ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿಗಳಿಗೆ ಹಣ ಕ್ರೋಡಿಕರಿಸುವ ಪ‍್ರಯತ್ನದಲ್ಲಿ ಕೃಷಿ ಇಲಾಖೆ ಸೇರಿ ಎಲ್ಲ ಇಲಾಖೆಗಳ ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. ರೈತಸಿರಿ ಯೋಜನೆ ಅಡಿ ಸಿರಿಧಾನ್ಯ ಬೆಳೆಯುವ ಒಂದು ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹ ಧನ, ಬೆಂಬಲ ಬೆಲೆಯ ಆವರ್ತ ನಿಧಿ, ಬೆಳೆ ನಷ್ಟ ಪರಿಹಾರ ಇತ್ಯಾದಿಗಳ ಬಗ್ಗೆ ಪ್ರಸ್ತಾಪಿಸಿಲ್ಲ.

ಫೆಬ್ರುವರಿಯಲ್ಲಿ ಬಿಜೆಪಿ ಸರ್ಕಾರ ಮಂಡಿಸಿದ್ದ ಬಜೆಟ್‌ನಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ₹39,031 ಕೋಟಿ ಮೀಸಲಿಟ್ಟಿತ್ತು. ಇದುವರೆಗೂ ಅದರ ಎಷ್ಟು ಬಳಕೆಯಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ಬಜೆಟ್‌ನಲ್ಲಿ ಹಳೆಯ ಯೋಜನೆಗಳಾದ ಕೃಷಿಭಾಗ್ಯ ಯೋಜನೆಯನ್ನು ಉದ್ಯೋಗ ಖಾತರಿಗೆ ಸಂಯೋಜಿಸಲಾಗಿದೆ. ಆದರೆ, ಇದು ಈಗಾಗಲೇ ಜಲನಿಧಿ ಯೋಜನೆಯಡಿಯಲ್ಲಿ ಜಾರಿಯಲ್ಲಿರುವುದನ್ನು ಗಮನಿಸಬೇಕಿತ್ತು. 2004ರಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಲು ಕಾಂಗ್ರೆಸ್ ಸರ್ಕಾರವೇ ಜಾರಿಗೊಳಿಸಿದ್ದ ಸಾವಯವ ಕೃಷಿ ನೀತಿಯನ್ನು ತಂದಿರುವುದನ್ನು ಮರೆತಂದಿದೆ.

ರಾಜ್ಯದಲ್ಲಿ ಅನ್ನಭಾಗ್ಯಕ್ಕೆ ಅಕ್ಕಿಯ ಕೊರತೆ ಎದುರಾಗಿದೆ. ಪಡಿತರಿಗೆ ರಾಗಿ, ಜೋಳದ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ವ್ಯಾಪಕ ಅಭಿಪ್ರಾಯ ಮೂಡಿಬಂದಿದೆ. ರಾಜ್ಯದಲ್ಲಿ ಮುಂದಿನ ತಿಂಗಳಲ್ಲಿ ರಾಗಿ, ಜೋಳ ಬಿತ್ತನೆಯಾಗಲಿದ್ದು, ಕೇಂದ್ರದ ಬೆಂಬಲ ಬೆಲೆಯ ಮೇಲೆ ಉತ್ತಮ ಪ್ರೋತ್ಸಾಹ ಧನವನ್ನು ಬಜೆಟ್‌ನಲ್ಲಿ ಘೋಷಿಸಬೇಕಿತ್ತು. ಇದರಿಂದ ರೈತರಿಗೆ ಉತ್ತೇಜಿಸುವ ಬಲವಾದ ನಿರೀಕ್ಷೆ ಇತ್ತು. ಆದರೆ, ಅದರ ಬಗ್ಗೆ ಪ್ರಸ್ತಾಪಿಸಿಲ್ಲ. ಈ ವರ್ಷ ಮುಂಗಾರು ತಡವಾಗಿದ್ದು, ಬೆಳೆಗಳು ಬಿತ್ತನೆಯಾಗದೆ ರೈತರು ಅನುಭವಿಸುತ್ತಿರುವ ನಷ್ಟಕ್ಕೆ ಪರಿಹಾರದ ಬಗ್ಗೆಯೂ ಪ್ರಸ್ತಾಪವಿಲ್ಲ.

–ವಿ.ಗಾಯತ್ರಿ, ನಮ್ಮೂರು ಭೂಮಿ ನಮಗಿರಲಿ ಆಂದೋಲನ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.