ನವದೆಹಲಿ: ಮೆಟಾ ಒಡೆತನದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಉಂಟಾಗಿದ್ದ ತಂತ್ರಿಕ ದೋಷದಿಂದಾಗಿ ಹಲವು ಮಂದಿ ಬಳಕೆದಾರರ ಫಾಲೋವರ್ಸ್ ಸಂಖ್ಯೆಯಲ್ಲಿ ಏಕಾಏಕಿ ಕುಸಿತ ದಾಖಲಾಗಿದೆ.

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಕೋಟಿಗೂ ಮಿಕ್ಕಿ ಫಾಲೋವರ್ಸ್ ಇದ್ದರು. ಅವರ ಫಾಲೋವರ್ಸ್ ಸಂಖ್ಯೆಯಲ್ಲೂ ಕುಸಿತ ದಾಖಲಾಗಿದ್ದು, 10,000ಕ್ಕಿಂತ ಕೆಳಗೆ ಬಂದಿದೆ.

ಫೇಸ್‌ಬುಕ್ ಬಗ್ ಕುರಿತು ಬಳಕೆದಾರರು ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, 9,00,000 ದಷ್ಟು ಇದ್ದ ನನ್ನ ಫೇಸ್‌ಬುಕ್ ಫಾಲೋವರ್ಸ್ ಸಂಖ್ಯೆ ಒಮ್ಮೆಗೆ 9,000ಕ್ಕೆ ಇಳಿಕೆಯಾಗಿದೆ ಎಂದಿದ್ದಾರೆ.

ಪಾಸ್ವರ್ಡ್ ಕದಿಯುವ ಆ್ಯಪ್ಗಳ ಬಗ್ಗೆ ಫೇಸ್‌ಬುಕ್ ಬಳಕೆದಾರರಿಗೆ ಮೆಟಾ ಎಚ್ಚರಿಕೆ

ನಂತರದಲ್ಲಿ ಫೇಸ್‌ಬುಕ್ ಸಮಸ್ಯೆಯನ್ನು ಸರಿಪಡಿಸಿದ್ದು, ಕಳೆದುಹೋಗಿದ್ದ ಫಾಲೋವರ್ಸ್ ಸಂಖ್ಯೆ ಮತ್ತೆ ಕಾಣಿಸಿಕೊಂಡಿದೆ ಎಂದು ಹೇಳಿದೆ.

ಎರಡು ಗಂಟೆಗಳ ವ್ಯತ್ಯಯದ ಬಳಿಕ ಮತ್ತೆ ಸೇವೆಗೆ ಮರಳಿದ ಇನ್ಸ್ಟಾಗ್ರಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.