ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಖರೀದಿಗೆ ಅಮೆಜಾನ್ ಉತ್ಸಾಹ

Published 22 ಜುಲೈ 2024, 6:46 IST
Last Updated 22 ಜುಲೈ 2024, 6:46 IST
ಅಕ್ಷರ ಗಾತ್ರ

ಬೆಂಗಳೂರು: ಇನ್‌ಸ್ಟಾಮಾರ್ಟ್ ಖರೀದಿಗೆ ಇ–ಕಾಮರ್ಸ್ ದೈತ್ಯ ಅಮೆಜಾನ್ ಉತ್ಸಾಹ ತೋರಿದ್ದು, ಈ ಬಗ್ಗೆ ಬೆಂಗಳೂರು ಮೂಲದ ವಿತರಕ ಕಂಪನಿ ಸ್ವಿಗ್ಗಿಯೊಂದಿಗೆ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ.

₹10,414 ಕೋಟಿ ಮೌಲ್ಯದ ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡುವ ಬಗ್ಗೆ ಸೆಬಿಗೆ ಸ್ವಿಗ್ಗಿ ಸಲ್ಲಿಸಿದ ಗೋಪ್ಯ ಕರಡು ದಾಖಲೆ ಬಳಿಕ ಇದು ಬೆಳಕಿಗೆ ಬಂದಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

‘ಐಪಿಒಗೂ ಮುನ್ನ ಷೇರು ಖರೀದಿಸಲು ಅಥವಾ ಇನ್‌ಸ್ಟಾಮಾರ್ಟ್ ಅನ್ನು ಖರೀದಿಸಲು ಅಮೆಜಾನ್ ಆಸಕ್ತಿ ತೋರಿಸಿದೆ. ಆದರೆ ಸದ್ಯ ಅದಕ್ಕೆ ಹಲವು ತೊಡಕುಗಳಿವೆ’ ಎಂದು ಈ ಬಗ್ಗೆ ಬಲ್ಲವರಿಂದ ಮಾಹಿತಿ ಲಭಿಸಿದೆ.

‘ಈವರೆಗೂ ಅಮೆಜಾನ್ ಖರೀದಿ ಪ್ರಸ್ತಾಪವನ್ನು ಅಧಿಕೃತವಾಗಿ ಮಾಡದಿದ್ದರೂ, ಮುಂದಿನ ಮಾತುಕತೆಯನ್ನು ಶೀಘ್ರವಾಗಿ ಪ್ರಾರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಇನ್‌ಸ್ಟಾಮಾರ್ಟ್‌ ಅನ್ನು ಮಾತ್ರ ಮಾರಾಟ ಮಾಡಲು ಸ್ವಿಗ್ಗಿ ಮುಂದಾಗದೇ ಇರುವ ಸಾಧ್ಯತೆ ಇದೆ. ಆಹಾರ ಡೆಲಿವರಿಯನ್ನು ಖರೀದಿ ಮಾಡುವ ಉತ್ಸಾಹವೂ ಅಮೆಜಾನ್‌ಗೆ ಇಲ್ಲ. 10-12 ಶತಕೋಟಿ ಬಿಲಿಯನ್ ಮೌಲ್ಯದಲ್ಲಿ ಸಂಪೂರ್ಣ ಕಂಪನಿಯನ್ನು ಖರೀದಿಸುವುದೂ ಅಮೇಜಾನ್‌ಗೆ ದುಬಾರಿಯಾಗಿದೆ. ಜೊತೆಗೆ ಅಲ್ಪಮತದ ಷೇರುಗಳನ್ನು ಸಾಮಾನ್ಯವಾಗಿ ಖರೀದಿಸುವುದಿಲ್ಲ’ ಎಂದು ಮಾಹಿತಿ ಇರುವವರು ತಿಳಿಸಿದ್ದಾರೆ.

ಭಾರತದಲ್ಲಿ ತ್ವರಿತ ದಿನಸಿ ಪೂರೈಕೆ ಮಾಡುವ ಸ್ವಂತ ವೇದಿಕೆಯನ್ನು ಪ್ರಾರಂಭಿಸಲು ಅಮೆಜಾನ್ ಹಲವು ತಿಂಗಳಿನಿಂದ ಯೋಚಿಸುತ್ತಿದ್ದು, ಇದರ ಭಾಗವಾಗಿಯೇ ಇನ್‌ಸ್ಟಾಮಾರ್ಟ್ ಜೊತೆಗೆ ಮಾತುಕತೆ ನಡೆಸಲು ಮುಂದಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT