ನವದೆಹಲಿ: ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ್ದಾರೆ.

ಆದರೆ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ.

ದೇಶದ ಆಸ್ತಿಯನ್ನು ಬಂಡವಾಳಶಾಹಿ ಗೆಳೆಯರಿಗೆ ಹಸ್ತಾಂತರಿಸಲು ಮೋದಿ ಹುನ್ನಾರ: ರಾಹುಲ್

ಸದಾ ತಮ್ಮ ಹಾವಭಾವಗಳಿಂದ ಹೆಚ್ಚು ಗಮನ ಸೆಳೆಯುವ ರಾಹುಲ್ ಗಾಂಧಿ, ವಿತ್ತ ಸಚಿವರು ಬಜೆಟ್ ಮಂಡಿಸುತ್ತಿದ್ದಾಗ ತುಂಬಾನೇ ಬೇಸರ ಹಾಗೂ ಆಲಸಿ ಮನೋಭಾವದಿಂದ ಕಂಡುಬಂದಿದ್ದರು.

ಮಾಸ್ಕ್ ಧರಿಸಿದ್ದ ರಾಹುಲ್ ಗಾಂಧಿ ಹಣೆಗೆ ಕೈಯಿಟ್ಟು ಚಿಂತಿತರಾಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಕಾರಣವಾಗಿತ್ತು.

ಈ ಹಿಂದೆಯೂ ಹಲವು ಬಾರಿ ಸಂಸತ್ತಿನೊಳಗೆ ರಾಹುಲ್ ಗಾಂಧಿ ತಮ್ಮ ವರ್ತನೆಗಳಿಂದ ಗಮನ ಸೆಳೆದಿದ್ದರು. ಹಿಂದೊಮ್ಮೆ ಪ್ರಧಾನಿ ಭಾಷಣದ ವೇಳೆ ಕಣ್ಸನೆ ಮೂಲಕ ಹೆಚ್ಚು ಚರ್ಚೆಗೆ ಪಾತ್ರವಾಗಿದ್ದರು.

ಇದನ್ನೂ ಓದಿ:ಕೃಷಿ ಸೆಸ್ ಹೇರಿಕೆ ಬಳಿಕವೂ ಸಾಮಾನ್ಯ ಜನರಿಗೆ ಹೊರೆ ಇಲ್ಲ: ನಿರ್ಮಲಾ ಸೀತಾರಾಮನ್

ಏತನ್ಮಧ್ಯೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಜನರ ಕೈಗೆ ಹಣವನ್ನು ನೀಡುವುದನ್ನು ಮರೆತುಬಿಡಿ. ನೇರಂದ್ರ ಮೋದಿ ಸರ್ಕಾರ ದೇಶದ ಸಂಪತ್ತನ್ನು ತನ್ನ ನಿಕಟ ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ಹಸ್ತಾಂತರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.