ಅಕ್ಟೋಬರ್ 23 ರಿಂದ 25 ರವರೆಗೆ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ನಡೆಯಲಿದೆ. ಈ ಸಂಸ್ಥಾನದಲ್ಲಿ ರಥಗಳೂ ಇದ್ದವು ಎನ್ನವುದನ್ನು ಜಾನಪದ ವಿದ್ವಾಂಸರು, ಸಂಶೋಧಕರು ದಾಖಲೆ ಸಹಿತ ಅನಾವರಣಗೊಲಿಸಿದ್ದಾರೆ.
ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಜನಪದವೇ ನಿಖರ ಆಕರ
ಲಾವಣಿ ಗೀ ಗೀ ದುಂದುಮೆ ಕೋಲುಪದ ಹಂತಿಪದ ಗರತಿಹಾಡುಗಳಲ್ಲಿ ಸಿಕ್ಕ ಸಾಲುಗಳು ಈಗ ಕಿತ್ತೂರು ಸಂಸ್ಥಾನ ಇತಿಹಾಸ ಕಟ್ಟಿಕೊಟ್ಟಿವೆ. ಜನಪದರು ಕೇವಲ ಭಾವನಿಷ್ಠರಾಗದೇ ವೈಚಾರಿಕ ನಿಷ್ಠರಾಗಿಯೂ ಹಾಡಿದ್ದಾರೆ. ರಾಣಿ ಅಥವಾ ರಾಜನ ಬಗ್ಗೆ ಅವರು ಕಂಡದ್ದನ್ನು ಕಂಡಂತೆ ಹಾಡಿದ್ದಾರೆ. ಉಪಮೆಗಳನ್ನು ಬಳಸಿ ಅಲಂಕಾರಗಳನ್ನು ಪ್ರಯೋಗಿಸಿಲ್ಲ. ಕಿತ್ತೂರು ದೊರೆಗಳು ಜನಪದ ಕಲಾವಿದರಿಗೆ ಆಶ್ರಯ ನೀಡಿದ್ದರು. ಹೀಗಾಗಿ ಅವರ ಪದಗಳೇ ನಿಖರ ಇತಿಹಾಸ ಹೇಳುತ್ತವೆ ಎಂಬುದನ್ನು ಪ್ರೊ.ಸಿ.ಕೆ. ನಾವಲಗಿ ಅವರು ‘ಕಿತ್ತೂರು ಸಂಸ್ಥಾನ; ಜನಕಥನದ ಅನುಸಂಧಾನ’ ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು