ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹೋರಿ ಹಬ್ಬದ ರೋಚಕ ಕ್ಷಣ
ಚಿತ್ರ– ಎಚ್.ಎಸ್. ರಘು, ಶಿಕಾರಿಪುರ.
ರಾಣೆಬೆನ್ನೂರು ಕಾ ರಾಜಾ
ಹೋರಿ ಹಬ್ಬದ ಒಂದು ರೋಚಕ ಕ್ಷಣ
ಸಂಗ್ರಹ ಚಿತ್ರ
-ಪ್ರಕಾಶ್ ಬುರಡಿಕಟ್ಟಿ (ಕಿಟ್ಟಣ್ಣ) ರಾಣೆಬೆನ್ನೂರು, ರಾಣೆಬೆನ್ನೂರು ಕಾ ರಾಜಾ ಹೋರಿ ಮಾಲೀಕರು.
ರೈತರು, ಯುವಕರಿಂದ ಪ್ರೇರಣೆ: ಯಂತ್ರೋಪಕರಣ ಹಾಗೂ ಗೋಹತ್ಯೆಯಿಂದ ಬೇಸಾಯದಲ್ಲಿ ಎತ್ತು ಹೋರಿಗಳ ಬಳಕೆ ವ್ಯಾಪಕವಾಗಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೋರಿ ಹಬ್ಬದ ಹೆಸರಿಗಾದರೂ ನಮ್ಮ ರೈತರು ದನ ಕರುಗಳನ್ನು ಉಳಿಸಬೇಕೆಂದು ಹೋರಿಗಳನ್ನು ಕಟ್ಟುತ್ತಿದ್ದಾರೆ. ಹೋರಿ ಹಬ್ಬ ಆಯೋಜಿಸಲು ಮುಖ್ಯವಾಗಿ ರೈತರು, ಯುವಕರು ಪ್ರೇರಣೆ ಕೊಡುತ್ತಿದ್ದಾರೆ.ನಮ್ಮ ಭಾಗದ ಅನೇಕ ಗ್ರಾಮಸ್ಥರಿಗೆ ಹೋರಿ ಹಬ್ಬ ಆಯೋಜಿಸುವುದು ಪ್ರತಿಷ್ಠೆಯ ವಿಷಯವಾಗುತ್ತಿದೆ. ನಮ್ಮ ಭಾಗದ ಸಾಂಸ್ಕೃತಿಕ ಸಾಹಸ ಕ್ರೀಡೆಯಾಗಿ ರಾಜ್ಯ ಹೊರರಾಜ್ಯದಲ್ಲಿ ಗಮನ ಸೆಳೆಯುತ್ತಿರುವ ಹೋರಿ ಹಬ್ಬ ಉಳಿಯಲಿ, ಬೆಳೆಯಲಿ.
-ಪ್ರಕಾಶ್ ಬುರಡಿಕಟ್ಟಿ (ಕಿಟ್ಟಣ್ಣ) ರಾಣೆಬೆನ್ನೂರು, ರಾಣೆಬೆನ್ನೂರು ಕಾ ರಾಜಾ ಹೋರಿ ಮಾಲೀಕರು.
-ಶಿವು ಅಲಿಯಾಸ್ ಶಿವು 01, ಬುಲ್ ಕ್ಯಾಚರ್, ಶಿರಸಿ
ದೇಶಿ ಸಾಹಸ ಕ್ರೀಡೆ: ಕಳೆದ ಎರಡು ವರ್ಷಗಳಿಂದ ಹೋರಿ ಬೆದರಿಸಲು ಹೋಗುತ್ತಿದ್ದೇನೆ. ಈ ಎರಡು ವರ್ಷದಲ್ಲಿ ಆರು ಭಾರಿ ಪ್ರಶಸ್ತಿ ತೆಗೆದುಕೊಂಡಿದ್ದೇನೆ. ಹೋರಿ ಬೆದರಿಸುವಾಗ ನಮ್ಮ ಜೀವಕ್ಕೆ ನಾವೇ ಹೊಣೆ. ಹೋರಿ ಹಿಡಿದ ಒಬ್ಬನಿಗೆ ಮಾತ್ರ ಪ್ರಶಸ್ತಿ ಕೊಡುತ್ತಾರಾದರೂ ನಮ್ಮ ಸಹಾಯಕ್ಕೆ ನಮ್ಮ ಸಂಗಡಿಗರು ಇರುತ್ತಾರೆ. ಹೋರಿ ಹಿಡಿದವರಿಗೆ ಚಿನ್ನ, ಬೆಳ್ಳಿ, ಬೈಕ್, ನಗದು ಇತ್ಯಾದಿ ಆಕರ್ಷಕ ಬಹುಮಾನ ಕೊಡುತ್ತಾರೆ ಎಂದು ಹೋರಿ ಹಿಡಿಯಲಷ್ಟೇ ಹೋಗುವುದಿಲ್ಲ ಅದೊಂದು ರೀತಿ ನಮಗೆ ದೇಶಿ ಸಾಹಸ ಕ್ರೀಡೆಯಾಗಿ ಕಾಣುತ್ತಿದೆ.
-ಶಿವು ಅಲಿಯಾಸ್ ಶಿವು 01, ಬುಲ್ ಕ್ಯಾಚರ್, ಶಿರಸಿ
- ಮಾರುತಿ ದೊಡ್ಡಮನಿ, ಹೋರಿ ಹಬ್ಬದ ಸಂಘಟಕ, ಹಿರೇಕೆರೂರು
ಸಾಂಸ್ಕೃತಿಕ ಹೆಗ್ಗುರುತಾಗುತ್ತಿದೆ: ಹೋರಿ ಹಬ್ಬ ಆಯೋಜಿಸುವುದಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ರಾಜ್ಯಮಟ್ಟದ ಹಬ್ಬಗಳು ಹೆಚ್ಚು ಸದ್ದು ಮಾಡುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಕಂಬಳದ ರೀತಿ ನಮ್ಮ ಭಾಗದ ಹೋರಿ ಹಬ್ಬವೂ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತಾಗುತ್ತಿದೆ.
- ಮಾರುತಿ ದೊಡ್ಡಮನಿ, ಹೋರಿ ಹಬ್ಬದ ಸಂಘಟಕ, ಹಿರೇಕೆರೂರು
-ರಂಗನಾಥ ಬನಹಟ್ಟಿ, ಹೋರಿ ಹಬ್ಬದ ಅಭಿಮಾನಿ, ತಿಳವಳ್ಳಿ
ಹಾಜರಾತಿ ಕಡ್ಡಾಯ: ಎಲ್ಲೇ ಹೋರಿ ಹಬ್ಬ ಇದ್ದರೂ ಅಲ್ಲಿ ನಮ್ಮ ಹಾಜರಾತಿ ಕಡ್ಡಾಯ. ಅಖಾಡದಲ್ಲಿ ಹೋರಿಗಳು ಓಡುವುದನ್ನು ನೋಡುವುದು ನಮಗೆಲ್ಲ ಹಬ್ಬ. ಆಗ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನೇ ಮರೆತಿರುತ್ತೇವೆ.