ಕಹ್ರಾಮನ್ಮಾರಾಸ್, ಟರ್ಕಿ : ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ್ದ ಭಾರಿ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ ಭಾನುವಾರ 33,179ಕ್ಕೆ ಏರಿದೆ. ವಿಶ್ವಸಂಸ್ಥೆ ಅಧಿಕಾರಿಗಳು ಸಾವಿನ ಸಂಖ್ಯೆಯು ದುಪ್ಪಟ್ಟಾಗಬಹುದು ಎಂದು ಶಂಕಿಸಿದ್ದಾರೆ.

ಭೂಕಂಪನ ಸಂಭವಿಸಿದ ವಾರದ ನಂತರ ಭಾನುವಾರ, ರಕ್ಷಣಾ ಸಿಬ್ಬಂದಿಯ ಅವಶೇಷಗಳಡಿ ಸಿಕ್ಕಿಬಿದ್ದಿದ್ದ
7 ತಿಂಗಳ ಮಗು ಮತ್ತು ಬಾಲಕಿಯನ್ನು ರಕ್ಷಿಸಿದ್ದಾರೆ. ರಿಕ್ಟರ್ ಮಾಪನದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದ್ದ ಭೂಕಂಪನ ಫೆ. 6ರಂದು ಸಂಭವಿಸಿತ್ತು.

ಶೋಧ ಕಾರ್ಯ ಮುಂದುವರಿದಿರುವಂತೆ ಅವಶೇಷಗಳಡಿಯಿಂದ ಶವಗಳು ಪತ್ತೆಯಾಗುತ್ತಿವೆ. 80 ಸಾವಿರ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಸಿರಿಯಾದಲ್ಲಿ ಮೃತರ ಸಂಖ್ಯೆ 3,553ಕ್ಕೆ, ಟರ್ಕಿಯಲ್ಲಿ 29,626ಕ್ಕೆ ಏರಿದೆ. ಅಲ್ಲದೆ, ಸುಮಾರು 12,000 ಕಟ್ಟಡಗಳು ಪೂರ್ಣವಾಗಿ ಅಥವಾ ಭಾಗಶಃ ನಾಶವಾಗಿವೆ. ಒಟ್ಟು 92,600 ಮಂದಿ ಗಾಯಗೊಂಡಿದ್ದಾರೆ.

ಸಾವಿನ ಸಂಖ್ಯೆ ದುಪ್ಪಟ್ಟಾಗಬಹುದು ಎಂದು ವಿಶ್ವಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ‘8.70 ಲಕ್ಷ ಜನರಿಗೆ ಆಹಾರದ ತುರ್ತು ನೆರವಿನ ಅಗತ್ಯವಿದೆ. ಸಿರಿಯಾದಲ್ಲಿ 53 ಲಕ್ಷ ಜನ ವಸತಿ ಕಳೆದು ಕೊಂಡಿದ್ದಾರೆ. ಒಟ್ಟು 2.6 ಕೋಟಿ ಜನ ಸಂತ್ರಸ್ತರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಸೌಲಭ್ಯಗಳ ಕೊರತೆ ಮತ್ತು ಬಾಧಿಸುತ್ತಿರುವ ತೀವ್ರ ಚಳಿಯ ನಡು
ವೆಯೇ ಸಾವಿರಾರು ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

‘ಜಗತ್ತು ಉಳಿದಿದೆಯೇ?’: ಟರ್ಕಿಯ ಕಹ್ರಾಮನ್ಮಾರಾಸ್‌ನಲ್ಲಿ 70 ವರ್ಷದ ವೃದ್ಧೆಯನ್ನು ರಕ್ಷಿಸಲಾಗಿದೆ. ಬಾಹ್ಯ ಜಗತ್ತು ಕಂಡೊಡನೆಯೇ ಅವರು ‘ಜಗತ್ತು ಉಳಿದಿದೆಯೇ’ ಎಂದು ಪ್ರಶ್ನಿಸಿದ್ದು, ಜೀವ ಉಳಿದಿದೆ ಎಂದು ದೇವರಿಗೆ ನಮಿಸಿದರು.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಏಳು ತಿಂಗಳ ಮಗು ಹಮ್ಜಾ, 13 ವರ್ಷದ ಬಾಲಕಿ ಎಸ್ಮಾ ಸುಲ್ತಾನ್‌ರನ್ನು ಭೂಕಂಪನದ 140 ಗಂಟೆ ನಂತರ ರಕ್ಷಿಸಲಾಗಿದೆ. ಇನ್ನು ಸಾವಿರಾರು ಜನರು ಕಾಣೆಯಾಗಿದ್ದು, ಪತ್ತೆಗೆ ಸಂಬಂಧಿಕರು ಪರಿತಪಿಸುತ್ತಿದ್ದಾರೆ. ಮೃತರ ಶವಗಳನ್ನು ಕಾಯ್ದಿಡುವುದು ಸಿಬ್ಬಂದಿಗೆ ಸವಾಲಾಗಿದೆ. ‘ನಾವು ಇನ್ನು ಹೆಚ್ಚು ಕಾಯುವುದಿಲ್ಲ. ನಿರ್ದಿಷ್ಟ ಸಮಯ ಕಾಯುವಿಕೆಯ ಬಳಿಕ ಶವಗಳ ಅಂತ್ಯ
ಕ್ರಿಯೆಯನ್ನು ನಡೆಸಲಾಗುವುದು’ ಎಂದು ಅಧಿಕಾರಿ ಟುಬಾ ಯೊಲ್ಕು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.