ಬೆಂಗಳೂರು: ಅತಿವೇಗದ ಎರಡು ರೈಲುಗಳ ವಿನ್ಯಾಸ ಹಾಗೂ ತಯಾರಿಕೆಗೆ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಅಧೀನಕ್ಕೆ ಸೇರಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್) ₹866.87 ಕೋಟಿ ಮೌಲ್ಯದ ಗುತ್ತಿಗೆ ಲಭಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಮಂಗಳವಾರ ತಿಳಿಸಿದೆ.

‘ಪ್ರತಿ ರೈಲು ಎಂಟು ಬೋಗಿಗಳನ್ನು ಒಳಗೊಂಡಿದೆ. ಗಂಟೆಗೆ 249 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಮುಂಬೈ ಹಾಗೂ ಅಹಮದಾಬಾದ್ ನಡುವೆ ನಿರ್ಮಿಸಲಾಗುತ್ತಿರುವ ಅತಿವೇಗದ ರೈಲ್ವೆ ಕಾರಿಡಾರ್ನಲ್ಲಿ (ಬುಲೆಟ್ ರೈಲು ಯೋಜನೆ) 2027ರಿಂದ ಬಳಸಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ಮಾದರಿಯ ಒಂದು ರೈಲಿನ ವೆಚ್ಚ ₹27.86 ಕೋಟಿಯಾಗಲಿದೆ. ಇದರ ವಿನ್ಯಾಸ, ಅಭಿವೃದ್ಧಿ ಸೇರಿ ಎಲ್ಲಾ ಅನುಭವಗಳನ್ನು ಬುಲೆಟ್ ರೈಲು ಅಭಿವೃದ್ಧಿಗೆ ಬಳಸಲಾಗುವುದು’ ಎಂದು ಹೇಳಿದೆ.

‘ಭಾರತದ ಅತಿವೇಗದ ರೈಲು ಅಭಿವೃದ್ಧಿ ಯೋಜನೆಯಲ್ಲಿ ಇದು ಮೈಲುಗಲ್ಲು ಆಗಲಿದೆ. ಸ್ವದೇಶಿ ನಿರ್ಮಿತ ರೈಲು ಇದಾಗಲಿದೆ. ಈ ರೈಲನ್ನು ಬೆಂಗಳೂರಿನಲ್ಲಿ ಕಂಪನಿಗೆ ಸೇರಿದ ರೈಲ್ವೆ ಕೋಚ್ ಸಂಕೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. 2026ರ ಅಂತ್ಯಕ್ಕೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ’ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.