ನವದೆಹಲಿ: ಆನ್ಲೈನ್ ಮೂಲಕ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಮತ್ತು ಸ್ವಿಗ್ಗಿ ಕಂಪನಿಯು ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ತನಿಖೆಯಿಂದ ಬಯಲಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ಎರಡು ಕಂಪನಿಗಳು ನ್ಯಾಯಸಮ್ಮತವಲ್ಲದ ವಹಿವಾಟು ನಡೆಸುತ್ತಿವೆ. ಕೆಲವು ರೆಸ್ಟೋರೆಂಟ್ ಪಾಲುದಾರರಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ದೂರಿದ್ದ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾವು (ಎನ್ಆರ್ಎಐ) ಈ ಕುರಿತು ಪರಿಶೀಲಿಸುವಂತೆ ಸಿಸಿಐಗೆ ಅರ್ಜಿ ಸಲ್ಲಿಸಿತ್ತು.

ಆಯೋಗವು 2022ರ ಏಪ್ರಿಲ್ನಲ್ಲಿ ಈ ಆರೋಪ ಕುರಿತು ಸಮಗ್ರ ತನಿಖೆಗೆ ಆದೇಶಿಸಿತ್ತು. ಪ್ರಸಕ್ತ ವರ್ಷದ ಆರಂಭದಲ್ಲಿ ಆಯೋಗಕ್ಕೆ ಈ ತನಿಖಾ ವರದಿ ಸಲ್ಲಿಕೆಯಾಗಿದೆ ಎಂದು ಮೂಲಗಳು ಹೇಳಿವೆ.

ನಿಯಮಾವಳಿಗಳ ಪ್ರಕಾರ ಆಯೋಗದ ಮಹಾನಿರ್ದೇಶಕರು, ಎರಡು ಕಂಪನಿಗಳಿಗೆ ವರದಿಯ ಪ್ರತಿ ನೀಡಲಿದ್ದಾರೆ. ಬಳಿಕ ವಿಚಾರಣೆ ನಡೆಸಲಿದ್ದಾರೆ. ಕಂಪನಿಗಳಿಂದ ವಿವರಣೆ ಕೇಳಿದ ಬಳಿಕ ಅಂತಿಮ ಆದೇಶ ನೀಡಲಿದ್ದಾರೆ ಎಂದು ತಿಳಿಸಿವೆ.

‘ಮಾರ್ಚ್ನಲ್ಲಿ ಸಲ್ಲಿಕೆಯಾಗಿರುವ ತನಿಖಾ ವರದಿಯನ್ನು ಪರಾಮರ್ಶೆ ನಡೆಸಲಾಗಿದೆ’ ಎಂದು ಎನ್ಆರ್ಎಐ ತಿಳಿಸಿದೆ.

‘ಅಸೋಸಿಯೇಷನ್ ಎತ್ತಿರುವ ಆಕ್ಷೇಪಕ್ಕೆ ಸಂಬಂಧಿಸಿದಂತೆ ಆಯೋಗವು ತ್ವರಿತವಾಗಿ ಕಂಪನಿಗಳ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಗೊಳ್ಳುವ ನಿರೀಕ್ಷೆಯಿದೆ’ ಎಂದು ಎನ್ಆರ್ಎಐ ಅಧ್ಯಕ್ಷ ಸಾಗರ್ ದರಿಯಾನಿ ತಿಳಿಸಿದ್ದಾರೆ.
.ವಿಡಿಯೊ: ಜೊಮಾಟೊ ಡೆಲಿವರಿ ಬಾಯ್ ಜಾಕೆಟ್ ಧರಿಸಿದ್ದ ಯುವಕನಿಂದ ಕಳ್ಳತನ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.