ಮುಂಬೈ: ಚಿನ್ನಾಭರಣಗಳನ್ನು ಅಡ ಇಟ್ಟು ಪಡೆಯುವ ಸಾಲದ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶೇಕಡ 90ರಷ್ಟಕ್ಕೆ ಹೆಚ್ಚಿಸಿದೆ.

ಈಗಿರುವ ನಿಯಮಗಳ ಅಡಿ, ಚಿನ್ನಾಭರಣಗಳ ಮೌಲ್ಯದ ಶೇಕಡ 75ರಷ್ಟರವರೆಗೆ ಕೃಷಿಯೇತರ ಉದ್ದೇಶಕ್ಕೆ ಸಾಲ ನೀಡಲು ಅವಕಾಶ ಇದೆ. ‘ಕೋವಿಡ್–19 ಕಾರಣದಿಂದಾಗಿ ಕುಟುಂಬಗಳ ಮೇಲೆ ಆಗಿರುವ ದುಷ್ಪರಿಣಾಮ ತಗ್ಗಿಸಲು, ಚಿನ್ನಾಭರಣಗಳನ್ನು ಅಡ ಇರಿಸಿ ಪಡೆಯುವ ಸಾಲದ ಮಿತಿಯನ್ನು ಹೆಚ್ಚಿಸಲಾಗುತ್ತಿದೆ’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. ಈ ಹೆಚ್ಚಳವು 2021ರ ಮಾರ್ಚ್ 31ರವರೆಗೆ ಜಾರಿಯಲ್ಲಿ ಇರಲಿದೆ.

ದಾಖಲೆ ಏರಿಕೆ: ನವದೆಹಲಿಯಲ್ಲಿ ಚಿನ್ನದ ಬೆಲೆಯು ಗುರುವಾರ ದಾಖಲೆಯ ಮಟ್ಟವನ್ನು ತಲುಪಿದೆ. ಪ್ರತಿ 10 ಗ್ರಾಂಗೆ ₹ 225ರಷ್ಟು ಏರಿಕೆ ಕಂಡ ಚಿನ್ನವು, ₹ 56,590ಕ್ಕೆ ತಲುಪಿದೆ. ಪ್ರತಿ ಕೆ.ಜಿ. ಬೆಳ್ಳಿಯ ಬೆಲೆಯು ₹ 1,932ರಷ್ಟು ಹೆಚ್ಚಳವಾಗಿ ₹ 75,755ಕ್ಕೆ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.