ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಜಗತ್ತಿನಾದ್ಯಂತ ಜನರು ದೊಡ್ಡ ಕಾರ್ಯಕ್ರಮಗಳಲ್ಲಿ ಸೇರುವುದು, ಶಾಲೆ–ಕಾಲೇಜುಗಳು, ಚಿತ್ರಮಂದಿರ ಹಾಗೂ ಶಾಪಿಂಗ್ ಮಾಲ್ಗಳನ್ನು ಬಂದ್ ಮಾಡಲಾಗಿದೆ. ಬಹುತೇಕ ಸಮಯ ಮನೆಯಲ್ಲಿಯೇ ಕಳೆಯುತ್ತಿರುವುದರಿಂದ ಬೇಸರ ದೂರ ಮಾಡಲು ಕೊರೊನಾ ಕುರಿತು ಪದಗಳನ್ನು ಕಟ್ಟಿ ಹಾಡುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಹಲವು ಹಾಡುಗಳು ಗಮನ ಸೆಳೆದಿವೆ. ಭಾರತದಲ್ಲಿ ಸಿನಿಮಾ ಗೀತೆಗಳು ಹಾಗೂ ಜಾನಪದ ಗೀತೆಗಳ ಟ್ಯೂನ್ಗಳಿಗೆ ಕೊರೊನಾ ಕುರಿತಾದ ಸಾಹಿತ್ಯ ರಚನೆ ಮಾಡಲಾಗಿದೆ. ಇಟಲಿಯಲ್ಲಿಜನರು ಬಾಲ್ಕನಿಗಳಲ್ಲಿ ನಿಂತು ಹಾಡು, ನೃತ್ಯ ಮಾಡುತ್ತಿರುವ ವಿಡಿಯೊ ಈ ಹಿಂದೆ ವೈರಲ್ಆಗಿತ್ತು.

ಶಾರುಖ್ ಖಾನ್ ಅಭಿನಯದ 'ಚಲ್ತೇ ಚಲೇ' ಸಿನಿಮಾದ 'ಸುನೋ ನಾ ಸೊನೊ..' ಹಾಡಿನ ಕೊರೊನಾ ವರ್ಶನ್ ಟ್ವಿಟರ್, ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿವೆ. 'ಕೈ ಕೊಡುವಂತಿಲ್ಲ, ಹೊರಗೂ ಹೋಗುವಂತಿಲ್ಲ, ಮನೆಯಲ್ಲೇ...' ಇಂಥದ್ದೇ ಸಾಲುಗಳನ್ನು ಹಿಂದಿಯಲ್ಲಿ ಕೇಳಬಹುದು.

ಕೇಂದ್ರ ಸಚಿವ ರಾಮ್ದಾಸ್ ಅಠವಳೆ ಅವರ 'ಗೋ ಕೊರೊನಾ' ಎಂದು ಜಪಿಸಿರುವಂತೆ ಹೇಳಿರುವ ಘೋಷಣೆಗಳಿಗೆ ರೀಮಿಕ್ಸ್ ಮಾಡಿ, ಪಾಶ್ಚಾತ್ಯ ಸಂಗಿತದ ಸ್ಪರ್ಶ ನೀಡಲಾಗಿದೆ. ಪಂಜಾಬಿ ಶೈಲಿಯ ಮತ್ತೊಂದು ಹಾಡು ಸಹ ಟ್ವೀಟಿಗರ ಮೆಚ್ಚುಗೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.