ನವದೆಹಲಿ: ಕ್ಯಾಬ್ ಸೇವೆ ನೀಡುವ ಕಂಪನಿಗಳಾದ ಓಲಾ ಹಾಗೂ ಉಬರ್ ಟೆಕ್ನಾಲಜೀಸ್ ವಿಲೀನವಾಗುವ ಸಾಧ್ಯತೆ ಇದ್ದು, ಮಾತುಕತೆ ನಡೆಯುತ್ತಿದೆ ಎಂದು ಶುಕ್ರವಾರ ವರದಿಯಾಗಿದೆ.

ಓಲಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಿಷ್ ಅಗರ್ವಾಲ್ ಇತ್ತೀಚೆಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಉಬರ್ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ಹಳೆಯ ಕಾರು ಉದ್ಯಮ ಸ್ಥಗಿತಗೊಳಿಸಿದ ಓಲಾ

ವಿಲೀನ ಒಪ್ಪಂದ ಸಾಧ್ಯತೆಗೆ ಸಂಬಂಧಿಸಿದ ಹಣಕಾಸು ವಿವರಗಳನ್ನು ವರದಿ ಉಲ್ಲೇಖಿಸಿಲ್ಲ. ಈ ಕುರಿತು ಮಾಹಿತಿಗಾಗಿ ಓಲಾ ಹಾಗೂ ಉಬರ್ ಕಂಪನಿಗಳನ್ನು ‘ರಾಯಿಟರ್ಸ್’ ಸುದ್ದಿ ಸಂಸ್ಥೆ ಸಂಪರ್ಕಿಸಿದ್ದು, ಅವು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಉಭಯ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ಪ್ರಯಾಣಿಕರಿಗೆ ರಿಯಾಯಿತಿ ದರದ ಕೊಡುಗೆಗಳನ್ನು ನೀಡುವುದಕ್ಕಾಗಿಯೇ ನೂರಾರು ಕೋಟಿ ಖರ್ಚು ಮಾಡಿವೆ. ಆಹಾರೋತ್ಪನ್ನ ಮತ್ತು ದಿನಸಿ ವಸ್ತುಗಳ ವಿತರಣೆ ಸೇವೆಯನ್ನೂ ಉಭಯ ಕಂಪನಿಗಳು ಇತ್ತೀಚೆಗೆ ಆರಂಭಿಸಿದ್ದವು.

ಉಬರ್ ಕ್ಯಾಬ್ ಚಾಲಕರಿಗೆ ಕಾಣಿಸಲಿದೆ ಡ್ರಾಪ್ ಲೊಕೇಶನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.