ನವದೆಹಲಿ: ನವೆಂಬರ್‌ನಲ್ಲಿ ದೇಶಕ್ಕೆ ಆಮದಾಗಿರುವ ಅಡುಗೆ ಎಣ್ಣೆ ಪ್ರಮಾಣದಲ್ಲಿ ಶೇಕಡ 34ರಷ್ಟು ಏರಿಕೆ ಕಂಡುಬಂದಿದೆ. ಕಚ್ಚಾ ಹಾಗೂ ಸಂಸ್ಕರಿತ ತಾಳೆ ಎಣ್ಣೆ ಆಮದು ತೀವ್ರವಾಗಿ ಹೆಚ್ಚಾಗಿದ್ದು ಒಟ್ಟಾರೆ ಏರಿಕೆಗೆ ಕಾರಣ ಎಂದು ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ (ಎಸ್‌ಇಎ) ಹೇಳಿದೆ.

ಎಸ್‌ಇಎ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ ನವೆಂಬರ್‌ನಲ್ಲಿ ಒಟ್ಟು 15.28 ಲಕ್ಷ ಟನ್ ಅಡುಗೆ ಎಣ್ಣೆ ಆಮದು ಆಗಿದೆ. ಇದು ಹಿಂದಿನ ವರ್ಷದ ನವೆಂಬರ್‌ನಲ್ಲಿ 11.38 ಲಕ್ಷ ಟನ್ ಆಗಿತ್ತು.

ನವೆಂಬರ್‌ನಲ್ಲಿ ಆಮದಾಗಿರುವ ಕಚ್ಚಾ ತಾಳೆ ಎಣ್ಣೆ ಪ್ರಮಾಣವು ಒಂದು ತಿಂಗಳಲ್ಲಿ ಆಗಿರುವ ಅತಿಹೆಚ್ಚಿನ ಆಮದು. ನವೆಂಬರ್‌ನಲ್ಲಿ ಒಟ್ಟು 9.31 ಲಕ್ಷ ಟನ್ ಕಚ್ಚಾ ತಾಳೆ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 4.77 ಲಕ್ಷ ಟನ್ ಕಚ್ಚಾ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.