ಸಾಮಾಜಿಕ ಜಾಲತಾಣವನ್ನು ಹೀಗೆ ಸ್ವಚ್ಛವಾಗಿಡಿ

ಹೊಸ ವರುಷದ ಖುಷಿಯ ಜತೆ ಹೊಸ ಸಂಕಲ್ಪಗಳ ಪಟ್ಟಿ ಇದ್ದೇ ಇರುತ್ತದೆ. ಇದು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದು ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನಿರ್ಧಾರಗಳನ್ನು ಪ್ರಕಟಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಬದುಕಿನ ಏಳು ಬೀಳುಗಳು, ಖುಷಿ- ಬೇಸರ ಎಲ್ಲವನ್ನೂ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತ ಪಡಿಸುವ ಜನರೇಷನ್ನಲ್ಲಿ ನಾವಿದ್ದೇವೆ.

ಹೀಗಿರುವಾಗ ನಮ್ಮ ಸಾಮಾಜಿಕ ತಾಣಗಳನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಟ್ಟುಕೊಳ್ಳುವುದೂ ಅತ್ಯಗತ್ಯ. ಹೊಸ ವರುಷದ ಹೊಸ್ತಿಲಲ್ಲಿರುವ ಈ ವೇಳೆ ನಿಮ್ಮ ಸಾಮಾಜಿಕ ಮಾಧ್ಯಮಗಳನ್ನೂ ಸ್ವಚ್ಛವಾಗಿಡುವ ಸಂಕಲ್ಪ ಮಾಡಿಕೊಳ್ಳಿ.

ಗೂಗಲ್ನಲ್ಲಿ ನಿಮ್ಮನ್ನೇ ಹುಡುಕಿ

ಗೂಗಲ್ ನಲ್ಲಿ ನಿಮ್ಮ ಹೆಸರನ್ನು ಹುಡುಕಿ. ಅಲ್ಲಿ ನಿಮ್ಮ ಬಗ್ಗೆ ಯಾವ ಮಾಹಿತಿ ಅಥವಾ ಫೋಟೊ ಡಿಸ್ಪ್ಲೇ ಆಗುತ್ತಿದೆ ಎಂದು ನೋಡಿ. ನಿಮ್ಮ ಯಾವುದಾದರೂ ಚಿತ್ರ ಗೂಗಲ್ನಲ್ಲಿ ಕಾಣಿಸಿಕೊಳ್ಳುವುದರ ಬಗ್ಗೆ ಆಕ್ಷೇಪವಿದ್ದರೆ, ಆ ಚಿತ್ರವನ್ನು ಡಿಲೀಟ್ ಮಾಡಿ.

ಫೇಸ್ಬುಕ್ನಲ್ಲಿ ನೀವು ಹೇಗೆ ಕಾಣುತ್ತಿದ್ದೀರಿ?

ಫೇಸ್ಬುಕ್ನಲ್ಲಿ ನಿಮ್ಮ ಫ್ರೊಫೈಲ್ ಫೋಟೊಗೆ ಸಿಕ್ಕಾಪಟ್ಟೆ ಲೈಕ್ ಸಿಕ್ಕಿರಬಹುದು. ಆದರೆ ನೀವು ಫೇಸ್ಬುಕ್ನಲ್ಲಿ ಬರೆಯುವ ಸ್ಟೇಟಸ್, ಶೇರ್ ಮಾಡುವ ಲಿಂಕ್, ಕಾಮೆಂಟ್ ಪ್ರತಿಕ್ರಿಯೆಗಳು ಕೂಡಾ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವೆ, ನಿಮ್ಮ ಫೇಸ್ಬುಕ್ ಪ್ರೊಫೈಲ್ ಮೇಲೆ ಕಣ್ಣಾಡಿಸಿ, ನಿಮಗೆ ಕಿರಿಕಿರಿಯನ್ನುಂಟು ಮಾಡುವ ಸ್ನೇಹಿತರಿದ್ದರೆ ಅವರನ್ನು ಫ್ರೆಂಡ್ ಲಿಸ್ಟ್ ನಿಂದ ತೆಗೆದುಹಾಕಿ.

ನೀವು ಶೇರ್ ಮಾಡಿರುವ ಅಥವಾ ಬರೆದ ಸ್ಟೇಟಸ್ ನೆಗೆಟಿವ್ ಆಗಿದ್ದರೆ ಅಂಥದನ್ನು ಡಿಲೀಟ್ ಮಾಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಆದಷ್ಟು ಪಾಸಿಟಿವ್ ಆಗಿರಿ. ಅಗತ್ಯ ಎನಿಸಿದರೆ ಪ್ರೈವಸಿ ಸೆಟ್ಟಿಂಗ್ ಬದಲಿಸಿ. ಎಲ್ಲ ವಿಷಯಗಳನ್ನೂ ಪಬ್ಲಿಕ್ ಆಗಿ ಇಡಬೇಡಿ.
ನ್ಯೂಸ್ ಫೀಡ್ಗಳಲ್ಲಿ ಕಾಣಿಸಿಕೊಳ್ಳುವ ವಿಷಯಗಳನ್ನು ನಿಯಂತ್ರಿಸಿ.

ನಿಮ್ಮ ಆಪ್ತ ಸ್ನೇಹಿತರೇ ನೆಗೆಟಿವ್ ವಿಷಯಗಳನ್ನು ಶೇರ್ ಮಾಡುತ್ತಿದ್ದು, ಅದು ನಿಮ್ಮ ನ್ಯೂಸ್ ಫೀಡ್ನಲ್ಲಿ ಕಾಣಿಸಿಕೊಂಡು ನಿಮಗೆ ಕಿರಿಕಿರಿಯಾಗುತ್ತಿದ್ದರೆ ಆ ಸ್ನೇಹಿತರ ಪೋಸ್ಟ್ ಹೈಡ್ ಮಾಡಿ. ಆ ಸ್ನೇಹಿತರ ಯಾವುದೇ ಪೋಸ್ಟ್ ನಿಮ್ಮ ವಾಲ್ನಲ್ಲಿ ಕಾಣಿಸುವುದು ಬೇಡ ಎಂದಾದರೆ snooze ಆಪ್ಶನ್ ಕ್ಲಿಕ್ ಮಾಡಿ. ಇಲ್ಲವೇ ಅನ್ಫಾಲೋ ಮಾಡಿ.

Snooze ಮಾಡುವುದು ಹೀಗೆ

ಫೇಸ್ಬುಕ್ ಪೋಸ್ಟ್ ನ ಬಲಭಾಗದಲ್ಲಿ ಡ್ರಾಪ್ ಡೌನ್ ಮೆನುನಲ್ಲಿ Snooze ಆಪ್ಶನ್ ಇದೆ. ಈ ಆಪ್ಶನ್ ಕ್ಲಿಕ್ ಮಾಡಿದರೆ 30 ದಿನಗಳವರೆಗೆ ಆ ವ್ಯಕ್ತಿಯ ಯಾವುದೇ ಪೋಸ್ಟ್ ನಿಮಗೆ ಕಾಣಿಸುವುದಿಲ್ಲ.

ಫೋಟೊ ಡಿಲೀಟ್ ಮಾಡಿ

ನಾವು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದ ಕೆಲವು ಫೋಟೊಗಳು ಟ್ರಾಲ್ ಆಗುವುದುಂಟು. ಮುಜುಗರವನ್ನುಂಟು ಮಾಡುವ ಯಾವುದಾದರೂ ಫೋಟೊ ಇದ್ದರೆ ಅದನ್ನು ಡಿಲೀಟ್ ಮಾಡಿ. ಇನ್ಯಾರಾದರೂ ನಿಮ್ಮ ಫೋಟೊವನ್ನು ಟ್ಯಾಗ್ ಮಾಡಿದ್ದರೆ, ಟ್ಯಾಗ್ ರಿವ್ಯೂ ಮಾಡಿ. ಅನಗತ್ಯ ಫೋಟೊಗಳಿಗೆ ಟ್ಯಾಗ್ ಮಾಡಿದ್ದರೆ ಟ್ಯಾಗ್ ರಿಮೂವ್ ಮಾಡಿ. ಫೋಟೊಗಳನ್ನು ಪಬ್ಲಿಕ್ ಆಗಿ ಇಡುವ ಬದಲು Friends only ಇಟ್ಟರೆ ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.