ನವದೆಹಲಿ: ಪಾದರಕ್ಷೆಗಳ ಅಳತೆ ಯಾವ ರೀತಿಯಲ್ಲಿ ಇರಬೇಕು ಎಂಬ ವಿಚಾರದಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಭಾರತವು, ಈಗ ತನ್ನದೇ ಆದ ಪಾದರಕ್ಷೆ ಅಳತೆ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಮುಂದಾಗಿದೆ.

ಬ್ರಿಟಿಷರು ಜಾರಿಗೆ ತಂದ ವ್ಯವಸ್ಥೆಯ ಪ್ರಕಾರ ಸಿದ್ಧವಾಗುವ ಬಹುತೇಕ ಪಾದರಕ್ಷೆಗಳ ಗಾತ್ರವು ಭಾರತೀಯರ ಪಾದಗಳಿಗೆ ಸರಿಹೊಂದುವಂತೆ ಇರುವುದಿಲ್ಲ. ಯುರೋಪ್ ಮತ್ತು ಅಮೆರಿಕನ್ನರ ಪಾದಗಳಿಗೂ ಭಾರತೀಯರ ಪಾದಗಳಿಗೂ ವ್ಯತ್ಯಾಸ ಇರುವುದೇ ಇದಕ್ಕೆ ಪ್ರಮುಖ ಕಾರಣ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರವು ಈಗ ಭಾರತದಲ್ಲಿನ ಪಾದರಕ್ಷೆಗಳ ಗಾತ್ರದಲ್ಲಿ ಏಕರೂಪತೆಯನ್ನು ತರುವ ಉದ್ದೇಶದಿಂದಭಾರತದ್ದೇ ಆದ ಅಳತೆ ವ್ಯವಸ್ಥೆ ರೂಪಿಸಲಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ₹ 10.80 ಕೋಟಿ ವೆಚ್ಚದಲ್ಲಿ, ಆತ್ಮನಿರ್ಭರ ಭಾರತ ಯೋಜನೆಯ ಅಡಿಯಲ್ಲಿ ಭಾರತೀಯರ ನಡಿಗೆಯ ಕ್ರಮ, ಪಾದಗಳ ಅಳತೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಪಾದರಕ್ಷೆಗಳ ಗಾತ್ರವನ್ನು ಭಾರತೀಯರ ಅಗತ್ಯಗಳಿಗೆ ಸರಿಹೊಂದುವಂತೆ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳಲಿದೆ. ಚೆನ್ನೈನಲ್ಲಿ ಇರುವ ಕೇಂದ್ರ ಚರ್ಮೋದ್ಯಮ ಸಂಶೋಧನಾ ಸಂಸ್ಥೆಯ (ಸಿಎಲ್ಆರ್ಐ) ಜೊತೆಗೂಡಿ, ಭಾರತೀಯರ ಪಾದಗಳ ಅಳತೆಗೆ ಸರಿಹೊಂದುವ ರೀತಿಯಲ್ಲಿ ಪಾದರಕ್ಷೆಗಳ ಗಾತ್ರ ನಿಗದಿ ಮಾಡಲಾಗುತ್ತದೆ.

‘ಐರೋಪ್ಯ ಮತ್ತು ಫ್ರೆಂಚ್ ಮಾನದಂಡಗಳನ್ನುಭಾರತದಲ್ಲಿ ಈಗ ಅನುಸರಿಸಲಾಗುತ್ತಿದೆ. ಭಾರತೀಯರ ಪಾದಗಳ ಅಳತೆಗೆ ಇವು ಸರಿಹೊಂದುವಂತೆ ಆಗಬೇಕು ಎಂದಾದರೆ, ಪಾದರಕ್ಷೆಗಳನ್ನು ಇನ್ನಷ್ಟು ಆರಾಮವಾಗಿ ಹಾಕಿಕೊಳ್ಳುವಂತೆ ಆಗಬೇಕಾದರೆ ಈಗ ಅನುಸರಿಸುತ್ತಿರುವ ವ್ಯವಸ್ಥೆಯಲ್ಲಿ ಬದಲಾವಣೆ ಬೇಕಿದೆ’ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

ವಿವಿಧ ಪ್ರದೇಶಗಳು, ವಯಸ್ಸು, ಆರೋಗ್ಯ ಸ್ಥಿತಿ ಹಾಗೂ ಇತರ ಕೆಲವು ಅಂಶಗಳನ್ನು ಪರಿಗಣಿಸಿ ಏಕರೂಪತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದೂ ಅದು ಹೇಳಿದೆ. ನೂರು ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮಾದರಿಗಳನ್ನು ಸಮೀಕ್ಷೆಯ ವೇಳೆ ಪರಿಗಣಿಸಲಾಗುತ್ತದೆ. ಸಮೀಕ್ಷೆಗಾಗಿ ಶಾಲೆಗಳು, ಕಚೇರಿಗಳು, ವಾಣಿಜ್ಯ ಕೇಂದ್ರಗಳು, ಮನೆಗಳಿಗೆ ಭೇಟಿ ನೀಡುವ ಉದ್ದೇಶವನ್ನು ಸಚಿವಾಲಯ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.