ಬೆಂಗಳೂರು: ಎಚ್‌ಪಿ ಇಂಡಿಯಾ ಕಂಪನಿಯು ಭಾರತದಲ್ಲಿ ‘ಎಚ್‌ಪಿ ಕ್ರೋಮ್‌ಬುಕ್ ಎಕ್ಸ್360 14ಎ’ ಬಿಡುಗಡೆ ಮಾಡುವ ಮೂಲಕ ತನ್ನ ಕ್ರೋಮ್‌ಬುಕ್ ವಿಭಾಗವನ್ನು ಇನ್ನಷ್ಟು ವಿಸ್ತರಿಸಿದೆ. ಇದರ ಬೆಲೆ ₹ 29,999.

ಈ ಕ್ರೋಮ್‌ಬುಕ್, ಇಂಟೆಲ್ ಸೆಲೆರಾನ್ ಪ್ರೊಸೆಸರ್ ಹೊಂದಿದ್ದು, 4 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳ ಅಗತ್ಯವನ್ನು ಈಡೇರಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯು ತಿಳಿಸಿದೆ.

14 ಇಂಚಿನ ಎಚ್‌ಡಿ ಟಚ್ ಡಿಸ್‌ಪ್ಲೇ ಇದೆ. 14 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ.4ಜಿಬಿ ರ್‍ಯಾಮ್ ಮತ್ತು 64ಜಿಬಿ ಇಎಂಎಂಸಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಇಂದಿನ ಹೈಬ್ರಿಡ್ ಕಲಿಕೆಯ ವಾತಾವರಣದಲ್ಲಿ ಈ ಹೊಸ ಕ್ರೋಮ್‌ಬುಕ್ ಹೆಚ್ಚು ಉಪಯುಕ್ತವಾಗಿದೆ. ಹಗುರಾಗಿರುವ ಜೊತೆಗೆ ತೆಳುವಾಗಿಯೂ ಇದೆ ಎಂದು ಎಚ್‌ಪಿ ಇಂಡಿಯಾದ ಹಿರಿಯ ನಿರ್ದೇಶಕ ವಿಕ್ರಂ ಬೇಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.