ಮುಂಬೈ: ಒಂದು ಬಟನ್ ಕ್ಲಿಕ್ ಮಾಡಿದರೆ ಚಿನ್ನದ ನಾಣ್ಯ ನೀಡುವ ಎಟಿಎಂ ಯಂತ್ರವು ಹೈದರಾಬಾದ್‌ನಲ್ಲಿ ಕಾರ್ಯ ಆರಂಭಿಸಿದೆ. ಇದು ನೋಡಲು, ನಗದು ನೀಡುವ ಎಟಿಎಂ ಯಂತ್ರದಂತೆಯೇ ಕಾಣುತ್ತದೆ.

ಈ ಯಂತ್ರವು 0.5 ಗ್ರಾಂನಿಂದ ಗರಿಷ್ಠ 100 ಗ್ರಾಂ ಇರುವ ಚಿನ್ನದ ನಾಣ್ಯವನ್ನು ಗ್ರಾಹಕರಿಗೆ ನೀಡುತ್ತದೆ. ಗೋಲ್ಡ್‌ಸಿಕ್ಕ ಕಂಪನಿ ಈ ಯಂತ್ರವನ್ನು ಅಳವಡಿಸಿದೆ.

‘ಚಿನ್ನದ ನಾಣ್ಯ ಬೇಕಿರುವವರು ಆಭರಣ ಮಳಿಗೆಗಳಿಗೆ ಹೋಗುವ ಬದಲು ಈ ಎಟಿಎಂ ಯಂತ್ರ ಇರುವಲ್ಲಿಗೆ ಬಂದು ನಾಣ್ಯ ಪಡೆದುಕೊಳ್ಳಬಹುದು’ ಎಂದು ಗೋಲ್ಡ್‌ಸಿಕ್ಕ ಕಂಪನಿಯ ಉಪಾಧ್ಯಕ್ಷ ಪ್ರತಾಪ್ ಹೇಳಿದ್ದಾರೆ.

ಈ ಯಂತ್ರವು ಕಳೆದ ಶನಿವಾರದಿಂದ ಸೇವೆಗೆ ಮುಕ್ತವಾಗಿದ್ದು ಒಂದು ಬಾರಿ ಗರಿಷ್ಠ ಐದು ಕೆ.ಜಿ. ಚಿನ್ನವನ್ನು ಇರಿಸಿಕೊಳ್ಳಬಲ್ಲದು.

ಕಾರ್ಡ್ ಬಳಸಿ ಹಣ ಪಾವತಿಸುವುದು ಹಾಗೂ ಚಿನ್ನದ ನಾಣ್ಯ ಖರೀದಿಸುವುದು ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಮುಗಿಯುತ್ತದೆ ಎಂದು ಗ್ರಾಹಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.