ಗ್ರೇಟರ್ ನೊಯಿಡಾ: ರಿಲಯನ್ಸ್ ಕಂಪನಿಯು ವಿದ್ಯುತ್ ಚಾಲಿತ ವಾಹನಗಳಿಗೆ ರಿಮೂವಬಲ್ ಮತ್ತು ಸ್ವ್ಯಾಪ್ ಮಾಡುವ ಬ್ಯಾಟರಿಯನ್ನು ಅನಾವರಣ ಮಾಡಿದೆ. ಇನ್ವರ್ಟರ್ ಜೊತೆಗೆ ಗೃಹೋಪಯೋಗಿ ಸಾಧನಗಳಲ್ಲಿಯೂ ಈ ಬ್ಯಾಟರಿ ಬಳಸಬಹುದು ಎಂದು ಕಂಪನಿ ತಿಳಿಸಿದೆ.

ನವೀಕರಿಸಬಲ್ಲ ಇಂಧನಗಳಿಗೆ ಸಂಬಂಧಿಸಿದ ವಸ್ತುಪ್ರದರ್ಶನದಲ್ಲಿ ಕಂಪನಿಯು ಈ ಬಹುಉಪಯೋಗಿ ಬ್ಯಾಟರಿಯನ್ನು ಪ್ರದರ್ಶಿಸಿದೆ.

ಬ್ಯಾಟರಿಯನ್ನು ವಾಹನಗಳಿಗೆ ಬಳಸುವುದಷ್ಟೇ ಅಲ್ಲದೆ ಟಿ.ವಿ, ಮಿಕ್ಸಿ... ಹೀಗೆ ಗೃಹೋಪಯೋಗಿ ಉಪಕರಣಗಳಿಗೂ ಬಳಕೆ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಬಾರದು ಎನ್ನುವ ಷರತ್ತಿನೊಂದಿಗೆ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಲಯನ್ಸ್ನ ಬ್ಯಾಟರಿ ಸ್ವ್ಯಾಪ್ ಕೇಂದ್ರಗಳಲ್ಲಿ ಬ್ಯಾಟರಿ ಬದಲಿಸಿಕೊಳ್ಳಬಹುದು ಅಥವಾ ಮನೆಗಳಲ್ಲಿ ಸೌರ ವಿದ್ಯುತ್ ಫಲಕಗಳ ಮೂಲಕವೂ ಚಾರ್ಜ್ ಮಾಡಬಹುದು ಎಂದು ಅವರು ಹೇಳಿದ್ದಾರೆ. ಕಂಪನಿಯು ಈ ಬ್ಯಾಟರಿಗಳ ಮಾರಾಟವನ್ನು ಯಾವಾಗಿನಿಂದ ಆರಂಭಿಸಲಿದೆ ಎನ್ನುವ ಕುರಿತು ಅವರು ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.