ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ಮುಟ್ಟಿನ ಬವಣೆಯ ನಡುವೆಯೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಪ್ರಗತಿಯಲ್ಲಿ ಮಹಿಳೆಯರ ಪಾಲು ಹೆಚ್ಚಾಗಿಯೇ ಇದೆ. ಮುಟ್ಟಿನ ದಿನಗಳಲ್ಲಿ ಒಂದು ಅಥವಾ ಎರಡು ದಿನಗಳ ರಜೆ ದೊರಕಿದರೆ ಅವರು ಮತ್ತಷ್ಟು ಪ್ರಫುಲ್ಲಿತರಾಗಿ ಕೆಲಸದಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.

ಸುಪ್ರೀಂ ಕೋರ್ಟ್ ಈಗಾಗಲೇ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕಾನೂನುಬದ್ಧಗೊಳಿಸಲು ನೀತಿ (ಪಾಲಿಸಿ) ರೂಪಿಸಬೇಕು ಎಂದು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ರಜೆಯನ್ನು ಕಡ್ಡಾಯಗೊಳಿಸಿ ನ್ಯಾಯಾಲಯವೇ ಆದೇಶ ಹೊರಡಿಸಿದರೆ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು ಮಹಿಳೆಯರ ಉದ್ಯೋಗದ ಅವಕಾಶಕ್ಕೆ ಕುತ್ತು ಬರಬಹುದು ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.

ಈ ಮಾತುಗಳನ್ನು ಹೇಳುವ ಬದಲು ಇಂತಹ ನೀತಿ ರೂಪುಗೊಳ್ಳಲು ಪೂರಕವಾದ, ವೈಜ್ಙಾನಿಕ ಸಮರ್ಥನೆಯ, ಸ್ವಲ್ಪ ಕಾಳಜಿಯ ಮಾತುಗಳನ್ನು ಹೇಳಿದಿದ್ದರೆ ನೀತಿ ರೂಪುಗೊಳ್ಳುವ ಬಗ್ಗೆ ಒಂದಿಷ್ಟು ಭರವಸೆ ಬರುತ್ತಿತ್ತು. ಸರ್ಕಾರದ ಮೇಲೆ ಒತ್ತಡ ಬೀಳುತ್ತಿತ್ತು. ಆದರೆ ಈ ಮಾತನ್ನೇ ತಿರುಚಿ ಉದ್ಯಮಗಳು, ಕಂಪನಿಗಳು ಮಹಿಳೆಯರ ಉದ್ಯೋಗ ಅವಕಾಶಕ್ಕೆ ಕೊಕ್ಕೆ ಹಾಕಲು ಪ್ರಯತ್ನಿಸಬಹುದು.

ಮುಟ್ಟಿನ ಅವಧಿಯಲ್ಲಿ ನೋವು ಮತ್ತು ಮನಸ್ಸಿನ ಕಿರಿಕಿರಿ ಸಾಮಾನ್ಯ. ಯಾರೇ ಮಾತನಾಡಿಸಿದರೂ ಸಿಡಿಸಿಡಿ ಎನ್ನುವ ಹಾಗಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಬರುತ್ತಿರುತ್ತವೆ. ಮುಟ್ಟಿನ ದಿನಗಳಲ್ಲಿ ಪ್ರತಿ ಮಹಿಳೆಯೂ ಅನುಭವಿಸುವ ನೋವು ಒಬ್ಬೊಬ್ಬರಲ್ಲಿ ಒಂದೊಂದು ವಿಧವಾಗಿರುತ್ತದೆ. ಪ್ರತಿ ತಿಂಗಳೂ ಕೆಲವರಲ್ಲಿ ಹೊಟ್ಟೆನೋವು ಇನ್ನು ಕೆಲವರಲ್ಲಿ ಸೊಂಟನೋವು, ಸ್ತನಗಳಲ್ಲಿ ನೋವು, ಕಾಲು-ತೊಡೆಗಳಲ್ಲಿ ಸೆಳೆತ, ಅಧಿಕ ರಕ್ತಸ್ರಾವ, ಉರಿಮೂತ್ರ, ಮಲಬದ್ಧತೆ, ಮಾತ್ರವಲ್ಲದೇ ಮಾನಸಿಕವಾಗಿ ಆತಂಕ, ಬೇಸರ, ಕೋಪ, ಅಲ್ಪ ಪ್ರಮಾಣದ ಖಿನ್ನತೆ ಸಾಮಾನ್ಯ.

ಬಹುತೇಕ ಮಹಿಳೆಯರು ಸಹಿಸಿಕೊಳ್ಳುತ್ತಾರೆ. ಆದರೆ ವ್ಯಕ್ತಪಡಿಸುವುದಿಲ್ಲ. ಎಲ್ಲರಲ್ಲೂ ಸಾಮಾನ್ಯವಾಗಿ ಮುಟ್ಟಿನ ಆರಂಭದ ದಿನ ನೋವು ಅಧಿಕವಾಗಿರುತ್ತದೆ. ಉದರದ ಮಾಂಸಖAಡಗಳಲ್ಲಿ ಜರುಗುವ ಆಕುಂಚನ, ಸಂಕೋಚನಗಳಿಂದಾಗಿ ಸಲೀಸಾಗಿ ರಕ್ತಸ್ರಾವವಾಗಲು ಈ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಗರ್ಭಕೋಶದ ಸೋಂಕು ಇದ್ದಲ್ಲಿ ಮತ್ತು ಹುಟ್ಟಿನಿಂದಲೇ ಹಿಂದಕ್ಕೆ ಬಾಗಿದ ಗರ್ಭಕೋಶ ಇದ್ದಲ್ಲಿ ನೋವು ಇದ್ದೇ ಇರುತ್ತದೆ. ಇಂತಹ ಹಲವು ಕಾರಣಗಳಿಂದಾಗಿ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯ ಇದೆ.

ಈ ಕಾರಣದಿಂದ ಉದ್ಯೋಗದ ಸ್ಥಳದಲ್ಲಿ ಮುಟ್ಟಿನ ರಜೆ ನೀಡುವ ಬಗ್ಗೆ ವಿಶ್ವದಾದ್ಯಂತ ಚರ್ಚೆಗಳು ನಡೆಯುತ್ತಿವೆ. ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ತೈವಾನ್ಗಳಲ್ಲಿ ಈಗಾಗಲೇ ಎರಡು ದಿನಗಳ ಮತ್ತು ಆಫ್ರಿಕಾದ ಜಾಂಬಿಯಾದಲ್ಲಿ ಒಂದು ದಿನದ ಮುಟ್ಟಿನ ರಜೆಯನ್ನು ಈಗಾಗಲೇ ಕಾನೂನುಬದ್ಧಗೊಳಿಸಲಾಗಿದೆ. ಈ ಎಲ್ಲಾ ದೇಶಗಳಲ್ಲಿ ಮಹಿಳೆಯರು ಕೆಲಸ ಮಾಡುವ ಸಾಮರ್ಥ್ಯ ಹೆಚ್ಚಾಗಿರುವುದು ಅಂಕಿಅಂಶಗಳು ಪ್ರಚುರಪಡಿಸುತ್ತವೆ. ಕೋವಿಡ್ ನಂತರ ಸ್ಪೇನಿನಲ್ಲಿ ಮುಟ್ಟಿನ ರಜೆ ನೀಡಲು ಮಸೂದೆ ಮಂಡಿಸಲಾಗಿದೆ.

ಕೋವಿಡ್ ಸಮಯದಲ್ಲಿ ತಿಂಗಳುಗಟ್ಟಲೇ ವರ್ಕ್ ಫ್ರಂ ಹೋಮ್ ಮಾಡುವಾಗ ಮಹಿಳೆಯರಿಗೆ ಮುಟ್ಟಿನ ಅವಧಿಯ ರಜೆಯ ಮಹತ್ವದ ಅರಿವು ಹೆಚ್ಚಾಯಿತು. ಆ ನಂತರ ಖಾಸಗಿ ಕಂಪನಿಯೊಂದು ರಜೆ ಘೋಷಿಸಿತು. ಭಾರತದಲ್ಲಿ ೧೯೯೨ರಲ್ಲಿ ಬಿಹಾರದಲ್ಲಿ ಮಹಿಳೆಯರಿಗೆ ಎರಡು ದಿನಗಳ ಮುಟ್ಟಿನ ರಜೆ ನೀಡಲಾಗುತ್ತಿದೆ. ೨೦೧೭ರಲ್ಲಿ ಅರುಣಾಚಲ ಪ್ರದೇಶದಲ್ಲಿ ‘ದಿ ಮೆನ್ಸು÷್ಟçಯೇಷನ್ ಬೆನಿಫಿಟ್ಸ್ ಬಿಲ್ ೨೦೧೭’ ಎಂಬ ಖಾಸಗಿ ಮಸೂದೆ ಮಂಡಿಸಲಾಗಿದೆ. ಇದರ ಪ್ರಕಾರ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ಉದ್ಯೋಗಸ್ಥ ಮಹಿಳೆಯರು ಪ್ರತಿ ತಿಂಗಳು ಎರಡು ದಿನಗಳ ರಜೆಗೆ ಅರ್ಹರಾಗಿರುತ್ತಾರೆ. ಇದೊಂದು ಕಾನೂನಾಗಬೇಕಿದೆ.

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಅಕ್ಕಂದಿರಿಗೆ ಮುಟ್ಟಿನ ರಜೆ ಕೊಡುವ ಬಗ್ಗೆ ಮಾದರಿ ನೀತಿ ರೂಪಿಸಿಕೊಡಲು ತಜ್ಞರ ಸಮಿತಿ ರಚಿಸಿದ್ದು ವರದಿ ಬಹುತೇಕ ಸಿದ್ಧವಾಗಿದೆ. ಆದರೆ ಈ ಮಾದರಿ ನೀತಿ ರೂಪಿಸುವದರಲ್ಲಿ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರನ್ನು ಹೊರಗಿಡಲಾಗಿದೆ. ಇದು ಯಾಕೆಂದು ಇನ್ನೂ ತಿಳಿದು ಬಂದಿಲ್ಲ. ಅವರಿಗೆ ಪ್ರತ್ಯೇಕ ಸೌಲಭ್ಯ ಈಗಾಗಲೇ ಇದೆಯೋ ಅಥವಾ ಅವರಿಗೆ ಪ್ರತ್ಯೇಕ ನೀತಿಯನ್ನು ರೂಪಿಸಲಾಗುತ್ತಿದೆಯೋ ತಿಳಿದಿಲ್ಲ.

ಮುಟ್ಟಿನ ಸಮಯದಲ್ಲಿ ಪ್ರತಿ ಉದ್ಯೋಗದ ಸ್ಥಳದಲ್ಲಿ ಮಹಿಳೆಯರಿಗೆ ರಜೆ ನೀಡುವ ಸೌಲಭ್ಯ ಮತ್ತು ವಿಶ್ರಾಂತಿಯ ಸ್ಥಳ ಇರಲೇಬೇಕು. ಇದರಿಂದ ಅವರ ಕಾರ್ಯಕ್ಷಮತೆ ಹೆಚ್ಚುತ್ತದೆ. ಇಂಥ ಕಾನೂನು ಬಂದಲ್ಲಿ ಮಹಿಳೆಯರಿಗೆ ಮುಟ್ಟಿನ ದಿನಗಳು ಹೆಚ್ಚು ಸಹನೀಯವಾಗಲು ಸಾಧ್ಯ. ಮುಟ್ಟಿನ ರಜೆ ಮಹಿಳೆಯರ ಹಕ್ಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.