ನವದೆಹಲಿ: ದೇಶದ ಮಿಲಿಟರಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ₹6.21 ಲಕ್ಷ ಕೋಟಿಯನ್ನು ರಕ್ಷಣಾ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ನಲ್ಲಿ ಘೋಷಿಸಲಾಗಿದೆ

ಇಂದು 18ನೇ ಲೋಕಸಭೆಯ ಮೊದಲ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದರು.
.ಇಥಿಯೋಪಿಯಾದಲ್ಲಿ ಮಣ್ಣು ಕುಸಿತ: 157 ಸಾವು.Union Budget: ಭಾರಿ ಕುಸಿತದ ಬಳಿಕ ಚೇತರಿಕೆ ಕಂಡ ಷೇರುಪೇಟೆ.
ರಕ್ಷಣಾ ಕ್ಷೇತ್ರವನ್ನು ಬಲಪಡಿಸಲು ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಮತ್ತು ಇತರ ಮಿಲಿಟರಿ ವಸ್ತುಗಳನ್ನು ಖರೀದಿಸಲು ₹1.72 ಲಕ್ಷ ಕೋಟಿ ಅನ್ನು ಮೀಸಲಿಡಲಾಗಿದೆ. ತಂತ್ರಜ್ಞಾನವನ್ನು ಮಿಲಿಟರಿ ಕ್ಷೇತ್ರದಲ್ಲಿ ಮತ್ತಷ್ಟು ಅಳವಡಿಸಿಕೊಳ್ಳುವ ಮೂಲಕ ಸ್ವಾಲಂಬನೆಯ ಭಾರತವನ್ನು ನಿರ್ಮಾಣ ಮಾಡಲು ಹೊಸ ಯೋಜನೆಗಳನ್ನು ಜಾರಿ ಮಾಡಲಾಗವುದು ಎಂದು ಸೀತಾರಾಮನ್ ಹೇಳಿದ್ದಾರೆ.

ರಕ್ಷಣಾ ಸೇವೆಗಳಿಗೆ ₹ 2,82,772 ಕೋಟಿ, ನೌಕರರ ಪಿಂಚಣಿಗಾಗಿ ₹1,41,205 ಕೋಟಿ , ಮತ್ತು ರಕ್ಷಣಾ ಸಚಿವಾಲಯ (ಸಿವಿಲ್ ) ₹ 15,322 ಕೋಟಿ ಸೇರಿದಂತೆ ಒಟ್ಟು ₹ 4,39,300 ಕೋಟಿ ಮೀಸಲಿಡಲಾಗಿದೆ.
.'ನೀಟ್–ಯುಜಿ' ಪರೀಕ್ಷೆ ರದ್ದು, ಮರು ಪರೀಕ್ಷೆ ತಳ್ಳಿಹಾಕಿದ ಸುಪ್ರೀಂ ಕೋರ್ಟ್.Union Budget 2024 | ಮೂರು ಕ್ಯಾನ್ಸರ್ ಔಷಧಿಗಳಿಗೆ ತೆರಿಗೆ ವಿನಾಯಿತಿ.
24-25ರ ಸಾಲಿನಲ್ಲಿ ಸೇನೆಗೆ ₹ 1,92,680 ಕೋಟಿ ನಿಗದಿಪಡಿಸಲಾಗಿದ್ದು, ನೌಕಾಪಡೆ ಮತ್ತು ಭಾರತೀಯ ವಾಯುಪಡೆಗೆ ಕ್ರಮವಾಗಿ ₹32,778 ಕೋಟಿ ಮತ್ತು ₹46,223 ಕೋಟಿ ಮೀಸಲಿಡಲಾಗಿದೆ.

2023-24ರ ಬಜೆಟ್ನಲ್ಲಿ ಭಾರತೀಯ ವಾಯುಪಡೆಯ ಬಂಡವಾಳದ ವೆಚ್ಚವು ₹57,137.09 ಕೋಟಿಗಳಷ್ಟಿತ್ತು. ಇದರಲ್ಲಿ ವಿಮಾನ ಮತ್ತು ಏರೋ ಇಂಜಿನ್ಗಳ ಖರೀದಿಗಾಗಿ ₹15,721 ಕೋಟಿ ಮತ್ತು ಇತರೆ ಉಪಕರಣಗಳಿಗೆ ₹36,223.13 ಕೋಟಿ ಒಳಗೊಂಡಿದೆ.
.ದೇಶಕ್ಕಾಗಿ ಅಲ್ಲ; ಬಿಹಾರ, ಆಂಧ್ರಕ್ಕಾಗಿ ಬಜೆಟ್ ಮಂಡನೆ: NCPಯ ಶರದ್ ಪವಾರ್ ಬಣ.Budget 2024 | ಆದಾಯ ತೆರಿಗೆ ಕಾಯ್ದೆಯ ಸಮಗ್ರ ಪರಿಶೀಲನೆ: ನಿರ್ಮಲಾ.
ಕೇಂದ್ರ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ನೀಡಿರುವ ಅನುದಾನ ಸಾಧಾರಣವಾಗಿದೆ ಹಾಗೂ ಸರ್ಕಾರ ಮಿಲಿಟರಿ ಕ್ಷೇತ್ರಕ್ಕೆ ನೀಡುವ ಆದ್ಯತೆಯನ್ನು ಒತ್ತಿ ಹೇಳುತ್ತದೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಭದ್ರತಾ ಅಧ್ಯಯನಗಳ ವಿಶೇಷ ಕೇಂದ್ರದ ಪ್ರಾಧ್ಯಾಪಕ ಡಾ.ಲಕ್ಷ್ಮಣ್ ಕುಮಾರ್ ಬೆಹೆರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.