ಬೆಂಗಳೂರು: ಈ ದಿನಗಳಲ್ಲಿ ಸ್ಮಾರ್ಟ್‌ಫೋನ್ ಬಳಸುವ ಬಹುತೇಕರು ಅದರಲ್ಲಿ ಗೂಗಲ್ ಪೇ, ಫೋನ್‌ಪೆ ಮತ್ತು ಪೇಟಿಎಂ ಅಪ್ಲಿಕೇಶನ್‌ಗಳನ್ನು ಹೊಂದಿರುತ್ತಾರೆ.

ಆದರೆ ಕೆಲವೊಮ್ಮೆ ಅಚಾನಕ್ ಆಗಿ ಫೋನ್ ಕಳೆದುಹೋದರೆ, ಇಲ್ಲವೇ ಯಾರಾದರೂ ಕಳವು ಮಾಡಿದರೆ ಅಂತಹ ಸಂದರ್ಭದಲ್ಲಿ ಏನು ಮಾಡುವುದು ಎಂಬ ಚಿಂತೆ ಅನೇಕರನ್ನು ಕಾಡಿರುತ್ತದೆ.

ಅಂತಹ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಲಾಗಿನ್ ಆಗಿರುವ ಗೂಗಲ್ ಪೇ, ಫೋನ್‌ಪೆ ಮತ್ತು ಪೇಟಿಎಂ ಅನ್ನು ಬ್ಲಾಕ್ ಮಾಡುವುದು ಅಗತ್ಯವಾಗಿರುತ್ತದೆ.

ಹೀಗೆ ಮಾಡುವುದರಿಂದ ನಿಮ್ಮ ಫೋನ್‌ಪೆ, ಪೇಟಿಎಂ ಮತ್ತು ಗೂಗಲ್ ಪೇ ದುರುಪಯೋಗವಾಗುವುದನ್ನು ತಪ್ಪಿಸಬಹುದು.

ಗೂಗಲ್ ಪೇ ಬಳಕೆದಾರರು

ಗೂಗಲ್ ಪೇ ಬಳಕೆದಾರರಾಗಿದ್ದರೆ 18004190157 ಎಂಬ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ. ಬಳಿಕ ಅಲ್ಲಿ ಲಭ್ಯವಿರುವ ಭಾಷೆ ಆಯ್ಕೆ ಮಾಡಬೇಕು.

ನಂತರ, ಯಾವ ವಿಚಾರಕ್ಕೆ ಕರೆ ಮಾಡಿದ್ದೀರಿ ಎನ್ನುವ ಕುರಿತು ಅಲ್ಲಿರುವ ಆಯ್ಕೆಯನ್ನು ಗಮನಿಸಿ, ಸೂಕ್ತ ಆಯ್ಕೆ ಮಾಡಿ.

ನಂತರ, ಅಲ್ಲಿರುವ ಸೇವಾ ಸಿಬ್ಬಂದಿ ಜತೆ ಮಾತನಾಡುವ ಆಯ್ಕೆಯ ಮೂಲಕ, ಅವರ ಸಹಾಯ ಪಡೆದು, ನಿಮ್ಮ ಗೂಗಲ್ ಪೇ ಖಾತೆಯನ್ನು ಬ್ಲಾಕ್ ಮಾಡಬಹುದು.

ಅಲ್ಲದೆ, ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಖಾತೆಯನ್ನು ರಿಮೋಟ್ ಡಾಟಾ ವೈಪ್ ಆಯ್ಕೆ ಮೂಲಕವೂ ನಿಮ್ಮ ಗೂಗಲ್ ಪೇ ಡಾಟಾವನ್ನು ಅಳಿಸಬಹುದು.

ಕಳವಾದ ಫೋನ್ಗಳ ಐಎಂಇಐ ಬ್ಲಾಕ್: ದೆಹಲಿ ಪೊಲೀಸ್ ಹೊಸ ತಂತ್ರ

ಪೇಟಿಎಂ ಖಾತೆ ಬ್ಲಾಕ್ ಮಾಡುವುದು ಹೇಗೆ?

ಮೊದಲಿಗೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಹೆಲ್ಪ್‌ಲೈನ್ ಸಂಖ್ಯೆ 01204456456 ಗೆ ಕರೆ ಮಾಡಿ.

ಅಲ್ಲಿ, ಫೋನ್ ಕಳೆದುಹೋಗಿರುವ ಆಯ್ಕೆ ಮಾಡಿ.

ಪ್ರತ್ಯೇಕ ನಂಬರ್ ಎಂಟರ್ ಮಾಡುವ ಆಯ್ಕೆ ಪಡೆದುಕೊಳ್ಳಿ, ಬಳಿಕ ಕಳವಾದ ಫೋನ್‌ನ ನಂಬರ್ ನಮೂದಿಸಿ.

ನಂತರ, ಲಾಗೌಟ್ ಫ್ರಮ್ ಆಲ್ ಡಿವೈಸ್ ಆಯ್ಕೆ ಗಮನಿಸಿ.

ಮತ್ತೆ, ಪೇಟಿಎಂ ವೆಬ್‌ಸೈಟ್‌ಗೆ ಭೇಟಿ ನೀಡಿ, ಅದರಲ್ಲಿ ಕೊನೆಯಲ್ಲಿರುವ 24x7 ಹೆಲ್ಪ್ ಆಯ್ಕೆ ಮಾಡಿ.

ಬಳಿಕ, ರಿಪೋರ್ಟ್ ಎ ಫ್ರಾಡ್ ಸೆಲೆಕ್ಟ್ ಮಾಡಿ.

ನಂತರ, ಅಲ್ಲಿರುವ ಯಾವುದಾದರೂ ಒಂದು ಸಮಸ್ಯೆಯನ್ನು ಕ್ಲಿಕ್ ಮಾಡಿ, ಮೆಸೇಜ್ ಅಸ್ ಆಯ್ಕೆ ಮಾಡಿ.

ಬಳಿಕ, ಅಲ್ಲಿ ನಿಮ್ಮ ಪೇಟಿಎಂ ಖಾತೆಯನ್ನು ದೃಢೀಕರಿಸಲು ಲಭ್ಯವಿರುವ ದಾಖಲೆ ಒದಗಿಸಿ, ಪೊಲೀಸ್ ದೂರಿನ ಪ್ರತಿಯೂ ಆಗುತ್ತದೆ.

ಅದಾದ ಬಳಿಕ, ಪೇಟಿಎಂ ನಿಮ್ಮ ದೂರು ಮತ್ತು ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ.

ನಿಮ್ಮ ಆಧಾರ್ ಕಾರ್ಡ್ ಅಧಿಕೃತವೇ? ಪರಿಶೀಲಿಸುವುದು ಹೇಗೆ?

ಫೋನ್‌ಪೆ ಖಾತೆದಾರರು ಬ್ಲಾಕ್ ಮಾಡುವುದು ಹೇಗೆ?

ಫೋನ್‌ಪೆ ಖಾತೆ ಹೊಂದಿರುವವರು ಮೊದಲು, 08068727374 ಅಥವಾ 02268727374 ಸಂಖ್ಯೆಗೆ ಕರೆ ಮಾಡಬೇಕು.

ಸೂಕ್ತ ಭಾಷೆ ಆಯ್ಕೆ ಮಾಡಿದ ಬಳಿಕ, ಫೋನ್‌ಪೆ ಖಾತೆ ಕುರಿತ ಸಮಸ್ಯೆ ಬಗ್ಗೆ ದೂರು ನೀಡಲು ಇರುವ ಆಯ್ಕೆ ಬಳಸಿ.

ಬಳಿಕ, ರಿಜಿಸ್ಟರ್ ನಂಬರ್ ನಮೂದಿಸಿ. ನಂತರ, ಒಟಿಪಿ ಬಾರದೇ ಇರುವ ಆಯ್ಕೆ ಎಂಟರ್ ಮಾಡಿ.

ಈಗ, ಸಿಮ್ ಅಥವಾ ಫೋನ್ ಕಳೆದುಹೋದ ವಿವರ ನಮೂದಿಸಲು ಆಯ್ಕೆ ಲಭ್ಯವಾಗುತ್ತದೆ.

ನಂತರ, ಫೋನ್‌ಪೆ ಪ್ರತಿನಿಧಿಯೊಂದಿಗೆ ನಿಮಗೆ ಸಂಪರ್ಕ ಲಭ್ಯವಾಗುತ್ತದೆ. ಬಳಿಕ, ಅಲ್ಲಿ ಕೇಳಲಾಗುವ ವಿವರವನ್ನು ನೀಡಿ, ದಾಖಲೆ ಒದಗಿಸಿ. ಅಲ್ಲಿಗೆ ಪ್ರಕ್ರಿಯೆ ಪೂರ್ಣಗೊಂಡು, ಫೋನ್‌ಪೆ ಖಾತೆ ಬ್ಲಾಕ್ ಆಗುತ್ತದೆ.

ಮೊಬೈಲ್ ಫೋನ್ ಹ್ಯಾಕ್ ಆಗಿದೆಯೆ?...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.