ಢಾಕಾ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಾಂಗ್ಲಾದ ನೈರುತ್ಯ ಗೋಪಾಲ್‌ಗಂಜ್ ಜಿಲ್ಲೆಯ ತುಂಗಿಪಾರದಲ್ಲಿರುವ ಶೇಖ್ ಮುಜಿಬುರ್ ರಹಮಾನ್ ಅವರ ‘ಬಂಗಬಂಧು‘ ಸ್ಮಾರಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

ಮುಜಿಬುರ್ ರಹಮಾನ್ ಅವರ ಪುತ್ರಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಂದ ಪುಷ್ಪಗುಚ್ಚವನ್ನು ಪಡೆದ ಅವರು, ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಹಮಾನ್ ಅವರ ಕಿರಿಯ ಪುತ್ರಿಯೂ ಹಾಜರಿದ್ದರು.

ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿದ್ದ ಮೋದಿಯವರು ಬಂಗಬಂಧು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಕೆಲವು ನಿಮಿಷ ಮೌನ ಆಚರಿಸಿದರು. ಇದಕ್ಕೂ ಮುನ್ನ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಸ್ಮಾರಕಕ್ಕೆ ‘ಫಾತಿಹ‘ ಅರ್ಪಿಸಿದರು. ಪ್ರಧಾನಿ ನರೇಂದ್ರ ಮೋದಿ, ‘ಬಂಗಬಂಧು‘ ಸ್ಮಾರಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗಣ್ಯರು.

ಮೋದಿಯವರು ಸ್ಮಾರಕದ ಸಂಕಿರಣದಲ್ಲಿದ್ದ ‘ಸಂದರ್ಶಕರ ಪುಸ್ತಕ‘ದಲ್ಲಿ ಸಹಿ ಹಾಕಿ, ಪ್ರಾಂಗಣದಲ್ಲಿ ಗಿಡನೆಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.