ ಪ್ಲಾಟ್ಫಾರ್ಮ್ಸ್ ಆರಂಭಿಸಿರುವ ‘ಥ್ರೆಡ್ಸ್’ ಸಾಮಾಜಿಕ ಜಾಲತಾಣವು ಟ್ವಿಟರ್ ಕಂಪನಿಗೆ ದೊಡ್ಡ ಸವಾಲು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಥ್ರೆಡ್ಸ್ ಸೇವೆಗಳನ್ನು ಮೆಟಾ ಕಂಪನಿಯು ಗುರುವಾರ ಆರಂಭಿಸಿದೆ. ಮೊದಲ ದಿನವೇ ಒಂದು ಕೋಟಿಗೂ ಹೆಚ್ಚು ಬಳಕೆದಾರರನ್ನು ಥ್ರೆಡ್ಸ್ ಪಡೆದುಕೊಂಡಿದೆ.

ಥ್ರೆಡ್ಸ್ ಬಳಸಲು ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗಿದೆ. ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ನ ಹೆಸರು ಹಾಗೂ ಪಾಸ್ವರ್ಡ್ ಬಳಸಿ ಥ್ರೆಡ್ಸ್ಗೆ ಲಾಗಿನ್ ಆಗಬಹುದು.

ಟ್ವಿಟರ್ ರೀತಿಯಲ್ಲಿಯೇ ಕೆಲಸ ಮಾಡುವ ಮಾಸ್ಟೊಡನ್ ಆ್ಯಪ್ ತನ್ನ ಬಳಕೆದಾರರ ಸಂಖ್ಯೆ 17 ಲಕ್ಷ ಎಂದು ಹೇಳಿಕೊಂಡಿದೆ. ಥ್ರೆಡ್ಸ್ ಈಗ ನೂರಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಾಗಿದೆ.

ಥ್ರೆಡ್ಸ್ನಲ್ಲಿ ಈಗ ಹ್ಯಾಷ್ಟ್ಯಾಗ್ ಬಳಸಿ ಅಥವಾ ಪ್ರಮುಖ ಪದಗಳನ್ನು ಬಳಸಿ ಶೋಧಿಸುವ ಅವಕಾಶ ಇಲ್ಲ. ಆದರೆ ಈ ಸೌಲಭ್ಯವು ಟ್ವಿಟರ್ನಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.