ನಮ್ಮ ದಾಖಲೆ, ಸರ್ಟಿಫಿಕೇಟ್‌ಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಡಿಜಿಲಾಕರ್ ಹೆಚ್ಚು ಸಹಕಾರಿ. ವಾಹನ ಹಾಗೂ ಚಾಲಕರಿಗೆ ಸಂಬಂಧಪಟ್ಟ ದಾಖಲೆಗಳನ್ನು ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಅಪ್‌ಲೋಡ್ ಮಾಡಲು ಅವಕಾಶವಿದೆ. ವಾರದ ಹಿಂದೆವಿದ್ಯುನ್ಮಾನ (ಡಿಜಿಟಲ್) ರೂಪದ ‘ಡಿಜಿ ಲಾಕರ್’ ವ್ಯವಸ್ಥೆಯಲ್ಲಿರುವ ದಾಖಲೆಗಳನ್ನು ಪರಿಗಣಿಸುವಂತೆ ಅಂದಿನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಕಾಗದರಹಿತ ಆಡಳಿತ ಪರಿಕಲ್ಪನೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿರುವ ಡಿಜಿಲಾಕರ್ ಬಳಸುವುದರಿಂದದಾಖಲೆ ಪತ್ರಗಳನ್ನು ಹಿಡಿದುಕೊಂಡು ಓಡಾಡುವ ಕಿರಿಕಿರಿ ಇರಲ್ಲ.

ಡಿಜಿಲಾಕರ್ ಹೇಗೆ ಕಾರ್ಯವೆಸಗುತ್ತದೆ?

https://digilocker.gov.in/ ಎಂಬ ವೆಬ್‌ಸೈಟ್ ನಲ್ಲಿ ಆಧಾರಕಾರ್ಡ್ ಸಂಖ್ಯೆ ಹೊಂದಿರುವ ಯಾರಿಗೆ ಬೇಕಾದರೂ ಡಿಜಿಲಾಕರ್ ಖಾತೆ ತೆರೆಯಬಹುದಾಗಿದೆ.ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ. ಆಧಾರ್ ಸಂಖ್ಯೆ ನಮೂದಿಸಿದ ಕೂಡಲೇನಿಮ್ಮ ಮೊಬೈಲ್‌ಗೆ OTP (ಒನ್ ಟೈಮ್ ಪಾಸ್ ವರ್ಡ್ )ಸೇಜ್ ಬರುತ್ತದೆ. ಈ ಪಾಸ್‌ವರ್ಡ್‌ನ್ನು ನೀವು ಅಲ್ಲಿ ನಮೂದಿಸಿ.

ಇದಾದ ನಂತರ ಬಳಕೆದಾರರ ಹೆಸರು (User Name) ಮತ್ತು Passwordನ್ನು ನಾವು ಕ್ರಿಯೇಟ್ ಮಾಡಬೇಕಾಗುತ್ತದೆ.

ನೀವು ಲಾಗಿನ್ ಆದ ನಂತರ ಎಡಭಾಗದಲ್ಲಿ ಡ್ಯಾಶ್‌ಬೋರ್ಡ್ ಕೆಳಗೆ Issued Documents ಎಂಬ ಆಯ್ಕೆ ಕಾಣುತ್ತದೆ. ಇಲ್ಲಿ ಕ್ಲಿಕ್ ಮಾಡಿದರೆ ಡಿಜಿಲಾಕರ್‌ನಲ್ಲಿ ನೋಂದಣಿ ಮಾಡಿರುವ ಸರ್ಕಾರಿ ಸಂಸ್ಥೆಗಳು, ಅವುಗಳು ನೀಡಿರುವ ದಾಖಲೆಗಳನ್ನು ನಾವು ನೇರವಾಗಿ ನಮ್ಮ ಖಾತೆಗಿಳಿಸಬಹುದು.

ಉದಾಹರಣೆಗೆ ಆಧಾರ್ ಕಾರ್ಡ್ ಇಲ್ಲಿ ಅಪ್‌ಲೋಡ್ ಮಾಡಿ ಸೇವ್ ಮಾಡಿಟ್ಟುಕೊಳ್ಳುವ ಅಗತ್ಯವಿಲ್ಲ. ಇದು issued documentನಲ್ಲಿ ಇರುತ್ತದೆ. ನಿಮಗೆ ಯಾವ ಸರ್ಟಿಫಿಕೇಟ್ ಬೇಕು ಎಂಬುದನ್ನು ಕ್ಲಿಕ್ ಮಾಡಿದರೆ ಆ ದಾಖಲೆ ಸಿಗುತ್ತದೆ. ಇಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಶಿಕ್ಷಣ ಮತ್ತು ವಿಮೆ ಎಂಬ ನಾಲ್ಕು ಕೆಟಗರಿಗಳನ್ನು ಕಾಣಬಹುದು. ಆಧಾರ್, ಸಿಬಿಎಸ್‌ಇ, ಆದಾಯ ತೆರಿಗೆ ಡಾಕ್ಯುಮೆಂಟ್‌ಗಳೆಲ್ಲ ಕೇಂದ್ರ ಸರ್ಕಾರದ ಡಾಕ್ಯುಮೆಂಟ್‌ಗಳಲ್ಲಿದ್ದರೆ, ರಾಜ್ಯ ಸರ್ಕಾರದ ಡಾಕ್ಯುಮೆಂಟ್‌ಗಳಡಿಯಲ್ಲಿ ಮೋಟಾರ್ ವೆಹಿಕಲ್ ಡಿಪಾರ್ಟ್‌ಮೆಂಟ್ , ರಾಜ್ಯ ಶಿಕ್ಷಣ ಇಲಾಖೆಯ ಡಾಕ್ಯುಮೆಂಟ್ ಮೊದಲಾದವುಗಳನ್ನು ಪಡೆಯಬಹುದು. ಇಲ್ಲಿ ಆಯಾ ರಾಜ್ಯ ಯಾವ ಡಾಕ್ಯುಮೆಂಟ್‌ಗಳನ್ನು ಡಿಜಿಲಾಕರ್‌ನಲ್ಲಿ ಲಿಂಕ್ ಮಾಡಿದೆ ಎಂಬುದನ್ನು ನೋಡಿ, ಡಾಕ್ಯುಮೆಂಟ್ ಪಡೆಯಬಹುದು.

ಉದಾಹರಣೆಗೆ ನಿಮ್ಮ ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟ್ ಬೇಕೆಂದರೆ Education ಕೆಟಗರಿಯಲ್ಲಿ ಕ್ಲಿಕ್ ಮಾಡಿ, ಅಲ್ಲಿ ಶೈಕ್ಷಣಿಕ ಮಂಡಳಿ/ ಯುನಿವರ್ಸಿಟಿ ಹೆಸರಿರುತ್ತದೆ. ಅದನ್ನು ಕ್ಲಿಕ್ ಮಾಡಿ ನೀವು ಪಡೆಯಲಿಚ್ಛಿಸುವ ದಾಖಲೆಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದರೆ ಸಾಕು.

Issued Documents ನಡಿಯಲ್ಲಿ ನಿಮ್ಮ ದಾಖಲೆ ಪತ್ರಗಳು ಸೇವ್ ಆಗಿದ್ದು , ಅಗತ್ಯವಿದ್ದರೆ ಪಿಡಿಎಫ್ ಡೌನ್‌ಲೋಡ್ ಮಾಡಬಹುದು.

ಇದಲ್ಲದೆ ನಿಮ್ಮಲ್ಲಿರುವ ಇತರ ದಾಖಲೆಗಳು ಅಪ್‌ಲೋಡ್ ಮಾಡಿಟ್ಟುಕೊಳ್ಳಬುಹುದು.

Uploaded Documents ಕ್ಲಿಕ್ ಮಾಡಿದರೆ ಅಲ್ಲಿ Documents ಮತ್ತು My certificate ಎಂಬ ಎರಡು ಫೋಲ್ಡರ್ ಕಾಣಿಸುತ್ತದೆ. ಅಗತ್ಯವಿದ್ದರೆ ಬೇರೊಂದು ಪೋಲ್ಡರ್ ಕೂಡಾ ಕ್ರಿಯೇಟ್ ಮಾಡಬಹುದು. ಅಪ್‌ಲೋಡ್ ಆಪ್ಶನ್ ಕ್ಲಿಕ್ಕಿಸಿ ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಬುಹುದು.

Digilocker ಮೊಬೈಲ್ ಆ್ಯಪ್

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದ್ದು, ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡುವ ವಿಧಾನ ಎಲ್ಲ ಮೇಲೆ ವಿವರಿಸಿದಂತೆಯೇ ಇರುತ್ತದೆ. ಇಲ್ಲಿ Scan QR code ಎಂಬ ಆಪ್ಶನ್ ಇದೆ. ಡಿಜಿಲಾಕರ್‌ನಲ್ಲಿ ಲಭ್ಯವಿರುವ ಸರ್ಟಿಫಿಕೇಟ್‌ಗಳಲ್ಲಿರುವ QR code ಮಾತ್ರ ಸ್ಕ್ಯಾನ್ ಮಾಡಿ ಆ ಡಾಕ್ಯುಮೆಂಟ್‌ಗಳನ್ನು ಪಡೆಯಲು ಮಾತ್ರ ಇದನ್ನು ಬಳಸಬಹುದು.

ನಿಮ್ಮ ಮೊಬೈಲ್ ಡ್ಯಾಶ್‌ಬೋರ್ಡ್‌ನಲ್ಲಿ ನೋಟಿಫಿಕೇಶನ್‌ಗಳು ಕಾಣಿಸುತ್ತವೆ. ನಿಮಗೆ ಅಗತ್ಯವಿರುವ ದಾಖಲೆಗಳನ್ನು ಯಾವ ರೀತಿ ಪಡೆಯಬಹುದು ಎಂಬುದು ಈ ನೋಟಿಫಿಕೇಶನ್‌ನಲ್ಲಿರುತ್ತದೆ. ನಿಮ್ಮ ಪ್ರೊಫೈಲ್ ಆಧಾರ್ ಲಿಂಕ್ ಹೊಂದಿರುವುದರಿಂದ ಆಧಾರ್ ಕಾರ್ಡ್‌ನಲ್ಲಿರುವ ಫೋಟೊ ನಿಮ್ಮ ಪ್ರೊಫೈಲ್ ಫೋಟೊ ಆಗಿರುತ್ತದೆ.

ಡಿಜಿಲಾಕರ್‌ನಲ್ಲಿ ಏನೆಲ್ಲಾ ಇಡಬಹುದು?

ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್, ಡಿಗ್ರಿ ಸರ್ಟಿಫಿಕೇಟ್, ದಾಖಲೆ ಪತ್ರ ಮೊದಲಾದವುಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಲಾಕರ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. ಡಿಜಿಟಲ್ ಲಾಕರ್‌ನಲ್ಲಿ ನಮ್ಮ ದಾಖಲೆ ಪತ್ರಗಳು ಸುರಕ್ಷಿತವಾಗಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.