ವಾಷಿಂಗ್ಟನ್: ಚೀನಾ ಮೂಲದ ಜನಪ್ರಿಯ ಅ್ಯಪ್ ಟಿಕ್‌ಟಾಕ್ ಅನ್ನು ಅಮೆರಿಕದಲ್ಲಿ ನಿಷೇಧಿಸುವ ಕುರಿತು ವಿದೇಶಾಂಗ ವ್ಯವಹಾರಗಳ ಸಮಿತಿ ಮುಂದಿನ ತಿಂಗಳು ಮತದಾನ ನಡೆಸಲಿದೆ.

ರಾಷ್ಟ್ರೀಯ ಭದ್ರತೆಗೆ ಅಪಾಯ ತರಲಿದೆ ಎನ್ನುವ ಕಾರಣಕ್ಕಾಗಿ ಅಮೆರಿಕದ ಭದ್ರತಾ ಸಂಸ್ಥೆಗಳು ಈಗಾಗಲೇ ಟಿಕ್‌ಟಾಕ್ ಬ್ಯಾನ್ ಮಾಡುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿವೆ. ಅದಕ್ಕೆ ಪೂರಕವಾಗಿ ಸಮಿತಿ, ಮುಂದಿನ ತಿಂಗಳು ಮತದಾನ ನಡೆಸಿ, ನಿಷೇಧಕ್ಕೆ ಮುಂದಾಗಲಿದೆ.

ಸಮಿತಿ ಮುಖ್ಯಸ್ಥ ಮೈಖೆಲ್ ಮೆಕಾಲ್ ಈ ಕುರಿತು ಸಮಿತಿಯ ಪರವಾಗಿ ಸರ್ಕಾರದಲ್ಲಿ ಮತದಾನ ನಡೆಸಿ, ಟಿಕ್‌ಟಾಕ್ ನಿಷೇಧಕ್ಕೆ ಪೂರಕವಾಗಿ ತಾಂತ್ರಿಕ ಅಂಶಗಳನ್ನು, ಕಾನೂನಿನ ಸಾಧ್ಯತೆಯನ್ನು ಮಂಡಿಸಲಿದ್ದಾರೆ.

ಜಾಲತಾಣ ಇನ್ಫ್ಲುಯೆನ್ಸರ್ಗಳಿಗೆ ಮಾರ್ಗಸೂಚಿ

ಚೀನಾ ಮೂಲದ ಟಿಕ್‌ಟಾಕ್, ಅಮೆರಿಕನ್ನರ ಫೋನ್‌ಗೆ ಹಿಂಬಾಗಿಲ ಮೂಲಕ ಪ್ರವೇಶಿಸಿ, ಬಳಕೆದಾರರ ವಿವರ ಕದಿಯುತ್ತಿದೆ ಎಂದು ಮೆಕಾಲ್ ಆರೋಪಿಸಿದ್ದಾರೆ. ಅಲ್ಲದೆ, ಯುವಸಮುದಾಯದ ಮೇಲೆ ಟಿಕ್‌ಟಾಕ್ ಪ್ರಭಾವ ಬೀರುತ್ತಿದೆ. ಹೀಗಾಗಿ ಅವುಗಳನ್ನು ನಿಷೇಧಿಸುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಟಿಕ್ಟಾಕ್ನಿಂದ ದೇಶದ ಭದ್ರತೆಗೆ ಅಪಾಯ: ಅಮೆರಿಕ ಸರ್ಕಾರಕ್ಕೆ ಎಫ್ಬಿಐ ಎಚ್ಚರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.