ಬೆಂಗಳೂರು: ‘ಆರೋಗ್ಯಪೂರ್ಣ ಜೀವನ ಮತ್ತು ಏಕತೆಗಾಗಿ ಕೆನರಾ ಬ್ಯಾಂಕ್ನಿಂದ ನವೆಂಬರ್ 24ರಂದು ನಗರದಲ್ಲಿ ಎರಡನೇ ಆವೃತ್ತಿಯ ಮ್ಯಾರಥಾನ್ ಆಯೋಜಿಸಲಾಗಿದೆ. ಸಾರ್ವಜನಿಕರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ’ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಸತ್ಯನಾರಾಯಣ ರಾಜು ಕೋರಿದ್ದಾರೆ.

ನಗರದ ಟೌನ್ಹಾಲ್ ಬಳಿಯ ಬ್ಯಾಂಕ್ನ ಪ್ರಧಾನ ಕಚೇರಿ ಆವರಣದಲ್ಲಿ ಗುರುವಾರ ಮ್ಯಾರಥಾನ್–2024ರ ಟೀ ಶರ್ಟ್ ಅನ್ನು ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

ಈ ಮ್ಯಾರಥಾನ್ ಸಮುದಾಯ ಆರೋಗ್ಯ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಪ್ರಾಮುಖ್ಯತೆ ನೀಡಲಿದೆ. ಕಳೆದ ವರ್ಷ ಆಯೋಜಿಸಿದ್ದ ಮ್ಯಾರಥಾನ್ನಲ್ಲಿ 10 ಸಾವಿರ ಜನರು ಪಾಲ್ಗೊಂಡಿದ್ದರು. ಈ ಬಾರಿ 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ, 15 ಸಾವಿರ ಜನರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಭವೇಂದ್ರಕುಮಾರ್, ಅಶೋಕ್ ಚಂದ್ರ, ದೇಬಾಶಿಷ್ ಮುಖರ್ಜಿ, ಹರ್ದೀಪ್ ಸಿಂಗ್ ಅಹ್ಲುವಾಲಿಯಾ ಹಾಜರಿದ್ದರು.

ಗೊಂಬೆ ಪ್ರದರ್ಶನ: ನಾಡಹಬ್ಬ ದಸರಾ ಅಂಗವಾಗಿ ಬ್ಯಾಂಕ್ನಲ್ಲಿ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.