ಚೆನ್ನೈ: ರಿಲಯನ್ಸ್ ಇಂಡಸ್ಟ್ರೀಸ್, ಕೆನಡಾದ ಬ್ರೂಕ್ಫೀಲ್ಡ್ ಸಹಭಾಗಿತ್ವದಲ್ಲಿ ಚೆನ್ನೈನಲ್ಲಿ ಡೇಟಾ ಸೆಂಟರ್ (ದತ್ತಾಂಶ ಕೇಂದ್ರ) ಅನ್ನು ಮುಂದಿನ ವಾರ ಆರಂಭಿಸಲಿದೆ ಎಂದು ಉದ್ಯಮಿ ಮುಕೇಶ್ ಅಂಬಾನಿ ಭಾನುವಾರ ಹೇಳಿದ್ದಾರೆ.

ತಮಿಳುನಾಡು ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಂಬಾನಿ, ನವೀಕರಿಸಬಹುದಾದ ಇಂಧನ, ಗ್ರೀನ್ ಹೈಡ್ರೋಜನ್ ಮತ್ತು ರಾಜ್ಯದಲ್ಲಿ ಡೇಟಾ ಕೇಂದ್ರವನ್ನು ಸ್ಥಾಪಿಸಲು ಹೂಡಿಕೆ ಮಾಡಲಿದೆ ಎಂದು ಹೇಳಿದರು.

ಜಂಟಿ ಉದ್ಯಮವು ಮುಂದಿನ ವಾರ ಚೆನ್ನೈನಲ್ಲಿ 20 ಮೆಗಾವಾಟ್ ಡೇಟಾ ಸೆಂಟರ್ ಅನ್ನು ಪ್ರಾರಂಭಿಸಲಿದೆ ಮತ್ತು ಮತ್ತೊಂದು 40 ಮೆಗಾವಾಟ್ ಡೇಟಾ ಸೆಂಟರ್ ನಿರ್ಮಿಸಲು ಮುಂಬೈನಲ್ಲಿ 2.15 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

ತಮಿಳುನಾಡು ಯಾವಾಗಲೂ ಶ್ರೀಮಂತವಾದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯ ನಾಡು ಎಂದು ಹೇಳಿದ ಅಂಬಾನಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ರಾಜ್ಯವು ದೇಶದ ಅತ್ಯಂತ ವ್ಯಾಪಾರಸ್ನೇಹಿ ರಾಜ್ಯಗಳಲ್ಲಿ ಒಂದಾಗಿದೆ. ತಮಿಳುನಾಡಿನ ಬೆಳವಣಿಗೆಯಲ್ಲಿ ರಿಲಯನ್ಸ್ ಪಾಲುದಾರಿಕೆ ಹೊಂದಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.