ಮುಂಬೈ: ನಿನ್ನೆ ಬೆಳಿಗ್ಗೆ ಮುಂಬೈನ ಬಾಂದ್ರಾದಲ್ಲಿ ಗೋರಖಪುರಕ್ಕೆ ತೆರಳುವ ರೈಲು ಏರಲು ಮುಂದಾದವರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ 10 ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದವು. ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

ಈ ಘಟನೆ ರೈಲ್ವೆ ಇಲಾಖೆ ಹಾಗೂ ರೈಲ್ವೆ ಸಚಿವರ ವಿರುದ್ಧ ಜನರು ಭಾರಿ ಆಕ್ರೋಶ ಹೊರ ಹಾಕಲು ಕಾರಣವಾಗಿದೆ.

ಇನ್ನು ಘಟನೆ ಹೇಗೆ ನಡೆಯಿತು ಎಂಬುದು ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳಿಂದ ಬಹಿರಂಗವಾಗಿದೆ. ರೈಲು ಹತ್ತಲು ಅನೇಕ ಜನ ಏಕಾಏಕಿ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು ಕಂಡು ಬಂದಿದೆ.

ವಿಡಿಯೊದಲ್ಲಿ, ಕಾಲಿಗೆ ಗಾಯಗಳಾದ ವ್ಯಕ್ತಿಯೊಬ್ಬರು ಪ್ಲಾಟ್ಫಾರ್ಮ್ ಮೇಲೆ ಬಿದ್ದಿದ್ದಾರೆ. ಇತರರು ಈ ವ್ಯಕ್ತಿಯನ್ನು ಗಮನಿಸದೆ ರೈಲು ಹತ್ತುತ್ತಿರುವುದು ದಾಖಲಾಗಿದೆ. ಕಾಲ್ತುಳಿತ ಸಂಭವಿಸಿದಾಗ ಪ್ಲಾಟ್ಫಾರ್ಮ್ ಸಂಖ್ಯೆ ಒಂದರತ್ತ ರೈಲು ಬರುತ್ತಿತ್ತು.

ದೀಪಾವಳಿ ಮತ್ತು ಛತ್ ಹಬ್ಬಗಳ ಕಾರಣಕ್ಕೆ ಊರಿಗೆ ತೆರಳಲು ಜನರು ಬಾಂದ್ರಾ ರೈಲು ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ರೈಲು ಪ್ಲಾಟ್ಫಾರ್ಮ್ಗೆ ಬರುತ್ತಿದ್ದಾಗ, ಕಾಯ್ದಿರಿಸದ ಆಸನಗಳ ಬೋಗಿಗಳತ್ತ ಜನರು ಒಮ್ಮೆಗೇ ನುಗ್ಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.