ವಾಯು ಶುದ್ಧೀಕರಿಸುವ ಯಂತ್ರಗಳು ಸಾಕಷ್ಟು ಮಾರುಕಟ್ಟೆಯಲ್ಲಿವೆ. ಇತ್ತೀಚೆಗಂತೂಕೆಲವು ವಾಯು ಶುದ್ಧೀಕರಣ ಯಂತ್ರಗಳು ಕೊರೊನಾ ವೈರಸ್‌ನ್ನು ಕೊಲ್ಲುತ್ತವೆ ಎಂದೂ ಹೇಳಿಕೊಂಡು ಮಾರುಕಟ್ಟೆಗೆ ಲಗ್ಗೆ ಇಡಲು ಪ್ರಯತ್ನಿಸಿದವು.

ಆದರೆ ಈ ನಡುವೆ ಸದ್ದಿಲ್ಲದೇ ಒಂದು ಪ್ರಯತ್ನ ಸಾಗಿತ್ತು. ಕರ್ನಾಟಕದ ಸ್ಟಾರ್ಟ್‌ಅಪ್ ‘ನೂತನ್ ಲ್ಯಾಬ್ಸ್’ ಕಂಪನಿ ಭಾರತೀಯ ವಿಜ್ಞಾನ ಸಂಸ್ಥೆಯ ಜೊತೆ ಸೇರಿಕೊಂಡು ಸ್ಮಾಗ್ ಪ್ಯೂರಿಫೈಯರ್‌ನ್ನು ರೂಪಿಸಿದೆ. ಹೊಂಜು (ಹೊಗೆ ಮತ್ತು ಮಂಜು) ಸೋಸಿ ಶುದ್ಧ ಗಾಳಿಯನ್ನು ವಾತಾವರಣಕ್ಕೆ ಬಿಡುವ ವ್ಯವಸ್ಥೆ ಈ ಯಂತ್ರದಲ್ಲಿದೆ. ಬಯಲು ಪ್ರದೇಶ, ಸಾರ್ವಜನಿಕರ ಓಡಾಟದ ಸ್ಥಳದಲ್ಲಿ ಸ್ಥಾಪಿಸಿದರೆ ಸಾಕು.ಈ ಯಂತ್ರ ಪ್ರತಿ ನಿಮಿಷಕ್ಕೆ 15 ಸಾವಿರ ಘನ ಅಡಿ ಪ್ರದೇಶದ ಗಾಳಿಯನ್ನು ಶುದ್ಧೀಕರಿಸಿಬಿಡುತ್ತದೆ.

ಇದು ಕೆಲಸ ಮಾಡುವುದು ನ್ಯಾನೋ ತಂತ್ರಜ್ಞಾನದ ಮೂಲಕ. ವಾತಾವರಣದಲ್ಲಿರುವ ಕಲುಷಿತ ಗಾಳಿಯನ್ನು ಹೀರಿಕೊಂಡು ನ್ಯಾನೋಕಣಗಳ ಮೂಲಕ ಹಾಯಿಸುತ್ತದೆ. ಇಂಗಾಲದ ಡೈ ಆಕ್ಸೈಡ್ ಮತ್ತು ಇತರ ಅಪಾಯಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ. ಆ ಕಣಗಳಲ್ಲಿರುವ ಅಪಾಯಕಾರಿ ಅಂಶಗಳನ್ನು ನಿಷ್ಕ್ರಿಯಗೊಳಿಸುತ್ತದೆ.

ಕಂಪನಿ ಹೇಳುವ ಪ್ರಕಾರ, ‘ಈ ಯಂತ್ರದಲ್ಲಿ ವಾಯು ಶುದ್ಧೀಕರಣವು 11 ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯ ಮೂಲಕ ನಡೆಯುತ್ತದೆ. 1ರಿಂದ 5ನೇ ಹಂತದವರೆಗೆ ನಡೆಯುವ ಪ್ರಕ್ರಿಯೆಯಲ್ಲಿ ಗಾಳಿಯು ಲೋಹದ ಸೋಸು ವ್ಯವಸ್ಥೆ ಮೂಲಕ (ಮೆಟಲ್ ಮೆಷ್) ಹಾಯುತ್ತದೆ. ಈ ಹಂತದಲ್ಲೇ ದಟ್ಟ ದೂಳಿನ ಕಣಗಳು, ಅಪಾಯಕಾರಿ ಅಂಶಗಳು ಸೋಸಲ್ಪಡುತ್ತದೆ. ಉಸಿರಾಟಕ್ಕೆ ಯೋಗ್ಯವಾದ ಗಾಳಿಯನ್ನು ಹೊರಬಿಡುತ್ತದೆ’.

6ನೇ ಹಂತದಲ್ಲಿ ನ್ಯಾನೋ ಕ್ಲಸ್ಟರ್ ವೇಗವರ್ಧಕಗಳು ಗಾಳಿಯಲ್ಲಿರುವ ವಿಷಕಾರಿ ಅನಿಲಗಳು, ರೋಗಕಾರಕಗಳನ್ನು ನಿಷ್ಕ್ರಿಯಗೊಳಿಸುತ್ತವೆ.

7ರಿಂದ 10ನೇ ಹಂತದಲ್ಲಿ ನ್ಯಾನೋಕಣಗಳನ್ನು ಒಳಗೊಂಡ ತೆಳ್ಳನೆಯ ಪದರಗಳು ಗಾಳಿಯಲ್ಲಿನ ಬೆನ್ಝೀನ್ ಸಹಿತ ಇತರ ಕಣಗಳನ್ನು ಪರಿವರ್ತಿಸುತ್ತವೆ.

11ನೇ ಹಂತದಲ್ಲಿ ಗಾಳಿಯಲ್ಲಿರುವ ದುರ್ವಾಸನೆ ಮತ್ತೂ ಉಳಿದ ಹಾನಿಕಾರಕ ಅಂಶಗಳನ್ನು ಹೊರಹಾಕುತ್ತದೆ.

6 ಅಡಿ ಸುತ್ತಳತೆಯ 15 ಅಡಿ ಎತ್ತರದ ಈ ಯಂತ್ರಕಾರ್ಯಾಚರಿಸಲು 11 ಕಿಲೋವಾಟ್ ವಿದ್ಯುತ್ ಬೇಕು.

ಎಲ್ಲೆಲ್ಲಾ ಸೂಕ್ತ?

ದಟ್ಟ ಟ್ರಾಫಿಕ್ ಪ್ರದೇಶ, ಕಾರ್ಖಾನೆಗಳು, ಶಾಪಿಂಗ್ ಮಾಲ್, ಶಾಲೆ, ಕಾಲೇಜು, ಆಸ್ಪತ್ರೆ, ರಾಸಾಯನಿಕ ಘಟಕಗಳಿರುವ ಪ್ರದೇಶ ಇತ್ಯಾದಿ.

ಭಾರತೀಯ ವಿಜ್ಞಾನ ಸಂಸ್ಥೆಯ ನಿಗಾದ ಅಡಿಯಲ್ಲಿ ಅದರ ಮಾನದಂಡಗಳ ಪ್ರಕಾರವೇ ನಿರ್ಮಾಣಗೊಂಡ ಏಕೈಕ ವಾಯು ಶುದ್ಧೀಕರಣ ಯಂತ್ರ ಇದು ಎನ್ನುತ್ತಾರೆ, ನೂತನ್ ಲ್ಯಾಬ್ಸ್‌ನ ಮುಖ್ಯಸ್ಥ ಎಚ್.ಎಸ್. ನೂತನ್.

ಮಾಹಿತಿಗೆ ಮೊ. 9071149995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.