ನವದೆಹಲಿ: ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ, ದ್ವಿಪಥ ಹಾಗೂ ಗೇಜ್ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಬಜೆಟ್ನಲ್ಲಿ ₹7,500 ಕೋಟಿ ಹಂಚಿಕೆ ಮಾಡಲಾಗಿದೆ.

‘2009-14ರ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ವಾರ್ಷಿಕ ₹835 ಕೋಟಿ ಅನುದಾನ ನೀಡಲಾಗುತ್ತಿತ್ತು. ಈಗ ಅನುದಾನ ಬಿಡುಗಡೆ ಪ್ರಮಾಣ ಒಂಬತ್ತು ಪಟ್ಟು ಹೆಚ್ಚಾಗಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ರಾಜ್ಯದಲ್ಲಿ 31 ರೈಲ್ವೆ ಯೋಜನೆಗಳು ಅನುಷ್ಠಾನವಾಗುತ್ತಿದ್ದು, ಇವುಗಳ ಉದ್ದ 3,866 ಕಿ.ಮೀ. ಈ ಯೋಜನೆಗಳ ಒಟ್ಟು ಮೊತ್ತ ₹47,346 ಕೋಟಿ ಎಂದು ಅವರು ಮಾಹಿತಿ ನೀಡಿದರು.

‘ಯುಪಿಎ ಅವಧಿಯಲ್ಲಿ ವರ್ಷಕ್ಕೆ 114 ಕಿ.ಮೀ. ಹೊಸ ಮಾರ್ಗಗಳ ನಿರ್ಮಾಣ ಮಾಡಲಾಗುತ್ತಿತ್ತು. ಎನ್ಡಿಎ ಅವಧಿಯಲ್ಲಿ 166 ಕಿ.ಮೀ.ಗೆ ಏರಿದೆ ಎಂದರು.

ಕೊಟ್ಟೂರು–ಹರಿಹರ–ಹರಪ್ಪನಹಳ್ಳಿ, ಚಿಕ್ಕಮಗಳೂರು–ಸಕಲೇಶಪುರ, ಮುನಿರಾಬಾದ್–ಮೆಹಬೂಬ್ನಗರ, ಬಾಗಲಕೋಟೆ–ಕುಡಚಿ, ತುಮಕೂರು–ಚಿತ್ರದುರ್ಗ–ದಾವಣಗೆರೆ, ಮಾರಿಕುಪ್ಪಂ–ಕುಪ್ಪಂ, ಗದಗ–ವಾಡಿ, ಶಿಮಮೊಗ್ಗ–ರಾಣೆಬೆನ್ನೂರು ಹೊಸ ರೈಲು ಮಾರ್ಗಗಳಿಗೆ ಹೆಚ್ಚುವರಿ ಅನುದಾನ ಘೋಷಿಸಲಾಗಿದೆ.

ಉಪನಗರ ರೈಲಿಗೆ ₹350 ಕೋಟಿ: ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸಲು ರೂಪಿಸಲಾಗಿರುವ ಉಪನಗರ ರೈಲು ಯೋಜನೆಗೆ ಈ ಸಲ ₹350 ಕೋಟಿ ಮೀಸಲಿಡಲಾಗಿದೆ.

147 ಕಿ.ಮೀ. ಉದ್ದದ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ 2020ರಲ್ಲಿ ಅನುಮೋದನೆ ನೀಡಿತ್ತು. ₹15,767 ಕೋಟಿಯ ಈ ಯೋಜನೆಗೆ ಕೇಂದ್ರ ಶೇ 20 ಹಾಗೂ ರಾಜ್ಯ ಶೇ 20ರಷ್ಟು ಹಣ ಭರಿಸಬೇಕಿದೆ. ಶೇ 60 ಮೊತ್ತವನ್ನು ಸಾಲವಾಗಿ ಪಡೆಯಲಾಗುತ್ತದೆ. ಕೇಂದ್ರವು 2022–23ರಲ್ಲಿ ₹50 ಕೋಟಿ, 23–24ರಲ್ಲಿ ₹450 ಕೋಟಿ ಅನುದಾನ ನೀಡಿತ್ತು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಬಜೆಟ್ನಲ್ಲಿ ಇದರ ಬಗ್ಗೆ ಪ್ರಸ್ತಾಪ ಇಲ್ಲ. ಬೆಂಗಳೂರಿನ ವರ್ತುಲ ರಸ್ತೆ ಯೋಜನೆಗೆ ಅನುದಾನ ನೀಡುವ ಬಗ್ಗೆಯೂ ಉಲ್ಲೇಖ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.