ಬೆಂಗಳೂರು: ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ವೈರಸ್ ಇದ್ದು, ಬಳಕೆದಾರರ ಮಾಹಿತಿ ಕಳವಾಗುವ ಮತ್ತು ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಗೂಗಲ್ನ ಸಂಶೋಧನಾ ತಂಡ ಪ್ರಾಜೆಕ್ಟ್ ಝೀರೊ ಹೇಳಿದೆ.

ಸಂಶೋಧನಾ ತಂಡ ಬಿಡುಗಡೆ ಮಾಡಿರುವ ವರದಿ ಪ್ರಕಾರ, ARM ಆಧಾರಿತ ಎಕ್ಸಿನಾಸ್, ಮೀಡಿಯಾಟೆಕ್ ಮತ್ತು ಟೆನ್ಸರ್ ಪ್ರೊಸೆಸರ್ಗಳನ್ನು ಬಳಸುತ್ತಿರುವ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ವೈರಸ್ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ ಇರುವ ಸ್ಮಾರ್ಟ್ಫೋನ್ಗಳಲ್ಲಿ ವೈರಸ್ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಗೂಗಲ್ ಹೇಳಿದೆ.

CVE-2021-39793 ಎಂದು ಗುರುತಿಸಲಾದ ವೈರಸ್ ಮಾಲಿ ಗ್ರಾಫಿಕ್ಸ್ ಪ್ರೊಸೆಸರ್ ಇರುವ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಅದಕ್ಕೆ ಭದ್ರತಾ ಅಪ್ಡೇಟ್ ಅನ್ನು ಇನ್ನಷ್ಟೇ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಬಿಡುಗಡೆ ಮಾಡಬೇಕಿದೆ.

ಗೂಗಲ್ ಜಾಹೀರಾತು ದುರ್ಬಳಕೆ: ಮಾಲ್ವೇರ್ ಹರಡುತ್ತಿರುವ ಹ್ಯಾಕರ್ಸ್

ಗೂಗಲ್ ಹೊಸ ಅಪ್ಡೇಟ್ ಅನ್ನು ಪಿಕ್ಸೆಲ್ ಸ್ಮಾರ್ಟ್ಫೋನ್ಗಳಿಗೆ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದೆ. ಉಳಿದಂತೆ, ಸ್ಯಾಮ್ಸಂಗ್, ಶಓಮಿ ಮತ್ತು ಇತರ ಪ್ರಮುಖ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಕಂಪನಿಗಳು ಭದ್ರತಾ ಅಪ್ಡೇಟ್ ಬಿಡುಗಡೆ ಮಾಡಬೇಕಿದೆ.

ಭದ್ರತಾ ಸಮಸ್ಯೆ: ಗೂಗಲ್ ಕ್ರೋಮ್ ಬ್ರೌಸರ್ ಅಪ್ಡೇಟ್ ಮಾಡಿಕೊಳ್ಳಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.