ನವದೆಹಲಿ: ನವೆಂಬರ್ 12ರಿಂದ ವಿಸ್ತಾರ ಏರ್ಲೈನ್ಸ್ ವಿಮಾನ ಸಂಸ್ಥೆಯು ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ. ವಿಸ್ತಾರ ಎನ್ನುವ ಬ್ರಾಂಡ್ನಡಿ ನವೆಂಬರ್ 11ರಂದು ಕೊನೆಯ ಬಾರಿಗೆ ವಿಮಾನ ಕಾರ್ಯಾಚರಣೆ ನಡೆಸಲಿದೆ.
.AI183 ತುರ್ತು ಭೂಸ್ಪರ್ಶ: ರಷ್ಯಾಕ್ಕೆ ಮತ್ತೊಂದು ವಿಮಾನ ಕಳುಹಿಸಿದ ಏರ್ ಇಂಡಿಯಾ.
ವಿಸ್ತಾರ ಏರ್ಲೈನ್ಸ್ ಸಂಸ್ಥೆಯು ಟಾಟಾ ಸಮೂಹ ಹಾಗೂ ಸಿಂಗಪುರ ಏರ್ಲೈನ್ಸ್ನ ಜಂಟಿ ಮಾಲೀಕತ್ವದಲ್ಲಿದೆ. ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

‘ವಿಸ್ತಾರ ಏರ್ಲೈನ್ಸ್ನಲ್ಲಿ ನವೆಂಬರ್ 12 ಅಥವಾ ಅದರ ನಂತರ ದಿನಗಳಿಗೆ ಮುಂಗಡ ಬುಕ್ಕಿಂಗ್ ಸ್ವೀಕರಿಸಲಾಗುವುದಿಲ್ಲ. ಆ ಬಳಿಕ ಏರ್ ಇಂಡಿಯಾವು ಈ ವಿಮಾನಗಳ ನಿರ್ವಹಣೆ ಮಾಡಲಿದ್ದು, ವಿಸ್ತಾರ ಕಾರ್ಯಾಚರಿಸುತ್ತಿದ್ದ ವಿಮಾನ ಮಾರ್ಗಗಳ ಬುಕ್ಕಿಂಗ್ಗಳನ್ನು ಏರ್ ಇಂಡಿಯಾ ವೆಬ್ಸೈಟ್ಗೆ ಮರುನಿರ್ದೇಶಿಸಲಾಗುತ್ತದೆ. ನವೆಂಬರ್ 11ರವರೆಗೆ ಎಂದಿನಂತೆ ವಿಸ್ತಾರದ ಕಾರ್ಯಾಚರಣೆ ಇರಲಿದೆ’ ಎಂದು ವಿಸ್ತಾರ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
.ಕ್ಯಾಬಿನ್ ಸಿಬ್ಬಂದಿ ಪ್ರತಿಭಟನೆ: ಏರ್ ಇಂಡಿಯಾ ವಿಮಾನಗಳ ಹಾರಾಟ ರದ್ದು.
2022ರ ನವೆಂಬರ್ನಲ್ಲಿ ವಿಸ್ತಾರ– ಏರ್ ಇಂಡಿಯಾ ವಿಲೀನದ ಬಗ್ಗೆ ಘೋಷಿಸಲಾಗಿತ್ತು. ವಿಲೀನದ ಬಳಿಕ ಸಿಂಗಪುರ ಏರ್ಲೈನ್ಸ್ ಸಂಸ್ಥೆಯು ಏರ್ ಇಂಡಿಯಾದಲ್ಲಿ ಶೇ 25.1ರಷ್ಟು ಪಾಲು ಹೊಂದಿರಲಿದೆ.

ಸದ್ಯ ಏರ್ ಇಂಡಿಯಾ ಸಂಸ್ಥೆಯು ಟಾಟಾ ಸಮೂಹದ ಒಡೆತನದಲ್ಲಿದೆ.

‘ವಿಮಾನದಲ್ಲಿ ಬದಲಾವಣೆ, ಸಿಬ್ಬಂದಿ, ನುರಿತ ಸಹೋದ್ಯೋಗಿಗಳು, ಮುಖ್ಯವಾಗಿ ನಮ್ಮ ಮೌಲ್ಯಯುತ ಗ್ರಾಹಕರು ಹೊಸ ಏರ್ ಇಂಡಿಯಾಕ್ಕೆ ಸಾಧ್ಯವಾದಷ್ಟು ಹೊಂದಿಕೊಳ್ಳಲು ಏರ್ ಇಂಡಿಯಾ ಹಾಗೂ ವಿಸ್ತಾರದ ಸಿಬ್ಬಂದಿ ಒಟ್ಟಾಗಿ ಹಲವು ತಿಂಗಳಿನಿಂದ ಕೆಲಸ ಮಾಡಿದ್ದಾರೆ’ ಎಂದು ಏರ್ ಇಂಡಿಯಾ ಸಿಇಒ ಹಾಗೂ ಎಂ.ಡಿ ಕ್ಯಾಂಪ್ಬೆಲ್ ವಿಲ್ಸನ್ ಹೇಳಿದ್ದಾರೆ.
.ರಾಜ್ಯದಲ್ಲಿ ಏರ್ ಇಂಡಿಯಾ –ಟಾಟಾ ಲಿಮಿಟೆಡ್ನಿಂದ ₹2,300 ಕೋಟಿ ಹೂಡಿಕೆಗೆ ಅಂಕಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.