ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಜನ್ಮ ದಿನಾಂಕದ ಪರಿಷ್ಕರಣೆಗೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್ ಕೈಬಿಟ್ಟು ಸುತ್ತೋಲೆ ಹೊರಡಿಸಿದೆ.

ಇಪಿಎಫ್‌ಒ ಚಂದಾದಾರರು ಜನ್ಮ ದಿನಾಂಕದ ತಿದ್ದುಪಡಿಗೆ ಅರ್ಹ ದಾಖಲೆಯಾಗಿ ಆಧಾರ್ ಕಾರ್ಡ್ ಸಲ್ಲಿಸುತ್ತಿದ್ದರು. ಇನ್ನು ಮುಂದೆ ಇದನ್ನು ಪರಿಗಣಿಸುವುದಿಲ್ಲ. ಈ ಉದ್ದೇಶಕ್ಕಾಗಿ ಜನನ ಪ್ರಮಾಣ ಪತ್ರ, ಅಂಕಪಟ್ಟಿ, ಪ್ಯಾನ್ ಕಾರ್ಡ್ ಬಳಸಬಹುದು ಎಂದು ತಿಳಿಸಿದೆ.

ಕಾರಣ ಏನು?:

ಇಪಿಎಫ್‌ಒ ಸೇರಿದಂತೆ ಸರ್ಕಾರದ ಹಲವು ಸಂಸ್ಥೆಗಳು ಜನ್ಮ ದಿನಾಂಕದ ತಿದ್ದುಪಡಿಗೆ ಆಧಾರ್ ಅನ್ನು ಅರ್ಹ ದಾಖಲೆಯಾಗಿ ಬಳಸುತ್ತಿದ್ದುದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಗಮನಕ್ಕೆ ಬಂದಿತ್ತು. ಮತ್ತೊಂದೆಡೆ ಈ ಉದ್ದೇಶಕ್ಕಾಗಿ ಆಧಾರ್ ಬಳಸದಂತೆ ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ಆದೇಶ ನೀಡಿವೆ.

ಹಾಗಾಗಿ, ವೈಯಕ್ತಿಕ ಗುರುತು ಮತ್ತು ದೃಢೀಕರಣಕ್ಕಾಗಿ ಮಾತ್ರವಷ್ಟೇ ಆಧಾರ್ ಬಳಸಬೇಕು. ಹುಟ್ಟಿದ ದಿನಾಂಕ ತಿದ್ದುಪಡಿಗೆ ಪರಿಗಣಿಸಬಾರದು ಎಂದು 2023ರ ಡಿಸೆಂಬರ್ 22ರಂದು ಹೊರಡಿಸಿದ ಆದೇಶದಲ್ಲಿ ಯುಐಡಿಎಐ ಸೂಚಿಸಿತ್ತು. ಯುಐಡಿಎಐ ನಿರ್ದೇಶನದ ಮೇರೆಗೆ ಇಪಿಎಫ್‌ಒ ಈ ಕ್ರಮಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.