ಮುಂಬೈ: ಬಿಟ್ಕಾಯಿನ್ ಸೇರಿದಂತೆ ಕ್ರಿಪ್ಟೊಕರೆನ್ಸಿಗಳ ಬಗ್ಗೆ ದೇಶದಾದ್ಯಂತ ಭಾರಿ ಚರ್ಚೆ ನಡೆಯುತ್ತಿದ್ದು, ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಬಳಸಿ ಪಾವತಿ ಅಥವಾ ವಹಿವಾಟು ನಡೆಸುವುದಕ್ಕೆ ನಿಷೇಧ ಹೇರುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.

ಕ್ರಿಪ್ಟೋಕರೆನ್ಸಿಗಳ ಖರೀದಿ ಮತ್ತು ಮಾರಾಟಕ್ಕೆ ವೇದಿಕೆಯಾಗಿರುವ ಮಾರುಕಟ್ಟೆಗಳು (ಎಕ್ಸ್ಚೇಂಜ್ಗಳು), ಕ್ರಿಪ್ಟೋ ಕಂಪನಿಗಳು ಹಾಗೂ ಹೊಸ ಹೂಡಿಕೆದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಪ್ಲಾಟ್ಫಾರ್ಮ್ಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಆದರೆ, ಕ್ರಿಪ್ಟೋಕರೆನ್ಸಿಗಳನ್ನು ಬಂಗಾರ, ಷೇರುಗಳು ಅಥವಾ ಬಾಂಡ್ಗಳಲ್ಲಿನ ಹೂಡಿಕೆಯ ರೀತಿ ಆಸ್ತಿಯಾಗಿ ಸಂಗ್ರಹಿಸಿಡಲು ಅವಕಾಶ ನೀಡಬಹುದಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಕ್ರಿಪ್ಟೋಕರೆನ್ಸಿಯನ್ನು ಕರೆನ್ಸಿಯಾಗಿ ಪರಿಗಣಿಸುವ ಬದಲು ಆಸ್ತಿಯಾಗಿ ವರ್ಗೀಕರಿಸುವಂತೆ ಕ್ರಿಪ್ಟೋ ಸಮುದಾಯವು ಈಗಾಗಲೇ ದೇಶದ ಅಧಿಕಾರಿಗಳು, ಸಂಸ್ಥೆಗಳು ಹಾಗೂ ನಾಯಕರಲ್ಲಿ ಮನವಿ ಸಲ್ಲಿಸಿದೆ. ಈ ಮೂಲಕ ಕ್ರಿಪ್ಟೋ ಮೇಲಿನ ನಿರ್ಬಂಧ ತಪ್ಪಿಸಲು ಪ್ರಯತ್ನಿಸಲಾಗಿದೆ.

ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ಎಂಬ ‘ಮಾಯ’ಧನ: ಇದು ಅಕ್ರಮವೂ ಅಲ್ಲ, ಸಕ್ರಮವೂ ಅಲ್ಲ!

ನಿಯಂತ್ರಣಕ್ಕೆ ಒಳಪಡದಿರುವ ಕ್ರಿಪ್ಟೋ ಮಾರುಕಟ್ಟೆಗಳು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣ ಸಂದಾಯ ಮಾಡುವ ಮೂಲಗಳಾಗುವ ಕಳವಳ ವ್ಯಕ್ತವಾಗಿದೆ. ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳ ಕುರಿತಾಗಿ ಮುಂದಿನ ನಡೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ವಾರ ಸಭೆಯೊಂದನ್ನು ನಡೆಸಲಾಗಿದೆ.

ಕ್ರಿಪ್ಟೋಕರೆನ್ಸಿಗಳ ನಿಯಂತ್ರಣದ ಹೊಣೆಯನ್ನು ಸೆಬಿಗೆ ನೀಡುವ ಸಾಧ್ಯತೆ ಇರುವುದಾಗಿಯೂ ವರದಿಯಾಗಿದೆ.

ಇದನ್ನೂ ಓದಿ: ಆಳ-ಅಗಲ: ಬಿಟ್ಕಾಯಿನ್ ಮಾಯಾಬಜಾರ್, ಏನಿದು ಡಿಜಿಟಲ್ ಕರೆನ್ಸಿ? ಇಲ್ಲಿದೆ ವಿವರ

ಕ್ರಿಪ್ಟೋಕರೆನ್ಸಿಗಳಿಂದ ದೇಶದ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾಗಬಹುದು ಎಂದು ಆರ್ಬಿಐ ಕಳವಳ ವ್ಯಕ್ತಪಡಿಸಿದೆ. ಬ್ಲಾಕ್ಚೈನ್ ಡಾಟಾ ಪ್ಲಾಟ್ಫಾರ್ಮ್ನ ಚೈನ್ಅನಾಲಿಸಿಸ್ ಪ್ರಕಾರ, 2021ರ ಮೇ ವರೆಗೂ ಭಾರತದ ಡಿಜಿಟಲ್ ಕರೆನ್ಸಿ ಮಾರುಕಟ್ಟೆಯ ಮೌಲ್ಯ ಸುಮಾರು 49 ಸಾವಿರ ಕೋಟಿ ರೂಪಾಯಿ (6.6 ಬಿಲಿಯನ್ ಡಾಲರ್) ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.