ನವದೆಹಲಿ: ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದಕ್ಕಿಂತ ನಾಲ್ಕು ದಿನಗಳ ಮುನ್ನ ಅಂದರೆ 2016 ನವೆಂಬರ್ 4ರಂದು ಚಲಾವಣೆಯಲ್ಲಿದ್ದ₹17. 97 ಲಕ್ಷ ಕೋಟಿನಗದುಪ್ರಮಾಣದಲ್ಲಿ ಶೇ.19.14ರಷ್ಟು ಏರಿಕೆಯಾಗಿತ್ತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಮಾರ್ಚ್ 15, 2019ರ ಮಾಹಿತಿ ಪ್ರಕಾರ ಚಲಾವಣೆಯಲ್ಲಿರುವ ಕರೆನ್ಸಿಯ ಪ್ರಮಾಣ₹21.41 ಲಕ್ಷ ಕೋಟಿ ಆಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿಯನ್ನು ಉಲ್ಲೇಖಿಸಿದ ಈ ವರದಿಯ ಪ್ರಕಾರ, ಚಲಾವಣೆಯಲ್ಲಿರುವ ಕರೆನ್ಸಿ ಮಾರ್ಚ್ 2018ರಲ್ಲಿ ಮೊದಲ ಬಾರಿ ₹18.29 ಲಕ್ಷ ಕೋಟಿ ತಲುಪುವ ಮೂಲಕ ನೋಟು ರದ್ದತಿಯ ಪೂರ್ವ ಹಂತವನ್ನು ದಾಟಿತ್ತು.ಇದಾದ ನಂತರ ನಗದು ಹಣ ₹3 ಲಕ್ಷ ಕೋಟಿ ಏರಿಕೆಯಾಗಿದೆ.

₹500 ಮತ್ತು ₹1000 ಮುಖಬೆಲೆಯಿರುವ ನೋಟುಗಳನ್ನು ಕೇಂದ್ರ ಸರ್ಕಾರ 2016 ನವೆಂಬರ್ 8ರಂದು ರದ್ದು ಮಾಡಿದಾಗ ಚಲಾವಣೆಯಲ್ಲಿದ್ದ ಶೇ.86 ನಗದು ಆ ರಾತ್ರಿಯೇ ರದ್ದಾಗಿ ಬಿಟ್ಟಿತ್ತು.ಜನವರಿ 2017ರಲ್ಲಿ ಚಲಾವಣೆಯಲ್ಲಿದ್ದ ಕರೆನ್ಸಿ ₹9 ಲಕ್ಷ ಕೋಟಿಯಷ್ಟು ಇಳಿಕೆಯಾಯಿತು.ದೇಶದಲ್ಲಿ ನಗದು ರಹಿತ ಆರ್ಥಿಕತೆಗಾಗಿ ನೋಟು ರದ್ದತಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ನೋಟು ರದ್ದತಿ ನಂತರ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ನಗದು ಮತ್ತಷ್ಟು ಹೆಚ್ಚಾಯಿತು ಎಂದು ಆರ್ಬಿಐ ಹೇಳಿದೆ.

ಕಪ್ಪು ಹಣ ನಿರ್ಮೂಲನೆಗಾಗಿ ನೋಟು ರದ್ದತಿ ಮಾಡುತ್ತಿದ್ದೇವೆ ಎಂದು ಸರ್ಕಾರ ಹೇಳಿತ್ತು.ಆದರೆರದ್ದು ಆಗಿರುವ ಹಣ ವಾಪಸ್ ಬಂದಿದೆ ಎಂದು ಆಗಸ್ಟ್ 2018ರಲ್ಲಿಆರ್ಬಿಐ ಮೂಲಗಳು ಹೇಳಿದ್ದವು.

ನೋಟು ರದ್ದತಿ ಸಾಮಾನ್ಯ ಜನ ಜೀವನದ ಮೇಲೆ ಪರಿಣಾಮ ಬೀರಿತ್ತು. ನಗದು ರಹಿತ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯ ಬಳಕೆಗೆ ಉತ್ತೇಜನ ನೀಡಲು ನೋಟುರದ್ದತಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತಾದರೂ, ನೋಟು ರದ್ದತಿಯಾಗಿ ವರ್ಷಗಳೇ ಕಳೆದರೂ ದೇಶದಲ್ಲಿ ಡಿಜಿಟಲ್ ಪಾವತಿ ಕ್ರಮಜನಪ್ರಿಯಗೊಳಿಸಲು ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.