ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ420 ಎಂದು ಬರೆದಿರುವಜೆರ್ಸಿಯೊಂದನ್ನು ಸ್ವೀಕರಿಸುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿಹರಿದಾಡಿದೆ.ಆದರೆ ಈ ಫೋಟೊದಲ್ಲಿರುವಂತೆ ಮೋದಿ ಸ್ವೀಕರಿಸುತ್ತಿರುವ ಜೆರ್ಸಿ ಸಂಖ್ಯೆ 420 ಅಲ್ಲ. ಅರ್ಜೆಂಟಿನಾದಲ್ಲಿ ನಡೆದ ಜಿ- 20 ಶೃಂಗಸಭೆಯಲ್ಲಿ ಜಿ-20 ಎಂದು ಬರೆದಿರುವ ಜೆರ್ಸಿಯೊಂದನ್ನು ಮೋದಿಯವರಿಗೆ ನೀಡಲಾಗಿತ್ತು.ಈ ಫೋಟೊವನ್ನೇ ಫೋಟೊಶಾಪ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ ಎಂದು ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ.

We Support Shehla Rashid ಎಂಬ ಫೇಸ್ಬುಕ್ ಪುಟದಲ್ಲಿ ಡಿಸೆಂಬರ್ 2ರಂದು ಈ ಚಿತ್ರ ಪ್ರಕಟವಾಗಿತ್ತು.

ಇತಿಹಾಸದಲ್ಲಿ ಇಷ್ಟೊಂದು ಅವಮಾನ ಯಾವ ಪ್ರಧಾನಿಗೂ ಆಗಿರಲಿಲ್ಲ.ಫಿಫಾದವರು ಕೂಡಾ ಯಾರು ಹೇಗೆ ಎಂಬುದನ್ನು ಗುರುತು ಹಿಡಿದೇಬಿಟ್ಟರಾ? ಎಂಬ ತಲೆಬರಹ ಈ ಚಿತ್ರಕ್ಕೆ ನೀಡಲಾಗಿತ್ತು.

ಶೈಲೇಂದ್ರ ಗುಪ್ತಾ ಎಂಬ ಫೇಸ್ಬುಕ್ ಖಾತೆ ಮತ್ತು ಕೌಶಲೇಂದ್ರ ಯಾದವ್ಎಂಬ ಟ್ವಿಟರ್ ಖಾತೆಯಲ್ಲಿ ಈ ಚಿತ್ರ ಪೋಸ್ಟ್ ಆಗಿದ್ದು, ಹಲವಾರು ಮಂದಿ ಇದನ್ನು ಹಂಚಿಕೊಂಡಿದ್ದಾರೆ.

ನಿಜ ಸಂಗತಿ ಏನು?
ಈ ಚಿತ್ರವನ್ನು ಗೂಗಲ್ರಿವರ್ಸ್ ಇಮೇಜ್ನಲ್ಲಿ ಸರ್ಚ್ ಮಾಡಿದಾಗ ಜೆರ್ಸಿಯಲ್ಲಿ ಮೋದಿ ಹೆಸರು ಮತ್ತು ಜಿ20 ಎಂದು ಬರೆದಿರುವ ಚಿತ್ರ ಸಿಕ್ಕಿದೆ.

ಜಿ 20 ಎಂದು ಬರೆದಿರುವ ಜೆರ್ಸಿ ಸ್ವೀಕರಿಸುತ್ತಿರುವ ಫೋಟೊ ಡಿಸೆಂಬರ್ 2ರಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿದೆ.ಡಿಸೆಂಬರ್ 2 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಸುದ್ದಿ ಇಲ್ಲಿದೆ.
ನವೆಂಬರ್ 30- ಡಿಸೆಂಬರ್ 1, 2008ರಂದು ಅರ್ಜೆಂಟಿನಾದಲ್ಲಿ ಜಿ 20 ಶೃಂಗಸಭೆ ನಡೆದಿತ್ತು.ಈ ವೇಳೆ ಮೋದಿ ಅವರನ್ನು ಭೇಟಿಯಾದ ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೊ ಜೆರ್ಸಿ ಉಡುಗೊರೆ ನೀಡಿದ್ದರು. ಈ ಚಿತ್ರವನ್ನು ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ.

ಇಲ್ಲಿಗೆ ಬರುವಾಗ ಫುಟ್ಬಾಲ್ ಬಗ್ಗೆ ಯೋಚಿಸಿರಲಿಲ್ಲ. ಬಂದ ನಂತರ, ಅರ್ಜೆಂಟೀನಾದ ಫುಟ್ಬಾಲ್ ಬಗ್ಗೆ ಭಾರತದ ಜನರಿಗಿರುವ ಅಭಿಮಾನ ನೆನಪಾಯಿತು. ಇನ್ಫಾಂಟಿನೊ ಅವರನ್ನು ಭೇಟಿಯಾದಾಗ ಅನಿರೀಕ್ಷಿತವಾಗಿ ಈ ಜೆರ್ಸಿನೀಡಿದ್ದಾರೆ. ಅವರ ಪ್ರೀತಿಗೆ ಅಭಾರಿಯಾಗಿದ್ದೇನೆ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.