ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಭಾರತದಿಂದ ಹೊರ ದೇಶಗಳಿಗೆ 400 ಬಿಲಿಯನ್ ಡಾಲರ್(ಅಂದಾಜು ₹30.49 ಲಕ್ಷ ಕೋಟಿ ) ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ದೇಶದ ‘ಆತ್ಮನಿರ್ಭರ ಭಾರತ’ ಪ್ರಯಾಣದಲ್ಲಿ ಇದೊಂದು ಮಹತ್ತರ ಮೈಲುಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷ ಮುಕ್ತಾಯಕ್ಕೆ 9 ದಿನಗಳು ಉಳಿದಿರುವಂತೆ ಸರಕು ರಫ್ತು ಪ್ರಮಾಣವು ಈವರೆಗಿನ ದಾಖಲೆಯ ಮಟ್ಟ ತಲುಪಿದೆ. 2022ರ ಮಾರ್ಚ್ ವರೆಗೂ ರಫ್ತು ಮಾಡಲಾಗಿರುವ ಸರಕು ಮೌಲ್ಯವು ಶೇಕಡ 37ರಷ್ಟು ಹೆಚ್ಚಳ ಕಂಡಿದ್ದು, 400 ಬಿಲಿಯನ್ ಡಾಲರ್ ತಲುಪಿದೆ. 2020–21ನೇ ಸಾಲಿನಲ್ಲಿ 292 ಬಿಲಿಯನ್ ಡಾಲರ್ ಮೊತ್ತದ ಸರಕು ರಫ್ತು ಮಾಡಲಾಗಿತ್ತು.

'ಭಾರತವು 400 ಬಿಲಿಯನ್ ಡಾಲರ್ ಸರಕು ರಫ್ತು ಗುರಿಯನ್ನು ಇದೇ ಮೊದಲ ಬಾರಿಗೆ ತಲುಪಿದೆ. ಈ ಯಶಸ್ಸಿಗಾಗಿ ನಮ್ಮ ರೈತರು, ನೇಕಾರರು, ಎಂಎಸ್‌ಎಂಇಗಳು, ತಯಾರಕರು ಹಾಗೂ ರಫ್ತುದಾರರನ್ನು ಅಭಿನಂದಿಸುತ್ತೇನೆ. ನಮ್ಮ ಆತ್ಮನಿರ್ಭರ ಭಾರತ ಪ್ರಯಾಣದಲ್ಲಿ ಇದೊಂದು ಮಹತ್ತರ ಮೈಲುಗಲ್ಲಾಗಿದೆ' ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.

ಸ್ಥಳೀಯ ವಸ್ತುಗಳು ವಿಶ್ವದೆಲ್ಲೆಡೆ ತಲುಪುತ್ತಿರುವುದಾಗಿ ಟ್ಯಾಗ್ (ಲೋಕಲ್ ಗೋಸ್ ಗ್ಲೋಬಲ್– #LocalGoesGlobal) ಮಾಡಿದ್ದಾರೆ.

ಇದನ್ನೂ ಓದಿ–ಮತ್ತೆ ಏರಿದ ಪೆಟ್ರೋಲ್, ಡೀಸೆಲ್ ದರ: ಮುಂಬೈನಲ್ಲಿ ₹111 ದಾಟಿದ ಲೀಟರ್ ಪೆಟ್ರೋಲ್

ನಿತ್ಯ ಸರಾಸರಿ ಒಂದು ಬಿಲಿಯನ್ ಡಾಲರ್ ಮೌಲ್ಯದ ಹಾಗೂ ಪ್ರತಿ ತಿಂಗಳು ಸರಾಸರಿ 33 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್ ಮತ್ತು ಎಂಜಿನಿಯರಿಂಗ್ ಸರಕು, ಲೆದರ್, ಕಾಫಿ, ಪ್ಲಾಸ್ಟಿಕ್, ಸಿದ್ಧ ಉಡುಪು ಮತ್ತು ವಸ್ತ್ರಗಳು, ಮಾಂಸ ಮತ್ತು ಡೈರಿ ಉತ್ಪನ್ನಗಳು, ಮೀನು ಸೇರಿದಂತೆ ಸಮುದ್ರದ ಉತ್ಪನ್ನಗಳು ಹಾಗೂ ತಂಬಾಕು ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ.

ಇದನ್ನೂ ಓದಿ–ಹೀರೊ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಕಚೇರಿ, ನಿವಾಸದಲ್ಲಿ ಐ.ಟಿ ಶೋಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.