ಬೆಂಗಳೂರು: ಮುಂಬರಲಿರುವ ಹಬ್ಬದ ಋತುವಿನಲ್ಲಿ ‘ಬಿಗ್ ಬಿಲಿಯನ್ ಡೇ–2024’ ಮೂಲಕ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವುದಾಗಿ ವಾಲ್‌ಮಾರ್ಟ್ ಒಡೆತನದ ಇ–ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಬುಧವಾರ ಹೇಳಿದೆ.

ಫ್ಲಿಪ್‌ಕಾರ್ಟ್ ದೇಶದ 9 ನಗರಗಳಲ್ಲಿ ಇನ್ನೂ 11 ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಆರಂಭಿಸಿದೆ. ಈ ಮೂಲಕ ಫ್ಲಿಪ್‌ಕಾರ್ಟ್ ದೇಶಾದ್ಯಂತ ಒಟ್ಟು 83 ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಹೊಂದಿದಂತಾಗಿದೆ. ತನ್ನ ಸಾಮಾಜಿಕ-ಆರ್ಥಿಕಾಭಿವೃದ್ಧಿ ಬದ್ಧತೆಯೊಂದಿಗೆ ಫ್ಲಿಪ್‌ಕಾರ್ಟ್ ದೇಶದೆಲ್ಲೆಡೆ ತನ್ನ ಪೂರೈಕೆ ಸರಪಳಿಯೊಳಗೆ 40ಕ್ಕೂ ಪ್ರದೇಶಗಳಲ್ಲಿ 1 ಲಕ್ಷಕ್ಕೂ ಅಧಿಕ ಹೊಸ ಉದ್ಯೋಗ ಸೃಷ್ಟಿ ಮಾಡುವತ್ತ ಗಮನಹರಿಸಿದೆ. ಇದು ಈ ವರ್ಷದ ಹಬ್ಬದ ಋತುವಿನಲ್ಲಿ ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವ ಮೂಲಕ ಫ್ಲಿಪ್‌ಕಾರ್ಟ್‌ನ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇನ್ವೆಂಟರಿ ಮ್ಯಾನೇಜರ್‌ಗಳು, ಲಾಜಿಸ್ಟಿಕ್ ಅಸೋಸಿಯೇಟ್ಸ್, ಕಿರಾಣಿ ಪಾಲುದಾರರು ಮತ್ತು ವಿತರಣೆಗಾರರು ಸೇರಿದಂತೆ ವಿವಿಧ ಪೂರೈಕೆ ಸರಪಳಿಗಾರರನ್ನು ಸದೃಢಗೊಳಿಸಲಾಗುತ್ತದೆ.

ಈ ಹೊಸ ನೇಮಕಾತಿಗಳು ಫ್ಲಿಪ್‌ಕಾರ್ಟ್‌ನ ಪೂರೈಕೆ ಸರಪಳಿಯನ್ನು ವೈವಿಧ್ಯಮಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ, ಮಹಿಳೆಯರು, ವಿಕಲಚೇತನರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದವರಿಗೆ ಉದ್ಯೋಗಗಳನ್ನು ನೀಡುವತ್ತ ಫ್ಲಿಪ್ ಕಾರ್ಟ್ ಗಮನಹರಿಸಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.