ನವದೆಹಲಿ: ಅಮೆರಿಕದ 29 ಸರಕುಗಳಿಗೆ ಭಾರತ ಸರ್ಕಾರ ವಿಧಿಸಿರುವ ಗರಿಷ್ಠ ಆಮದು ಸುಂಕವು ಸೆಪ್ಟೆಂಬರ್ 18 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಜೂನ್ನಲ್ಲಿ ಹೊರಡಿಸಿದ್ದ ಅಧಿಸೂಚನೆಯಂತೆ ಶನಿವಾರದಿಂದ (ಆಗಸ್ಟ್ 4) ಸುಂಕ ಅನ್ವಯವಾಗಬೇಕಿತ್ತು. ಆದರೆ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆಉಭಯ ದೇಶಗಳ ಮಧ್ಯೆ ಸಕಾರಾತ್ಮಕ ಮಾತುಕತೆ ನಡೆಯುತ್ತಿರುವುದರಿಂದ ಜಾರಿ ಅವಧಿಯನ್ನು 45ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾರ್ಚ್ 9 ರಂದು ಉಕ್ಕು ಮತ್ತು ಅಲ್ಯುಮಿನಿಯಂ ಸರಕುಗಳ ಮೇಲೆ ಗರಿಷ್ಠ ಸುಂಕ ವಿಧಿಸುವ ನಿರ್ಧಾರ ಘೋಷಿಸಿದರು.

ಇದಕ್ಕೆ ಪ್ರತ್ಯುತ್ತರವಾಗಿ ಭಾರತಬೇಳೆಕಾಳು, ಕಬ್ಬಿಣ, ಉಕ್ಕು ಉತ್ಪನ್ನಗಳನ್ನೂ ಒಳಗೊಂಡು ಅಮೆರಿಕದಿಂದ ಆಮದಾಗುವ ಒಟ್ಟು 29 ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.