ನವದೆಹಲಿ: ಎರಡು ವರ್ಷಗಳ ಕಾಲ ಶೇ 7.5ರಷ್ಟು ಸ್ಥಿರಬಡ್ಡಿಯೊಂದಿಗೆ ಮಹಿಳೆಯರಿಗಾಗಿ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ ಎನ್ನುವ ಹೊಸ ಉಳಿತಾಯ ಯೋಜನೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದ್ದಾರೆ.

ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆಯಲ್ಲಿ ಗರಿಷ್ಠ ₹ 2 ಲಕ್ಷ ಮೊತ್ತದ ಹಣವನ್ನು ಠೇವಣಿಯಾಗಿ ಇರಿಸಬಹುದು. ಭಾಗಶಃ ಹಿಂಪಡೆಯುವ ಸೌಲಭ್ಯವೂ ಯೋಜನೆಯಲ್ಲಿದೆ.

‘ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ದೀನ್ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿಯಲ್ಲಿ 81 ಲಕ್ಷ ಸ್ವ-ಸಹಾಯ ಮಹಿಳಾ ಗುಂಪುಗಳನ್ನು ರಚಿಸಲಾಗಿದೆ. ಹಲವು ಸಾವಿರ ಸದಸ್ಯರನ್ನು ಹೊಂದಿರುವ ದೊಡ್ಡ ಉತ್ಪಾದಕ ಉದ್ಯಮಗಳು ಅಥವಾ ಸಮೂಹಗಳ ರಚನೆಯ ಮೂಲಕ ಈ ಗುಂಪುಗಳನ್ನು ಆರ್ಥಿಕ ಸಬಲೀಕರಣದ ಮುಂದಿನ ಹಂತವನ್ನು ತಲುಪಲು ಸಕ್ರಿಯಗೊಳಿಸಲಾಗುವುದು’ ಎಂದು ನಿರ್ಮಲಾ ಹೇಳಿದ್ದಾರೆ.

‘ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಣ್ಣ ರೈತರಿಗೆ ₹ 2.25 ಲಕ್ಷ ಕೋಟಿಗೂ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ. ಈ ಯೋಜನೆಯಡಿ ಸುಮಾರು 3 ಕೋಟಿ ಮಹಿಳಾ ರೈತರಿಗೆ ₹ 54 ಸಾವಿರ ಕೋಟಿ ಒದಗಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮಿತಿಯನ್ನು ₹15 ಲಕ್ಷದಿಂದ ₹30ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಮಾಸಿಕ ಆದಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ₹4.5 ಲಕ್ಷದಿಂದ ₹9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಂಟಿ ಖಾತೆಯ ಮಿತಿ ₹9 ಲಕ್ಷದಿಂದ ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ

ಇವನ್ನೂ ಓದಿ...

Union Budget 2023 Live | ಕೇಂದ್ರ ಬಜೆಟ್ನ ಸಂಪೂರ್ಣ ಮಾಹಿತಿ

Union Budget 2023 highlights: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ

Union Budget 2023: ಯಾವುದು ದುಬಾರಿ? ಯಾವುದು ಅಗ್ಗ?

Union Budget 2023: ಧೂಮಪಾನಿಗಳ ಜೇಬಿಗೆ ಬಿಸಿ ಮುಟ್ಟಿಸಿದ ‘ಅಮೃತಕಾಲದ ಬಜೆಟ್’

ಜಗತ್ತು ಭಾರತವನ್ನು ಪ್ರಜ್ವಲಿಸುವ ನಕ್ಷತ್ರದಂತೆ ನೋಡುತ್ತಿದೆ: ನಿರ್ಮಲಾ ಸೀತಾರಾಮನ್

ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ: ಸಿಎಂ ಬಸವರಾಜ ಬೊಮ್ಮಾಯಿ ಸಂತಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.