ಮುಂಬೈ: ‘ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ 2023’ ಬಿಡುಗಡೆಯಾಗಿದ್ದು, ಈ ವರದಿ ಪ್ರಕಾರ ಭಾರತದಲ್ಲಿ ಬರೋಬ್ಬರಿ 66 ಶತಕೋಟ್ಯಾಧಿಪತಿಗಳು (ಬಿಲಿಯನೇರ್) ವಾಣಿಜ್ಯ ನಗರಿ ಮುಂಬೈ ಒಂದರಲ್ಲೇ ಇದ್ದಾರೆ.

ನವದೆಹಲಿ 39 ಬಿಲಿಯನೇರ್‌ಗಳ ತವರಾಗಿದ್ದರೇ, ಬೆಂಗಳೂರಲ್ಲಿ 21 ಬಿಲಿಯನೇರ್‌ಗಳು ನೆಲೆಸಿದ್ದಾರೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಒಟ್ಟು 181 ಕುಬೇರರು ಇದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳು ಇರುವ ಮೂರನೇ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಿದೆ ಎಂದು ತಿಳಿಸಿದೆ.

ಗ್ರಾಹಕ ಸರಕು ಉತ್ಪಾದನೆ ವಲಯದ ನಂತರ ಆರೋಗ್ಯ ಕ್ಷೇತ್ರದಲ್ಲಿನ ಬಿಲಿಯನೇರ್‌ಗಳು ಪಟ್ಟಿಯಲ್ಲಿ ಹೆಚ್ಚಿನ ಸ್ಥಾನದಲ್ಲಿದ್ದಾರೆ.

ಅದಾನಿ ಗ್ರೂಪ್‌ನ ಗೌತಮ್ ಅದಾನಿ ಸ್ಥಾನ ಕುಸಿತಗೊಂಡಿದ್ದು, ಅವರು ಜಗತ್ತಿನ 11 ನೇ ಶ್ರೀಮಂತ ಎನಿಸಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರಿಯ ಮುಕೇಶ್ ಅಂಬಾನಿ ಜಗತ್ತಿನ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ.

ಇನ್ನೊಂದು ವಿಶೇಷವೆಂದರೆ ಬೈಜುಸ್ ಕಂಪನಿ ಸಹ ಸ್ಥಾಪಕ ಹಾಗೂ ಸಿಇಒ ರವೀಂದ್ರನ್ ಅವರು ಜಗತ್ತಿನಲ್ಲೇ ಶೈಕ್ಷಣಿಕ ವಲಯದ ಎರಡನೇ ಅತಿದೊಡ್ಡ ಉದ್ಯಮಿ ಎಂದು ಗುರುತಿಸಲ್ಪಟ್ಟಿದ್ದಾರೆ. ಈ ಕುರಿತು ಟೈಮ್ಸ್‌ನೌನ್ಯೂಸ್.ಕಾಮ್ ವರದಿ ಮಾಡಿದೆ.

ಕಾಂತಾರ ಸೆಕೆಂಡ್ ಪಾರ್ಟ್ ಬರವಣಿಗೆ ಆರಂಭ: ಹೊಂಬಾಳೆ ಫಿಲ್ಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.