ನವದೆಹಲಿ: ಫ್ಯೂಚರ್ ಸಮೂಹವು ತನ್ನ ರಿಟೇಲ್ ಹಾಗೂ ಸಗಟು ವಹಿವಾಟು ವಿಭಾಗಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ಗೆ ಮಾರಾಟ ಮಾಡುವುದಕ್ಕೆ ತಡೆ ನೀಡಿರುವ ದೆಹಲಿ ಹೈಕೋರ್ಟ್ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.

ಫ್ಯೂಚರ್–ರಿಲಯನ್ಸ್ ನಡುವಿನ ಒಪ್ಪಂದದ ಬಗ್ಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) ಕೂಡ ವಿಚಾರಣೆ ನಡೆಸುತ್ತಿದೆ. ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿದ ಆದೇಶದಿಂದ ಎನ್ಸಿಎಲ್ಟಿ ವಿಚಾರಣೆಗೆ ಯಾವುದೇ ಬಾಧಕ ಇಲ್ಲ ಎಂದು ಫ್ಯೂಚರ್ ಶುಕ್ರವಾರ ಹೇಳಿತ್ತು. ಒಪ್ಪಂದದ ಕುರಿತ ಆದೇಶವನ್ನು ಎನ್ಸಿಎಲ್ಟಿ ಕಾಯ್ದಿರಿಸಿದೆ.

ಫ್ಯೂಚರ್–ರಿಲಯನ್ಸ್ ಒಪ್ಪಂದವನ್ನು ಅಮೆಜಾನ್ ವಿರೋಧಿಸಿದೆ. ಆದರೆ, ಈ ಒಪ್ಪಂದಕ್ಕೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ), ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಹಾಗೂ ಷೇರುಪೇಟೆಗಳ ಅನುಮೋದನೆ ಈಗಾಗಲೇ ದೊರೆತಿದೆ. ಎನ್ಸಿಎಲ್ಟಿ ಆದೇಶ ಹಾಗೂ ಕಂಪನಿಯ ಷೇರುದಾರರ ಅನುಮತಿ ಸಿಗಬೇಕಿದೆ.

ರಿಟೇಲ್ ಹಾಗೂ ಸಗಟು ಮಾರಾಟ ವಿಭಾಗವನ್ನು ರಿಲಯನ್ಸ್ಗೆ ₹ 24,713 ಕೋಟಿ ಮೊತ್ತಕ್ಕೆ ಮಾರುವುದಾಗಿ ಫ್ಯೂಚರ್ ಸಮೂಹವು 2020ರ ಆಗಸ್ಟ್ ಕೊನೆಯಲ್ಲಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.