ಬಟ್ಟೆಗಳನ್ನು ಒಗೆಯುವುದು, ಪಾತ್ರೆಗಳನ್ನು ತೊಳೆಯುವುದು ಅನಿವಾರ್ಯ. ಆದರೆ ಯಾರೂ ಈ ಕೆಲಸಗಳನ್ನು ಬಯಸಲಾರರು. ತಂತ್ರಜ್ಞಾನದ ನೆರವಿನಿಂದ ಈಗಾಗಲೇ ಹಲವರಿಗೆ ಬಟ್ಟೆ ಒಗೆಯುವ ಕೆಲಸದಿಂದ ಮುಕ್ತಿ ಸಿಕ್ಕಿದೆ. ಪಾತ್ರೆ ತೊಳೆಯುವುದರಿಂದಲೂ ತಂತ್ರಜ್ಞಾನದ ನೆರವಿನಿಂದ ಹಲವರು ಮುಕ್ತಿಯನ್ನು ಪಡೆದಿದ್ದಾರೆ. ಪ್ರಸ್ತುತ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಪಾತ್ರೆ ತೊಳೆಯುವ ಯಂತ್ರಗಳು (ಡಿಷ್ ವಾಷರ್ಸ್) ಸ್ಮಾರ್ಟ್ ತಂತ್ರಜ್ಞಾನದಿಂದ ಈ ಕೆಲಸವನ್ನು ಮತ್ತಷ್ಟು ಸಲೀಸು ಮಾಡುತ್ತಿವೆ. ಸ್ಮಾರ್ಟ್ಫೋನ್ ನೆರವಿನಿಂದ ಆ್ಯಪ್ ಮೂಲಕ ನಿಯಂತ್ರಿಸಬಹುದಾದ ಡಿಷ್ ವಾಷರ್ಸ್ಗಳೂ ಬಂದಿವೆ.

ಶಾರ್ಪ್ ಕ್ಯೂಡಬ್ಲ್ಯೂ

ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ಈ ಡಿಷ್ ವಾಷರ್ನಲ್ಲಿ ಹಲವು ವೈಶಿಷ್ಟ್ಯಗಳಿವೆ. ಮುಖ್ಯವಾಗಿ ಇದರಲ್ಲಿನ ‘ಇಂಟೆಲ್ಲಿವಾಷ್’ ತಂತ್ರಜ್ಞಾನದಿಂದ ಪಾತ್ರೆ ತೊಳೆಯಲು ನೀರಿನ ಉಷ್ಣಾಂಶ, ವೇಗವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸಿಕೊಳ್ಳಬಹುದು. ‘ಎಕೊ ವಾಷ್’ ತಂತ್ರಜ್ಞಾನದ ನೆರವಿನಿಂದ ವಿದ್ಯುತ್ ಹಾಗೂ ನೀರಿನ ಉಳಿತಾಯವನ್ನೂ ಮಾಡಬಹುದು. ಬ್ಯಾಕ್ಟಿರೀಯಾಗಳನ್ನು ಕೊಲ್ಲಬಲ್ಲ ಹೈಜಿನ್ ಸಿಸ್ಟಂ ಕೂಡ ಇದರಲ್ಲಿದೆ.

ಬಾಷ್ ಸಿರೀಸ್ 8

ಕೆಲಸ ಬೇಗ ಆಗಬೇಕು ಎಂದು ಇಚ್ಛಿಸುವವರಿಗೆ ಈ ಡಿಷ್ ವಾಷರ್ ಒಪ್ಪುತ್ತದೆ. ಅನುಕೂಲಕ್ಕೆ ತಕ್ಕಂತೆ ಜೋಡಿಸಬಹುದಾದ ಟಾಪ್ ರ್ಯಾಕ್ ವೈಶಿಷ್ಟ್ಯದ ಜೊತೆಗೆ 60 ನಿಮಿಷಗಳಲ್ಲಿ ಪಾತ್ರೆ ತೊಳೆಯುವಂಥ ಕ್ವಿಕ್ ವಾಷ್ ಮೋಡ್ ಕೂಡ ಇದೆ. ತೊಳೆದ ನಂತರ ಪಾತ್ರೆಗಳನ್ನು ಪರಿಪೂರ್ಣವಾಗಿ ಒಣಗಿಸಲು ‘ಪರ್ಫೆಕ್ಟ್ ಡ್ರೈ ಟೆಕ್ನಾಲಜಿ’ಯನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನದಿಂದ ಡಿಷ್ ವಾಷರ್ನಲ್ಲಿ ಉಷ್ಣಾಂಶ ಸೃಷ್ಟಿಸಿಯಾಗುತ್ತದೆ. ಇದು ಪಾತ್ರೆಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ.

ಸ್ಮೆಗ್ 50‘ಸ್ ರೆಟ್ರೊ

ಈ ಡಿಷ್ ವಾಷರ್ ತುಸು ದುಬಾರಿ. ಆದರೆ ಇದರ ವಿನ್ಯಾಸ ಹಾಗೂ ಬಣ್ಣ ಅಡುಗೆಮನೆಗೆ ಮೆರಗನ್ನು ನೀಡುತ್ತದೆ. ಶೀಘ್ರವಾಗಿ ಪಾತ್ರೆಗಳನ್ನು ತೊಳೆಯುವುದು ಇದರ ಮುಖ್ಯ ವೈಶಿಷ್ಟ್ಯಗಳಲ್ಲಿ ಒಂದು. ಕೇವಲ 27 ನಿಮಿಷಗಳಲ್ಲಿ ಪಾತ್ರೆಗಳನ್ನು ತೊಳೆಯಬಹುದಾದ ಕ್ವಿಕ್ ವಾಷ್ ಮೋಡ್ ಇದರಲ್ಲಿದೆ. ಇದರಲ್ಲಿ ‘ಪ್ಲಾನೆಟೇರಿಯಂ ವಾಟರ್ ಜೆಟ್ ಸಿಸ್ಟಂ’ ಎಂಬ ತಂತ್ರಜ್ಞಾನ ಅಳವಡಿಸಲಾಗಿದೆ.

ಸ್ಯಾಮ್ಸಂಗ್ ಡಬ್ಲ್ಯೂ

ಬೇಗ ಪಾತ್ರೆ ತೊಳೆಯಲು ನೆರವಾಗುವ 30 ಮಿನಿಟ್ ಕ್ವಿಕ್ ವಾಷ್ ಮೋಡ್ನೊಂದಿಗೆ ತಯಾರಿಸಿರುವ ಈ ಡಿಷ್ವಾಷರ್ನಲ್ಲಿ ಸ್ಪೂನ್, ಫೋರ್ಕ್ ಹಾಗೂ ಚಾಕೂ, ಚೂರಿಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಇಡಲು ರ್ಯಾಕ್ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ‘ಆ್ಯಂಟಿ ಫ್ಲಡ್’ ತಂತ್ರಜ್ಞಾನ ಇದರ ಮತ್ತೊಂದು ವೈಶಿಷ್ಟ್ಯವಾದರೆ, ಗರಿಷ್ಠ 70 ಡಿಗ್ರಿ ಉಷ್ಣಾಂಶದಲ್ಲಿ ನೀರನ್ನು ಹಾಯಿಸಿ ಪಾತ್ರೆಗಳನ್ನು ಸ್ವಚ್ಛಗೊಳಿಸುವಂತೆ ತಯಾರಿಸಲಾಗಿದೆ. ಸುಲಭ ಕಾರ್ಯ ನಿರ್ವಹಣೆಗೆ ಟಚ್ ಪ್ಯಾನೆಲ್ ನೆರವಾಗುತ್ತದೆ.

ಮೀಲೆ ಜಿ66

ಗರಿಷ್ಠ ಬಾಳಿಕೆ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಈ ಡಿಷ್ ವಾಷರನ್ನು ತಯಾರಿಸಲಾಗಿದೆ. ಇದರಲ್ಲಿ ಉತ್ತಮ ‘ಗ್ಲಾಸ್ ಕೇರ್ ಪ್ರೋಗ್ರಾಮ್’ಅನ್ನು ಅಳವಡಿಸಲಾಗಿದ್ದು, ಗಾಜಿನಂಥ ನಾಜೂಕು ವಸ್ತುಗಳು ಒಡೆಯದಂಥ ಉತ್ತಮವಾಗಿ ಸ್ವಚ್ಛಗೊಳಿಸಲು ನೆರವಾಗುತ್ತದೆ. ಇದರಲ್ಲಿ ಆಟೊ ಓಪನ್ ಡ್ರೈಯಿಂಗ್ ಸಿಸ್ಟಂ ಕೂಡ ಇದ್ದು, ಪಾತ್ರೆಗಳನ್ನು ತೊಳೆಯುವ ಕೊನೆಯ ಅವಧಿಯಲ್ಲಿ ಕೊಂಚ ಪ್ರಮಾಣದಲ್ಲಿ ಇದರ ಮುಚ್ಚಳ ತೆರೆದುಕೊಂಡು, ಹೊರಗಿನ ಗಾಳಿಯನ್ನು ಎಳೆದುಕೊಳ್ಳುತ್ತವೆ. ಇದರಿಂದ ಪಾತ್ರೆಗಳು ಬೇಗ ಒಣಗಳು ನೆರವಾಗುತ್ತದೆ.

ವರ್ಲ್ಪೂಲ್ ಡಬ್ಲ್ಯೂಎಫ್ಸಿ

ಕಂಪನಿಯವರು ಇದರಲ್ಲಿ ‘ಸಿಕ್ತ್ ಸೆನ್ಸ್’ ತಂತ್ರಜ್ಞಾನವನ್ನು ಅಳವಡಿಸಿರುವುದು ವಿಶೇಷ. ಈ ಸೆನ್ಸರ್ ತಂತ್ರಜ್ಞಾನ ನೆರವಿನಿಂದ ಪಾತ್ರೆಗಳು ಹಾಗೂ ತಟ್ಟೆಗಳಲ್ಲಿನ ಕೊಳಕನ್ನು ಪತ್ತೆಹಚ್ಚಿ ಪರಿಪೂರ್ಣವಾಗಿ ಸ್ಚಚ್ಛಗೊಳಿಸಬಹುದಾಗಿದೆ. ಸಮಯ, ವಿದ್ಯುಚ್ಛಕ್ತಿ ಹಾಗೂ ನೀರನ್ನು ಮಿತವಾಗಿ ಬಳಸಿಕೊಳ್ಳಲು ನೆರವಾಗುವಂತೆ ಈ ಡಿಷ್ ವಾಷರ್ ತಯಾರಿಸಲಾಗಿದೆ. ಇದರಲ್ಲಿ ಪವರ್ ಕ್ಲೀನ್ ಪ್ರೋ ಎಂಬ ಮತ್ತೊಂದು ವೈಶಿಷ್ಟ್ಯವಿದೆ. ಇದರ ಶಕ್ತಿಯುತ ಜೆಟ್ಗಳ ನೆರವಿನಿಂದ ಪಾತ್ರೆಗಳ ಪೂರ್ಣವಾಗಿ ಸ್ವಚ್ಛಗೊಳ್ಳಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.