ಬೆಂಗಳೂರು: ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಫಿಟ್ನೆಸ್ ಗ್ಯಾಜೆಟ್ ಮತ್ತು ಸ್ಮಾರ್ಟ್ವಾಚ್, ಸ್ಮಾರ್ಟ್ಬ್ಯಾಂಡ್ ಬಳಕೆ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

ಸ್ಮಾರ್ಟ್ಫೋನ್ ಮಾರುಕಟ್ಟೆ ವಿಸ್ತರಣೆಯ ಜತೆಗೇ, ಕೋವಿಡ್ 19 ನಂತರ ಹೇರಲಾಗಿದ್ದ ಲಾಕ್ಡೌನ್ ಅವಧಿಯಲ್ಲಿ ಜನರು ಫಿಟ್ನೆಸ್ ಕಾಳಜಿ ಜತೆಗೆ ಆರೋಗ್ಯದ ಕುರಿತು ಹೆಚ್ಚಿನ ಆಸ್ಥೆ ವಹಿಸಿದ್ದಾರೆ ಎಂದು ಇಂಟರ್ನ್ಯಾಶನಲ್ ಡಾಟಾ ಕಾರ್ಪೊರೇಶನ್ (ಐಡಿಸಿ) ಬಿಡುಗಡೆ ಮಾಡಿದ ವರದಿ ತಿಳಿಸಿದೆ.

2022ರ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ 2.39 ಕೋಟಿಯಷ್ಟು ಫಿಟ್ನೆಸ್ ಗ್ಯಾಜೆಟ್ಗಳ ಮಾರಾಟವಾಗಿದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಫಿಟ್ನೆಸ್ ಗ್ಯಾಜೆಟ್ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಐಡಿಸಿ ಹೇಳಿದೆ.

ಮಾರುಕಟ್ಟೆಯಲ್ಲಿ ಹಬ್ಬದ ಆಫರ್, ಡಿಸ್ಕೌಂಟ್ ಕೊಡುಗೆ ಜತೆಗೆ ಮಾರಾಟ ಕೂಡ ಏರಿಕೆಯಾಗಿದ್ದು, ಜನರ ಬೇಡಿಕೆಗೆ ಅನುಗುಣವಾಗಿ ವಿವಿಧ ಬೆಲೆ ಶ್ರೇಣಿಯಲ್ಲಿ ಸ್ಮಾರ್ಟ್ ಫಿಟ್ನೆಸ್ ಗ್ಯಾಜೆಟ್ಗಳು ದೊರೆಯುತ್ತಿವೆ.

Orbit Infiniti: ಸೂಪರ್ಅಮೋಲೆಡ್ ಡಿಸ್ಪ್ಲೇ ಸಹಿತ ಹೊಸ ಸ್ಮಾರ್ಟ್ವಾಚ್

ದೇಶಿ ಕಂಪನಿಗಳು ಮತ್ತು ಆಮದು ಮಾಡಿಕೊಂಡ ಗ್ಯಾಜೆಟ್ಗಳು ಮಾರುಕಟ್ಟೆಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿವೆ. ಸ್ಮಾರ್ಟ್ಫೋನ್ ಜತೆಗೆ ಕನೆಕ್ಟ್ ಮಾಡಿ ಬಳಸಬಹುದಾಗಿದ್ದು, ಆ್ಯಪ್ ಆಧಾರಿತವಾಗಿ ಕಾರ್ಯನಿರ್ವಹಿಸುತ್ತವೆ.

ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ ಕ್ರಾಸ್ಬೀಟ್ಸ್ ಸ್ಮಾರ್ಟ್ವಾಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.